Thursday, June 11, 2009

ಪ್ರಚಂಡ ಪಾಣಿನಿ

ಭಾರತದ ಅತೀ ಪುರಾತನವಾದ ಭಾಷೆ ಸಂಸ್ಕೃತ. ಆದರೆ ಇಂದಿನ ದಿನಗಳಲ್ಲಿ, ("ಸಂಸ್ಕೃತ ಭಾರತಿ" ಸಂಸ್ಥೆಗೆ ಜೂಡಿಸಿಕೊಂಡಿರುವವರನ್ನು ಬಿಟ್ಟರೆ) ಅದನ್ನು ಕೇಳುವವರಿಲ್ಲ. ಸಂಸ್ಕೃತ ಕಲಿಯಲು ಆಸಕ್ತಿ ಇರುವುದಿಲ್ಲ, ಆಸಕ್ತಿ ಇದ್ದರೂ ಸಮಯ ಇರುವುದಿಲ್ಲ, ಸಮಯ ಇದ್ದರೂ ಅದನ್ನು ಹೇಳಿಕೊಡುವವರು ಸಿಗೋದಿಲ್ಲ, ಎಲ್ಲಾ ಸೌಕರ್ಯಗಳೂ ಒದಗಿ ಬಂದರೂ, ಸಂಸ್ಕೃತದಿಂದ ಏನು ಪ್ರಯೋಜನ, ಎಂದು ಕೇಳುವವರೇ ಹೆಚ್ಚು. ಸಂಸ್ಕೃತ ಇಲ್ಲದೆಯೇ ಸಂಸ್ಕೃತಿ ಪೂರ್ಣವಾದೀತೇ?


ಅದು ಬಿಡಿ. ಈ "ಐಟೀ" ಯುಗದಲ್ಲಿ "ಕಂಪ್ಯೂಟರ್" ಇಲ್ಲದೆಯೇ ಕೆಲಸ ನಡೆಯದು. ಸಂಸ್ಕೃತ ಭಾಷೆ "ಕಂಪ್ಯೂಟರ್"ಗೆ ಬಹಳ ಸೂಕ್ತ ಎಂದು ಹೇಳುವುದುಂಟು. ಈ ಬ್ಲಾಗು, ಅದು ಯಾಕೆ? ಎಂದು ತಿಳಿಸುವ ಪ್ರಯತ್ನ.


"ಕಂಪ್ಯೂಟರ್"ಗೆ ಸ್ವಜ್ಞಾನ ಇರುವುದಿಲ್ಲ. ಅದನ್ನು ನಾವು "ಪ್ರೋಗ್ರಾಂ" ಮಾಡಬೇಕು. "ಪ್ರೋಗ್ರಾಂ" ಅದಕ್ಕೆ ಅರ್ಥವಾಗುವ ಭಾಷೆಯಲ್ಲಿ ಬರಿಯಬೀಕು. ಕಂಪ್ಯೂಟರ್ನಲ್ಲಿ ಅದನ್ನು ಓಡಿಸುವ ಮುಂಚೆ ಆ "ಪ್ರೋಗ್ರಾಂ"ಅನ್ನು compile ಮಾಡಬೇಕು. ಈ compilerಗೆ ಆ ಭಾಷೆಯ ವ್ಯಾಕರಣ ಅಸಂಧಿಗ್ದ (non-ambiguous) ರೀತಿಯಲ್ಲಿ ತಿಳಿದಿರಬೇಕು. ಅದಕ್ಕೆ ಆಂಗ್ಲ ಭಾಷೆಯಲ್ಲಿ "context free grammer" ಎಂದು ಹೇಳುವರು. ಒಂದು ಉದಾಹರಣೆ ಕೆಳಗೆ ನೋಡಿ.


ಆಂಗ್ಲ ಭಾಷೆಯಲ್ಲಿ ಈ ೨ ವಾಕ್ಯಗಳನ್ನೂ ನೋಡಿ.


Fruit flies like apple (ಒಂದು ಮಾದರಿಯ ಹಾರುವ ಹುಳಕ್ಕೆ ಸೇಬಿನ ಹಣ್ಣು ಇಷ್ಟ)

Time flies like arrows (ಸಮಯವು ಬಾಣದಂತೆ ಹಾರಿಹೋಗುತ್ತದೆ)


ಆಂಗ್ಲ ಭಾಷೆಯ ವ್ಯಾಕರಣದ ಜೊತೆ, ಈ ವಾಕ್ಯಗಳನ್ನು "ಕಂಪ್ಯೂಟರ್"ಗೆ feed ಮಾಡಿದಾಗ, "Fruit flies" ಇರುವ ಹಾಗೆ "time flies" ಕೂಡ ಒಂದು ಬಗೆಯ ಹಾರುವ ಹುಳ ಎಂದು "ಕಂಪ್ಯೂಟರ್" ಭಾವಿಸುವಿದು. ಯಾಕೆಂದರೆ, flies ಎಂಬ ಶಬ್ದದ ಅರ್ಥವು ಆ ಸಂದರ್ಬಕ್ಕೆ (context) ಸೀಮಿತವಾಗಿ ಬದಲಾಗುತ್ತದೆ. ಇದನ್ನು ನಮ್ಮ ಕಂಪ್ಯೂಟರ್ ಅರಿಯುವುದಿಲ್ಲ. ಆದ್ಧರಿಂದ ಆಂಗ್ಲ ಭಾಷೆ "ಕಂಪ್ಯೂಟರ್"ಗಳಿಗೆ ಸೂಕ್ತವಲ್ಲ. Simple.


ಸಂಸ್ಕೃತದಲ್ಲಿ ಈ ರೀತಿಯ ವಾಕ್ಯಗಳು ಇರುವುದಿಲ್ಲ. ಇಂತಹ ಸಂಧಿಗ್ದಾರ್ಥ (ambiguity) ರೂಪದಲ್ಲಿ ವಾಕ್ಯಗಳನ್ನು ಬಳಸಲು ಪಾಣಿನಿಯ "ಅಷ್ಟಾಧ್ಯಾಯಿ"ಯ ಸೂತ್ರಗಳು ಬಿಡುವುದಿಲ್ಲ. ಮೇಲೆ ತೋರಿಸಿದ ಆಂಗ್ಲ ವಾಕ್ಯಗಳಲ್ಲಿ flies ಎಂಬ ಪದವು ನಾಮಪದವೂ ಆಗಿರಬಹುದು ಅಥವಾ ಕ್ರಿಯಾಪದವೂ ಆಗಿರಬಹುದು (ಸಂದರ್ಬಕ್ಕೆ ತಕ್ಕಂತೆ). ಆದರೆ ಸಂಸ್ಕೃತದಲ್ಲಿ ಇದು ಸಾದ್ಯವಿಲ್ಲ. ನಾಮಪದ ಶಬ್ದಗಳು "ಸುಪ್" ಪ್ರತ್ಯಯಗಳ ಜೊತೆ ಸೇರಿ ಒಂದು ರೂಪ ತಾಳುತ್ತದೆ. ಕ್ರಿಯಾಪದದ ಧಾತುಗಳು "ತಿನ್ಗ್" ಪ್ರತ್ಯಯಗಳ ಜೊತೆ ಸೇರಿ ಬೇರೆಯೇ ರೂಪ ತಾಳುತ್ತದೆ. ಆದ್ದರಿಂದ ಪಾಣಿನಿಯ ಅಷ್ಟಾಧ್ಯಾಯಿಯ ಮೂಲಕ ವರ್ಣಿಸಲ್ಪಟ್ಟ ಸಂಸ್ಕೃತ ವ್ಯಾಕರಣವು ಪ್ರಪಂಚದ ಮೊದಲನೆಯ "context free grammer" ಎಂಬ ಸಂಶಯವೇ ಬೇಡ.


ಅಷ್ತಾಧ್ಯಾಯಿಯು ಸುಮಾರು ೪೦೦೦ ಸೂತ್ರಗಳನ್ನು ಹೊಂದಿದೆ. ಸಂಸ್ಕೃತದಲ್ಲಿ ಬಳಕೆಯಾಗುವಂತಹ ಎಲ್ಲಾ ಅಂಶಗಳೂ ಇದರ ಆದಾರದ ಮೇಲೆಯೇ ನಡೆಯಬೇಕು. ಇಲ್ಲದಿದ್ದರೆ ಅದು "gramatically incorrect". ಪ್ರಪಂಚದ ಯಾವುದೇ ನಾಮಪದವಾದರೂ ಅದು ವಿಭಕ್ತಿ ಪ್ರತ್ಯಯಗಳ (ಉ, ಅನ್ನು, ಇಂದ ...) ಜೊತೆ ಸೇರಿ ಯಾವ ಯಾವ ರೂಪ ತಾಳುವುದು, ಕ್ರಿಯಾಪದಗಳ ರೂಪಗಳು ಯಾವ ಯಾವ ಕಾಲದಲ್ಲಿ ಹೇಗಿರಬೇಕು, ಸಂಧಿ-ಸಮಾಸ ಗಳ ವಿವರ, ವಾಕ್ಯಗಳಲ್ಲಿನ ಛಂದಸ್ಸು, ಅಲಂಕಾರ ಎಲ್ಲವೂ ಕೇವಲ ೨೦೦೦ ಸೂತ್ರಗಳಲ್ಲಿ ತಿಳಿಸಿದೆ. ಎಂಥಹ ತಲೆ ಸ್ವಾಮೀ ಈ ಪಾಣಿನಿಯದು.


ನಿಮಗೆ ಗೊತ್ತೇ? ಅಷ್ತಾಧ್ಯಾಯಿಯಲ್ಲಿ ಯಾವ ಯಾವ ಅಕ್ಷರಗಳು ಶರೀರದ ಯಾವ ಯಾವ ಬಾಗದಿಂದ ಉತ್ಪತ್ತಿ ಆಗುವುದೆಂದು ತಿಳಿಸಿದೆ. ಉದಾಹರಣೆಗೆ "ಅಕುಹವಿಸರ್ಜನೀಯಾನಾಂ ಕಂಠಃ" ಎಂದರೆ ಅ, ಕ-ವರ್ಗ, ಹ ಅಕ್ಷರಗಳು ಕಂಠದಿಂದ ಉತ್ಪತ್ತಿಯಾಗುತ್ತದೆ. ಎಷ್ಟು ಸುಲಭ ಅಲ್ವೇ ಇದು? ನೀವೂ ಯಾಕೆ ಸಂಸ್ಕೃತವನ್ನು ಕಲಿಯಬಾರದು?

2 comments:

narasimha said...

namaskaara nimma ee prayatna tuMbaa cennaagide kannadadalli hEge bareyuvudu tilisi.

ರಾಜೀವ said...

ಧನ್ಯವಾದಗಳು ಲಹರಿ. ಬ್ಲಾಗ್ "editor"ನಲ್ಲಿ "Type in Kannada" ಒಪ್ಶನ್ ಸೆಲೆಕ್ಟ್ ಮಾಡಬಹುದು. ಬೇರೆಯ "editor"ಗಳಲ್ಲಿ ಕನ್ನಡದಲ್ಲಿ ಬರೆಯಬೇಕಾದರೆ, ಇಲ್ಲಿ (http://www.google.com/transliterate/indic/Kannada) ಟೈಪ್ ಮಾಡಿ ಬೇಕಿದ್ದ ಕಡೆ copy-paste ಮಾಡಿ.