ಇದೇ ತಿಂಗಳ ೫ದನೆ ತಾರೀಕು ಜ್ಯೇಷ್ಥ ಶುದ್ದ ತ್ರಯೋದಶಿ. ನಾವೆಲ್ಲರೂ ಸ್ಮರಿಸಬೇಕಾದ ದಿನ. ಇದೇ ಜ್ಯೇಷ್ಠ ಶುದ್ದ ತ್ರಯೋದಶಿಯಂದು ಜೂನ್ ೬ನೇ ತಾರೀಕು ೧೬೭೪ ಇಸವಿಯಲ್ಲಿ ಛತ್ರಪತಿ ಶಿವಾಜಿಯು ಹಿಂದೂ ಸ್ವರಾಜ್ಯವನ್ನು ಸ್ಥಾಪಿಸಿದನು. ವಿಜಯನಗರದ ಸಾಮ್ರಾಜ್ಯದ ನಂತರ ಮೊಟ್ಟ ಮೊದಲನೆಯದಾಗಿ ಹಿಂದವಿ ಸ್ವರಾಜ್ಯ ಉದಯವಾಯಿತು. ಇದು ಬರಿ ಮಹಾರಾಷ್ಟ್ರಕ್ಕೆ ಸೀಮಿತವಾದುದಲ್ಲ, ಇಡೀ ಭಾರತಕ್ಕೆ ಅನ್ವಯಿಸುವುದು. ಬನ್ನಿ ಇವತ್ತು ಶಿವಾಜಿ ಮಹಾರಾಜರ ಆಳ್ವಿಕೆಯ ರಾಜಮುದ್ರೆಯನ್ನು ಸ್ಮರಿಸೋಣ.
ಪ್ರತಿಪಚ್ಚಂದ್ರ ರೇಖೇವ ವರ್ಧಿಷ್ನುರ್ವಿಶ್ವ ವಂದಿತಾ
ಶಾಹು ಸೂನೋ ಶಿವಸೈ ಷಾ ಮುದ್ರಾ ಭದ್ರಾಯ ರಾಜತೆ
ಶಿವಾಜಿಗೆ ಸಂಸ್ಕೃತದ ಮೇಲೆ ಇದ್ದ ಗೌರವ ಅಪಾರ. ಇದರ ಅರ್ಥ ಹೀಗಿದೆ. ಶುಕ್ಲ ಪಕ್ಷದ ಪ್ರತಿಪದೆಯ ಚಂದಿರನ ರೇಖೆಯಂತೆ, ತಂದೆ ಶಾಹಾಜಿ ಮಹಾರಾಜರ ಪುತ್ರ ಶಿವಾಜಿ ದಿನಂಪ್ರತಿ ಬೆಳೆಯುತ್ತಾ ಹೋಗುತ್ತಾನೆ. ಸ್ವರಾಜ್ಯವು ಸಮೃದ್ಧಿಯಾಗಿ ಚಂದ್ರನಂತೆ ಹೊಳೆಯುತ್ತದೆ. ವಿಶ್ವವಂದಿತವಾಗುತ್ತದೆ. ಇದೇ ಸಿದ್ಧಾಂತದ ಮೇಲೆ ಸ್ವರಾಜ್ಯದ ಜನತೆಯ ಮನೆ ಮಂದಿರಗಳಲ್ಲಿ ಭದ್ರವಾಗಿ ಮೂಡಿದ ಮುದ್ರೆ ಇದು.
ಇಂತಹ ಚಂದ್ರ ರೇಖೆ ಮತ್ತೆ ಕಾಣಿಸಬಾರದೇ?
ಆಧಾರ: ಡಾ. ರಂಗನಾಥ ಶಿಂಡೆ, ವಿಕ್ರಮ ವಾರಪತ್ರಿಕೆ, ಜೂನ್ ೭ ೨೦೦೯
Tuesday, June 16, 2009
Subscribe to:
Post Comments (Atom)
2 comments:
ರಾಜೀವ್ ಸರ್,
ನೀವು ನನ್ನ ಬ್ಲಾಗಿಗೆ ಬಂದಿದ್ದು ನನಗೆ ಖುಷಿಯಾಯಿತು. ನೀವು ಈ ತಿಂಗಳ ಐದನೇ ತಾರೀಖಿನ ಬಗ್ಗೆ, ಶಿವಾಜಿಗೆ ಸಂಸ್ಕೃತದ ಬಗ್ಗೆ ಇದ್ದ ಗೌರವದ ಬಗ್ಗೆ ಚೆನ್ನಾಗಿ ಬರೆದಿದ್ದೀರಿ...
ಧನ್ಯವಾದಗಳು..
ಧನ್ಯವಾದಗಳು ಶಿವು ಸರ್.
ನನ್ನ ಬ್ಲಾಗಿಗೆ ಸ್ವಾಗತ.
Post a Comment