Monday, August 3, 2009

ಸಂಡಾಸಿನಲ್ಲೂ ಗೊಣಗಾಟ


ಇತ್ತೀಚಿಗೆ ನಮ್ಮ ವಿಜಯ ಕರ್ನಾಟಕದಲ್ಲಿ ಬರುವ "ಕಾಲ್ ವೈಟಿಂಗ್" ಲೇಖನ ಓದುತ್ತಿದ್ದರೆ, ಹಲವಾರು ವರುಷದ ಹಿಂದೆ ನನಗೆ ಅನಿಸಿದ ಭಾವನೆಗಳನ್ನು ಹೇಳಿದಂತಿದೆ. ಈ ಮೊಬೈಲ್ ಫೋನ್ ಎಂಬ ವಸ್ತು ಯಾಕಪ್ಪಾ ಕಂಡುಹಿಡಿದರು ಅಂತ ಕೇಳ್ತಿದ್ದೆ.

ಈಗಿನ ಕಾಲದಲ್ಲಿ ಶಾಲೆಗೆ ಹೋಗುವ ಮಕ್ಕಳಲ್ಲಿ ಮೊಬೈಲ್ ಫೋನ್ ಇರುತ್ತದೆ. ಅದು ಸೇರಿಯೂ ತಪ್ಪೋ ಎಂಬುದೇ ದೊಡ್ಡ ಚರ್ಚೆ. ಶಾಲೆಗೆ ಮೊಬೈಲ್ ಫೋನ್ ತೆಗೆದುಕೊಂಡು ಹೋಗುವುದು ನಿರಾಕರಿಸಿದರೂ, ಹೊರಗೆ ಮಕ್ಕಳಲ್ಲಿ ಮೊಬೈಲ್ ಫೋನ್ ಇದ್ದೇ ಇರುತ್ತದೆ. ಪಾಪ ಮಕ್ಕಳು ಅಷ್ಟು ಹಠ ಹಿಡಿದರೆ ತಂದೆ ತಾಯಂದಿರು ಏನು ತಾನೇ ಮಾಡಬಲ್ಲರು.

ನಾನು ಓದಬೇಕಾದರೆ, ನನಗೆ ಈ ಮೊಬೈಲ್ ಫೋನ್ ಎಂಬ ಮಾಯಾ ಯಂತ್ರ ಇದೆ ಎಂದೇ ತಿಳಿದಿರಲಿಲ್ಲ. ಗೊತ್ತಿದ್ದರೆ ನಾನು ಹಠ ಹಿಡಿದು ದಕ್ಕಿಸಿಕೊಳ್ಳುತ್ತಿದ್ದೇನೋ ಏನೋ. ಬರಿ ಬಿಸಿನೆಸ್ ಮಾನ್ಗಳು ಉಪಯೋಗಿಸುವ ವಸ್ತು ಎಂದೇ ನಂಬಿದ್ದೆ. ಶಾಲೆ ಮುಗಿದು ಕಾಲೇಜ್ ಮೆಟ್ಟಲು ಹತ್ತಿದಾಗಲೂ ಇದು ನನಗೆ ತಿಳಿಯಲಿಲ್ಲ. ಅಷ್ಟು ಪೆದ್ದನಾಗಿದ್ದೆ ನಾನು. ಇಂಜಿನಿಯರಿಂಗ್ ಪದವಿ ಪಡೆದು ಕೆಲಸಕ್ಕೆ ಸೇರಿದಾಗಲೂ ಈ ವಿಷಯ ನನಗೆ ಅರಿವಾಗಲಿಲ್ಲ. ಕೆಲ್ಸಕ್ಕೆ ಸೇರಿ ೬ ವರುಷ ತುಂಬಿದರೂ ನನ್ನ ಹತ್ತಿರ ಈ ಮಾಯಾ ಯಂತ್ರ ಇಲ್ಲದಿದ್ದು ನೋಡಿ ಹಾಸ್ಯ ಮಾಡಿದ್ದು ಅದೆಷ್ಟು ಜನ? ಆದರೂ ನಾನು ಬಗ್ಗಲಿಲ್ಲ. ಜನರು ಇದರ ಜೊತೆ ಸರಸವಾಡುತ್ತಿದ್ದ ರೀತಿ ನೋಡಿ ನನಗೆ ಇದನ್ನು ಕೊಳ್ಳಲೇಬಾರದೆಂದು ತೀರ್ಮಾನಿಸಿದ್ದೆ. ಎಲ್ಲಿ ಹೋದರೂ ಬಿಡದ ಈ ವಸ್ತು, ಟಾಯಿಲೆಟ್ಗೆ ಹೋದರೂ ಬಿಡುವುದಿಲ್ಲ. ಕಮೋಡ್ ಮೇಲೇ ಕೂತು ಘಂಟಘಟ್ಟಲೆ ಹರಟೆ ಹೊಡೆಯುತ್ತಾರೆ. ಯಾಕಪ್ಪಾ ಬೇಕು ಈ ಪಝೀತಿ ಅಂತಿದ್ದೆ.

ಕೊನೆಗೆ ಒಂದು ವರುಷದ ಕೆಳಗೆ ಯಾವುದೂ ಕೆಲಸದ ವಿಚಾರವಾಗಿ ಒಂದು ಮೊಬೈಲ್ ಫೋನು ಕೊಳ್ಳಬೇಕಾಯಿತು. ಈಗ ಆ ಕೆಲಸ ಮುಗಿದಿದೆ ಆದರೆ ಮೊಬೈಲ್ ಫೋನು ಇನ್ನು ತೊಲಗಿಲ್ಲ. ಸಮಯಕ್ಕೆ ಉಪಯೋಗ ಬಂದರೂ, ಇದೊಂತರಾ ಬಿಸಿ ತುಪ್ಪ ಇದ್ದಹಾಗೆ.

ಬಹಳ ಹಿಂದೆ ನನ್ನ ಆತ್ಮೀಯರಾದ ನರಸಿಂಹ ಮೂರ್ತಿಯವರು, ಮೊಬೈಲ್ ಫೋನ್ ಕುರಿತು ಬರೆದ ಒಂದು ಪದ್ಯ ಹೀಗಿದೆ.

ಒಳಕರೆಯ ಕೆರೆತ, ಕೆರೆದರೆ ನೆವೆ ಹೆಚ್ಚು
ಮಾತಿನ ಅಕ್ಕಿಯ ಮೇಲಿನ ಆಸೆ
ಮುದ್ದುಮಣಿಯ ಮುದ್ದಾಡಲು ಕಳ್ಳರ ಕಾಟ
ನಲ್ಲೆಯ ಇಂಚರ ಎದೆಯ ಡಮರು ನಾದ
ಅಧಿಕಾರಿಯ ಕರೆ ಅಡಕತ್ತರಿಯ ಅಡಿಕೆ
ಸಂಡಾಸಿನಲ್ಲೂ ಗೊಣಗಾಟ.

ನೀವೇ ಹೇಳಿ. ಇದು ಬೇಕೆ?

15 comments:

Ittigecement said...

ರಾಜೀವ್....

ನೀವು ಅಂದಿದ್ದು ನಿಜ...
ಮೊಬೈಲ್ ಬಿಸಿ ತುಪ್ಪದ ಹಾಗೆ....

ರಾತ್ರಿ ಹನ್ನೆರಡು ಗಂಟೆಗೆ ಒಬ್ಬರು ಫೋನ್ ಮಾಡಿ...
"ಏನು ಹೆಗಡೆಯವರೆ ... ಮಲಗಿದ್ರಾ...?
ಫೋನ್ ಮಾಡಿದ್ದಕ್ಕೆ ತೊಂದರೆ ಆಯ್ತಾ...?"
ಅಂದರೆ ಏನು ಮಾಡುವದು...

ಎಷ್ಟು ಕೆಲಸವೊ ಅಶ್ಟು ಮಾತಾಡುವದನ್ನು ಬಿಟ್ಟು...
"ಊಟ ಆಯ್ತಾ..?
ತಿಂಡಿ ಆಯ್ತಾ?"
ಅನ್ನುವದಕ್ಕೆ ಹೆಚ್ಚಾಗಿ ಉಪಯೋಗ ಆಗ್ತಾ ಇದೆ....

ಅನಾವಶ್ಯಕ ಮಾತಾಡುವದಕ್ಕೆ ಇದು ಅತ್ಯವಶ್ಯಕವಾಗಿದೆ....

ಬಾಲು said...

ಮೊಬೈಲ್ ಒಂಥರಾ ಬಿಡೆವೆನಂದರು ಬಿಡದೀ ಮಾಯೆ!!

ಮೊಬೈಲ್ ಎಷ್ಟು ಕಿರಿ ಕಿರಿ ಮಾಡುತ್ತೆ ಅಂದ್ರೆ, ನಮ್ಮ ಪ್ರೈವಸಿ ನೆ ನಾಪತ್ತೆ ಆಗ್ತಾ ಇದೆ, ಆದ್ರೆ ನಾವು ಇದಕ್ಕೆ ಹೇಗೆ ಅಡಿಕ್ಟ್ ಆಗಿದ್ದಿವಿ ಅಂದ್ರೆ "ಯಾರದ್ರು ಕಾಲ್ ಮಾಡಿದಾಗ ಬೈಕೊತಿವಿ, ಆದೆ ತರ ಯಾರು ಕಾಲ್ ಮಾಡದೇ ಇದ್ರೂ ಬೈಕೊತಿವಿ".!!!

Guruprasad said...

ಇದು ಒಂದು ತರ ಅವಿಬಾಜ್ಯ ಅಂಗ ಆಗಿ ಬಿಟ್ ಇದೆ.... ಎಷ್ಟು ಉಪಯೋಗ ಇದೆಯೋ ಅಸ್ಟೇ.... ಅನನುಕೂಲಗಳು ಇದೆ.......ಏನ್ ಮಾಡೋದು,,,ಅಡಿಕ್ಟ್ ಆಗಿ ಬಿಟ್ ಇದ್ದಿವಲ್ವ......:-)

shivu.k said...

ರಾಜೀವ್ ಸರ್,

ನೀವು ಹೇಳಿದಂತೆ ಇದು ಬೇಕಾ ಅಂತ ಕೇಳಿದ್ರೆ ನಾನು ಬೇಡ ಅಂತೀನಿ. ಆದ್ರೆ ಮನಸ್ಸಿನಲ್ಲಿ ಬೇಕು ಅಂತೀನಿ.

ಮೊಬೈಲು ಕಾಟ ಜಾಸ್ತಿಯಾಗಿದ್ದರೂ ಅದಕ್ಕೆ ಎಷ್ಟು ಗುಲಾಮರಾಗಿದ್ದೀವಿ ಅಂದ್ರೆ ಸಂಡಾಸ್ನಲ್ಲಿ ಕೂತಾಗ ಅದು ಸರಿಯಾಗಿ ಆಗಬೇಕಾದ್ರೆ ಒಂದಷ್ಟು ಹೊತ್ತು ಮೊಬೈಲಿನಲ್ಲಿ ಖಂಡಿತ ಮಾತಾಡುತ್ತಿದ್ದರೇ ಅದು ಸರಾಗ ಅನ್ನುವಷ್ಟರ ಮಟ್ಟಿಗೆ...ಏನಂತೀರಿ..

Srinivas Girigowda said...

ಪ್ರಿಯ ಮಿತ್ರ ರಾಜೀವ್....

ನಾನು ಕೂಡ ಬಿ.ಇ. ಪದವಿ ಮುಗಿಸಿ ಕೆಲಸದ ಉದ್ದೇಶದಿಂದ ಒಂದು ಜಂಗಮ ಗಂಟೆ(ಮೊಬೈಲ್)ನ್ನು ನನ್ನದಾಗಿಸಿಕೊಂಡೆ. ಅಂದಿನ ದಿನಗಳಲ್ಲಿ ನಿಮ್ಮಹತ್ರ ಮೊಬೈಲ್ ಇಲ್ಲದಿರುವುದು ನನಗು ಕೂಡ ಆಶ್ಚರ್ಯ ತಂದಿತ್ತು. ಇಂದಿನ ಕೆಲಸಕ್ಕೆ, ತಂದೆ ತಾಯಿಯಿಂದ ದೂರವಿರುವ ಮಕ್ಕಳಿಗೆ ಹಾಗೂ ಇನ್ನೂ ಹಲವಾರು ಕಾರಣಗಳಿಗೆ ಮೊಬೈಲ್ ಅನಿವಾರ್ಯವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಮೊಬೈಲ್ ದುರುಪಯೋಗ ಅದರಲ್ಲೂ ವಿದ್ಯಾರ್ಥೀಗಳಿಂದ, ಕೇಳಿ ಬಹಳ ಬೇಜಾರಾಗುತ್ತೆ. ಇಂದು ಮೊಬೈಲ್ ನಿಂದ ಹತ್ತಿರವಾದರೂ ಮನಸ್ಸುಗಳಿಂದ ದೂರವಾಗುತ್ತಿದ್ದೇವೆ.

ಯಾವುದೇ ಯಾಂತ್ರಿಕ ಸಾಧನವಾದರೂ ಸರಿ ಅದರ ಉಪಯೋಗಪಡೆಯುವುದು ಉಪಯೋಗಿಸುವರ ಜಾಣ್ಮೆಯಲ್ಲಿರುತ್ತದೆ. ಮಿತಿ ಮೀರಿದರೆ ಅಪಾಯ ಖಂಡಿತ.

ರೂpaश्री said...

ರಾಜೀವ್ ಅವರೆ,
ಮೊಬೈಲ್ ಎಂಬುದು ಈಗ ಅವಶ್ಯಕತೆ, ಅನುಕೂಲತೆಯನ್ನು ಮೀರಿ ಫ್ಯಾಷನ್ ಸಾಧನ ಆಗಿಬಿಟ್ಟಿದೆ.
ನನ್ನ ಮತ್ತು ನನ್ನವರ ಬಳಿ ಇನ್ನೂ ಮೊಬೈಲ್ ಇಲ್ಲ. ನಮ್ಮನ್ನು ನೋಡಿ ಮೂದಲಿಸುವವರೇ ಹೆಚ್ಚು "ಇಂಡಿಯಾದಲ್ಲೇ ಹೂಮಾರುವವಳು, ತರಕಾರಿಯವರು ಮೊಬೈಲ್ ಇಟ್ಟ್ ಕೊಡಿದ್ದಾರೆ, ನೀವ್ಯಾಕೆ ಅಮೇರಿಕಾದಲ್ಲಿದ್ದೂ ಕಂಜೂಸ್ತನ ಮಾಡ್ತೀರಾ?" ಅಂತ. ನಮಗೆ ಅದರ ಅವಶ್ಯಕತೆ ಸದ್ಯಕ್ಕೆ ಇನ್ನು ಒದಗಿ ಬಂದಿಲ್ಲ ಅಂದ್ರೆ ನಂಬೋರು ಕಮ್ಮಿ:-)

ರಾಜೀವ said...

ಪ್ರಕಾಶ್ ಅವರೆ,

ನಿಮ್ಮದು ಸಿಮೆಂಟು ಮರಳಿನ ಬಿಸಿನೆಸ್. ನಿಮಗೇ ಮೊಬೈಲ್ ಅನಾವಷ್ಯಕವಾದರೆ, ಒಂದು ಕಡೆ ಕೂತು ಕೆಲಸ ಮಾಡುವ ನಮಗೆ ಇದು ಯಾಕೆ? ನಿಜ ಹೇಳ್ಬೇಕು ಅಂದ್ರೆ, ನನಗೆ ದಿನನಿತ್ಯದ ಕೆಲಸದಲ್ಲಿ ಇದರ ಅವಶ್ಯಕತೆ ಇಲ್ಲ. ಆದರೆ ಕೆಲವೊಮ್ಮೆ ಬೇಕಾಗಬಹುದೆಂದು ಇನ್ನು ಇಟ್ಟುಕೊಂಡಿದ್ದೇನೆ.

ಪ್ರತಿಕ್ರಿಯೆಗೆ ಧನ್ಯವಾದ.

ರಾಜೀವ said...

ಬಾಲು,

<< ಕಾಲ್ ಮಾಡದೇ ಇದ್ರೂ ಬೈಕೊತಿವಿ >>
ಯಾರ ಕಾಲ್ಗೆ ಕಾಯುತ್ತಿದ್ದೀರ? ಮಾಯೆ ಅಂದಿದ್ದು ಮೊಬೈಲಿಗೂ ಅಥವಾ ಕಾಲ್ ಮಾಡಿದವರಿಗೋ? (ತಮಾಷೆಗೆ)

ಹೌದು. ಈ ಮಾಯಾಲೋಕದಿಂದ ಹೊರಗೆ ಬರಲು ದಾರಿ ಕಾಣಿಸುತ್ತಿಲ್ಲ.

ರಾಜೀವ said...

ಗುರು,

ಅನುಕೂಲಗಳು ಇದೆ ನಿಜ. ಆದರೆ ಮೊಬೈಲ್ ಇಟ್ಟುಕೊಂಡಿರುವ ಎಲ್ಲರಿಗೂ ಇದರ ಅವಶ್ಯಕತೆ ಇಲ್ಲ ಇಲ್ವೇ?
ಅದು ಅಂಗವಾಗಿದೆಯೋ ಅಥವಾ ನಮ್ಮನ್ನು ಮಂಗಗಳನ್ನಾಗಿ ಮಾಡುತ್ತಿದ್ದೆಯೋ ತಿಳಿಯದು.

ರಾಜೀವ said...

ಶಿವು ಸರ್,

ನೀವು "ಏನಂತೀರಿ" ಎಂದು ಕೇಳಿದರೆ, ನನಗೆ ಗೊತ್ತಿಲ್ಲ ಎಂದು ಹೇಳುತ್ತೇನೆ. ನಾನಿನ್ನು ಅದರ ಗುಲಾಮನಾಗಿಲ್ಲ. ನನ್ನ ಆ ಕೆಲಸಕ್ಕೆ ಮೊಬೈಲ್ ಬೇಡ ;-)

ಮಾತಾಡುವುದಕ್ಕೆ ಎಷ್ಟು ಅವಶ್ಯಕತೆಯೂ ಅಂತಹ ಬೇಸಿಕ್ ಮೊಬೈಲ್ ಕೊಂಡಿರುವೆ. ಸದ್ಯ, ಈ ಹೈ-ಫೈ ಮೊಬೈಲ್ ತಂಟೆಗೆ ಹೋಗಿಲ್ಲ.

ರಾಜೀವ said...

ಶ್ರೀನಿ,

ಹೌದು. ನನಗೆ ಅಂದಿನ ದಿನಗಳು ನೆನಪಿನಲ್ಲಿ ಇದೆ. ನೀವೆಲ್ಲಾ ನನ್ನನ್ನು ಯಾವುದೋ ಏಲಿಯನ್ ಎಂಬಂತೆ ನೋಡುತ್ತಿದ್ದಿರಿ. ಈಗ ನಾನೂ ನಿಮ್ಮ ದಾರಿಯೇ ಹಿಡಿದಿರುವೆ ಮೊಬೈಲ್ ಕೊಂಡು :(

ಮಕ್ಕಳಿಗೆ ಇದನ್ನು ಉಪಯೋಗಿಸುವ ಜಾಣ್ಮೆ ಎಲ್ಲಿಂದಾ ಬರಬೇಕು? ಕೇವಲ ಮನೋರಂಜನೆಗೆ ಹಠ ಹಿಡಿದು ಕೊಂಡಿರುತ್ತಾರೆ. ಇನ್ನು ಮುಂದೆ ಇನ್ನೇನೇನು ಕಾದಿದೆಯೋ?

"ಜಂಗಮ ಗಂಟೆ" ಪರಿಚಯಿಸಿದ್ದಕ್ಕೆ ಧನ್ಯವಾದ.

ರಾಜೀವ said...

ರೂಪಶ್ರೀ ಅವರೆ,

ನನ್ನ ಬ್ಲಾಗಿಗೆ ಸ್ವಾಗತ.

ನಿಮ್ಮ ಹತ್ತಿರ ಮೊಬೈಲ್ ಇಲ್ಲದಿರುವುದನ್ನು ಕೇಳಿ, ಸಂತೋಷವೂ ಆಗುತ್ತದೆ, ಅಸೂಯೆಯೂ ಆಗುತ್ತದೆ ;-)

ಹೌದು. ಇಲ್ಲಿ ರೋಡಿನಲ್ಲಿ ಕಸ ಗಿದಿಸುವವರ ಹತ್ತಿರವೂ ಮೊಬೈಲ್ ಇದೆ. ಎಲ್ಲ ಲೈಫ್-ಟೈಮ್-ಫ್ರೀ ಆಫರುಗಲ ಪ್ರಭಾವ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಅನ್ನುವ ಹಾಗೆ, ಈ ಚಿಕ್ಕ ಯಂತ್ರದಲ್ಲಿ ಎಂತಹ ಸೆಳೆಯುವ ಶಕ್ತಿ ಇದೆ ನೋಡಿ!!

ಏಕಾಂತ said...

ನಮಸ್ತೆ...
ಮೊಬೈಲ್ ಆಗಲೇ ನಮ್ಮನ್ನು ಆವರಿಸಿಕೊಂಡುಬಿಟ್ಟಿದೆ. ಕೆಲವೊಮ್ಮೆ ಕಿರಿಕಿರಿ, ಒಂದಷ್ಟು ಇರುಸು ಮುರುಸು. ಮೊಬೈಲ್ ಬೇಕೇಬೇಡವೇ? ಹಾಗಂತ ಯೋಚಿತ್ತಿರುವಾಗ ಒಂದಷ್ಟು ಮಿಸ್ ಕಾಲ್ ಬಂದು ಕೂತಿರುತ್ತೆ!
ಬ್ಲಾಗ್ ಚೆನ್ನಾಗಿದೆ. ಮತ್ತೆ ಬರೆಯಿರಿ...

Prabhuraj Moogi said...

ಸರ್ ಕಮೆಂಟು ಏನು ಬರೆಯೋದು, ನಂಬರ ಕೊಟ್ಟಿದ್ರೆ ಎಸಎಂಎಸ್ ಕಳಿಸ್ತಾ ಇದ್ದೆ!!!
ಹೆಡ್ಡಿಂಗ ಓದಿ ನಗೂ ಬಂತು :) ನಿಜ ಮೊಬೈಲ್ ಬಹಳೆ ಅವಶ್ಯಕ ವಸ್ತು ಆಗಿಬಿಟ್ಟಿದೆ, ಒಬ್ಬಬ್ಬರು ಎರಡೆರಡು ಬೇರೆ ಇಟ್ಕೊಂಡಿರ್ತಾರೆ!

ರಾಜೀವ said...

ಏಕಾಂತ,
Miss/Mrs ಕಾಲ್ಗಿಂತ missed ಕಾಲ್ ಎಷ್ಟೋ ಮೇಲು ಅಲ್ವೇ?
ನೀವೂ ಬರುತ್ತಿರಿ.

ಪ್ರಭು,
ಅದೇನು ಅವಶ್ಯಕವೋ ಗೊತ್ತಿಲ್ಲ. ಎಲ್ಲರೊಳಗೊಂದಾಗು ಮಂಕುತಿಮ್ಮ ಅಂತ ನಾನು ಇಟ್ಕೊಂಡಿದೀನಿ ಅಷ್ಟೇ.