Monday, March 1, 2010

ಉಜ್ವಲ ಪ್ರಾರಂಭ


ಸಂಜೆಗೆ ಕಾತರದಿಂದ ಎದುರು ನೋಡುತ್ತಿದ್ದೆ. ವಾತಾವರಣ ಉದ್ರೇಕದಿಂದ ಕೂಡಿತ್ತು. ಕುತೂಹಲಕ್ಕೆ ಮಿತಿಯೇ ಇರಲಿಲ್ಲ. ಹಸಿವು, ನಿದ್ದೆ ಯಾವುದೂ ಹತ್ತಿರ ಸುಳಿಯುತ್ತಿರಲಿಲ್ಲ. ಇನ್ನು ಸ್ವಲ್ಪ ಹೊತ್ತಿನಲ್ಲೇ ಪರಿಣಾಮ ತಿಳಿಯುವುದು. ಮಾಡುವುದಕ್ಕೆ ಕೆಲಸಗಳು ಬಹಳಷ್ಟಿದೆ. ಆದರೆ ಮನಸ್ಸು ಇದರಲ್ಲೇ ಮುಳುಗಿಬಿಟ್ಟಿದೆ. ಸಮಯ ರಾತ್ರಿ ೮:೩೦. ಆತಂಕದಿಂದ ಹೃದಯ ಸ್ವಲ್ಪ ವೇಗವಾಗೇ ಬಡಿದುಕೊಳ್ಳುತ್ತಿತ್ತು. ಇನ್ನೇನು ಯುದ್ಧ ಪ್ರಾರಂಭ. ಭಾರತ ಮತ್ತು ಪಾಕಿಸ್ತಾನದ ಸೈನಿಕರು ಯುದ್ಧದ ಮೈದಾನಕ್ಕೆ ಇಳಿದಾಯಿತು. ಇಷ್ಟೊತ್ತಿಗೆ ನೀವು ಊಹಿಸುರುತ್ತೀರ. ಭಾರತ ಮತ್ತು ಪಾಕಿಸ್ತಾನದ ನಡುವೆ ಆಟ. ಆದರೆ ಇದು ಕ್ರಿಕೆಟ್ ಅಲ್ಲ, ಹಾಕಿ ಪಂದ್ಯ. ವಿಷ್ವ ಹಾಕಿ ಪಂದ್ಯದ ಮೊದಲನೇ ಶ್ರೇಣಿಯ ಆಟ. ಭಾರತ ಪಾಕಿಸ್ತಾನವನ್ನು ೪-೧ ಗೋಲುಗಳ ಅಂತರದಲ್ಲಿ ಸೋಲಿಸಿತು.

ಕ್ರೀಡಾರಂಗ ತುಂಬಿ ತುಳುಕುತ್ತಿತ್ತು. ಒಂದು ಹಾಕಿ ಪಂದ್ಯವನ್ನು ನಮ್ಮ ಜನರು ಇಷ್ಟರ ಮಟ್ಟಿಗೆ ಅನುಸರಿಸುತ್ತಿದ್ದುದನ್ನು ನೋಡಿ ಸಂತಸವಾಯಿತು. ಭಾರತದಲ್ಲೇ ಹುಟ್ಟಿ ಬೆಳೆದುಬಂದ ಪಂದ್ಯವಲ್ಲದಿದ್ದರೂ, ಹಾಕಿ ನಮ್ಮ ರಾಷ್ಟ್ರೀಯ ಸ್ಪರ್ಧೆ ಎಂದು ಗುರುತಿಸಲ್ಪಟ್ಟಿದೆ. ಅದಕ್ಕೆ ಸಲ್ಲಬೇಕಾದ ಸ್ತಾನವನ್ನು ಮತ್ತೆ ಪಡೆದುಕೊಳ್ಳುತಿದೆ ಎಂಬ ಆಶಯ ಮೂಡುತ್ತಿದೆ. ಅದಕ್ಕೆ ಪ್ರತ್ಯುತ್ತರವಾಗಿ ನನ್ನೆ ಭಾರತದ ತಂಡ ತನ್ನ ಅತ್ಯುತ್ತಮ ಪ್ರದರ್ಶನದಿಂದ ನಮ್ಮನ್ನೆಲ್ಲಾ ಮೈಮರೆಸಿತು ಎಂದು ಹೇಳಿದರೆ, ಅದು ಉತ್ಪ್ರೇಕ್ಷೆಯಾಗುವುದಿಲ್ಲವೇನೋ. ಈ ಪಂದ್ಯದಲ್ಲಿ ನಮ್ಮ ಆಟಗಾರರು ತೋರಿಸಿದ ಉತ್ಸಾಹ, ದಿಟ್ಟತನ, ಪಂದ್ಯಾಟದ ಕೊನೆಯವರೆಗೂ, ಅದರ ನಂತರವೂ ಹೀಗೇ ಇರಲಿ.

ಪಾಕಿಸ್ತಾನ ನಮ್ಮ ಒಳ್ಳೆಯ ಸಹೃದಯದ ನರೆಯವ ಎಂದು ಶಾರುಕ್ ಖಾನ್ ಸಾಹೇಬರು ಬೊಬ್ಬೆ ಹೊಡದರೂ, ಜನರ ಮನಸ್ಸಿನಲ್ಲಿ ಪಾಕಿಸ್ತಾನಕ್ಕೆ ಯಾವ ಸ್ಥಾನ ಇದೆ ಎಂಬುದು ಎಲ್ಲರಿಗೂ ತಿಳಿದಂತಹ ಮಾತು. ಕ್ರೀಡೆಯನ್ನು ಸೇರಿಸಿ ಎಲ್ಲಾ ಕ್ಷೇತ್ರಗಳಲ್ಲೂ ಮುನ್ನಡೆ ಸಾಧಿಸಿ, ನಾವು ಪಾಕಿಸ್ತಾನಕ್ಕೆ ತಕ್ಕ ಪಾಠವನ್ನು ಕಲಿಸಬೇಕಾಗಿದೆ. ಅದಕ್ಕೆ ಈ ಪಂದ್ಯವೂ ಒಂದು ಭಾಗಿ. ಹೀಗೆ ಮುಂದೆ ಬರುವೆ ಪಂದ್ಯಗಳಲ್ಲೂ ಗೆಲುವನ್ನು ಸಾಧಿಸಿ, ವಿಷ್ವ ಪಂದ್ಯಾಟವನ್ನು ಮತ್ತೊಮ್ಮೆ ಗೆಲ್ಲುವಂತವರಾಗಲಿ. ಚಕ್ ದೆ ಇಂಡಿಯ.

ಚಿತ್ರ: ಅಂತರ್ಜಾಲ

11 comments:

Guru's world said...

check De INDIA....
ನಿಮ್ಮಂತೆ ನಾನು ಕೂಡ, ಕಾತುರದಿಂದ ಎದುರು ನೋಡುತ್ತಿದ್ದ ಆಟ ಇದು,, ನೆನ್ನೆಯ ಆಟ ನೋಡಿದ ಮೇಲೆ ನಮ್ಮ ಆಟಗಾರರ ಸ್ಪೂರ್ತಿ ನೋಡಿದ ಮೇಲೆ,,, ಈ ಸಲದ ವಿಶ್ವ ಕಪ್ ಹಾಕಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ನಮ್ಮದು ಒಂದು ಅಂತ ಅನ್ನಿಸದೆ ಇರದು.....
ಒಟ್ಟಿನಲ್ಲಿ, ನಮ್ಮ ಇಂಡಿಯನ್ ಹಾಕಿ ತಂಡಕ್ಕೆ ಶುಭವಾಗಲಿ ಎಂದು ಹಾರೈಸೋಣ ... ಜೈ ಇಂಡಿಯಾ ,

shivu.k said...

ರಾಜೀವ್ ಸರ್,

ನನಗೆ ಮ್ಯಾಚ್ ನೋಡಲಾಗಲಿಲ್ಲ. ಆದ್ರೆ ಟಿವಿಯಲ್ಲಿ ನ್ಯೂಸ್ ನೋಡಿ ಖುಷಿಪಟ್ಟೆ. ಇಂಥ ಗೆಲವುಗಳು ಸದಾ ಬರುತ್ತಿರಲಿ. ಹಾಕಿ ತಂಡಕ್ಕೆ ಅಭಿನಂದನೆಗಳು.

Srinivas Girigowda said...

ಭಾರತದ ಹಾಕಿ ತಂಡಕ್ಕೆ ನನ್ನ ಅಭಿನಂದನೆಗಳು.

ಸಾಗರದಾಚೆಯ ಇಂಚರ said...

ಸರ್
ಇವತ್ತು ಆಸ್ಟ್ರೇಲಿಯಾ ಜೊತೆ ಮ್ಯಾಚ್ ನೋಡ್ತಾ ಇದ್ದೆ,
ನಮ್ಮವರು ಒಂದು ಆಟದಲ್ಲಿ ಹುಲಿ, ಇನ್ನೊಮ್ಮೆ ಇಲಿ
ಒಂದೇ ರೀತಿಯ ಆಟ ಆಡೋದಿಲ್ಲ
ತುಂಬಾ ಬೇಸರ ಆಯಿತು

ರಾಜೀವ said...

ಗುರು, ಶಿವು, ಶ್ರೀನಿವಾಸ್, ಗುರುಮೂರ್ತಿ ಅವರೇ,
ಪ್ರತಿಕ್ರಿಗೆ ಧನ್ಯವಾದಗಳು.

ಮೊದಲನೆಯ ಪಂದ್ಯದ ನಂತರ ಭಾರತ ಬರೀ ಸೋಲೇ ಕಾಣುತ್ತಿದೆ. ಈ ಸಲ ಒಂದು ಗೆಲುವಿಗೇ ಸಂತುಷ್ಟರಾಗಬೇಕು. ಮುಂದಿನ ಸಲ ನೋಡುವ :(

Raghu said...

Ind Vs Pak match antu super agi ittu...
ನಿಮ್ಮವ,
ರಾಘು.

ಶಂಭುಲಿಂಗ said...

ಆರಂಭ ಶ್ರೂರತ್ವವಷ್ಟೆ. ೮ ನೇ ಸ್ಥಾನಕ್ಕೆ ಬಂದಾಯ್ತು ನಮ್ಮವರು. :).

ರಾಜೀವ said...

@ರಘು,
ಹೌದು. ಆದ್ರೆ, ಅದೊಂದೇ ಸೂಪರಾಗಿದ್ದಿದ್ದು.

@ಸುಬ್ರಹ್ಮಣ್ಯ,
ಮೊದಲನೆಯ ಪಂದ್ಯವಾದಮೇಲೆ ಬಹಳ ನೀರೀಕ್ಷೆ ಇಟ್ಟುಕೊಂಡಿದ್ದೆ. ಆದರೆ .... :-(

ವಿ.ಆರ್.ಭಟ್ said...

ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ

ಜಲನಯನ said...

Well Said...ಮನಯವರು ಆಡಿದಾಗ ಮನೆಯನು ಬೆಂಬಲಿಸೋದು ಮನೆಮರ್ಯಾದೆಗೆ ಕೋಡು ಕೊಡುವ ಹೆಜ್ಜೆ ಅದರಲ್ಲಿ ಹಿಂಜರಿಕೆ ಸಲ್ಲ....

ಬಾಲು said...

ಏನ್ ಸ್ವಾಮೀ ಇದು, ಬ್ಲಾಗ್ ನ ಮುಚ್ಚಿ ಬಿಟ್ಟಿದ್ದಿರೋ ಹೇಗೆ?