Wednesday, July 22, 2009

ವ್ಯಕ್ತಿಯೋ ಕಲೆಯೋ

ಸಾದಾರಣವಾಗಿ ಒಂದು ಕಾರ್ಯಕ್ರಮಕ್ಕೆ (ಯಾವುದೇ ಕಾರ್ಯಕ್ರಮ ಆಗಿರಲಿ) ಹೋಗುವ ಮುಂಚೆ, ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ವ್ಯಕ್ತಿ ವಿವರಗಳನ್ನು ತಿಳಿದು, ಅನಂತರ ಅದಕ್ಕೆ ಹೋಗಬೇಕ ಬೇಡವಾ ಅಂತ ಯೋಚನೆ ಮಾಡ್ತಿವಿ ಅಲ್ವೇ? ಉದಾಹರಣೆಗೆ ಒಂದು ಸಿನೆಮಾಗೆ ಹೋಗೋಣ ಎಂದು ಯಾರಾದ್ರು ಕರೆದರೆ, ನಾವು ಕೇಳುವುದು ಯಾರು ಹೀರೋ? ಯಾರು ಹೀರೋಇನ್ನು? ಯಾರದು ನಿರ್ದೇಶನ? ಅಂತ. ಅವರ್ಯಾರಾದ್ರು ನಮಗೆ ಪರಿಚಯವಿದ್ದು, ನಮಗೆ ಇಷ್ಟವಾಗಿದ್ದರೆ ಮಾತ್ರ ಹೋಗುತ್ತೇವೆ. ಬೇರೆಯವರ ಬಗ್ಗೆ ನನಗೆ ಗೊತ್ತಿಲ್ಲ. ನಾನಂತೂ ಸ್ವಲ್ಪ ಹಾಗೇ.

ಇಲ್ಲಿ ಪ್ರಶ್ನೆ ಯೇನಪ್ಪಾ ಅಂದ್ರೆ, ನಮ್ಮ ಹಲವಾರು ನಿರ್ಧಾರ ಒಬ್ಬ ವ್ಯಕ್ತಿಯ ಆದಾರದ ಮೇಲೆ. ಆ ವಿಷಯ ಅಥವಾ ಕಲೆಯ ಆದಾರದ ಮೇಲಲ್ಲ. ಇದು ಸಿನೆಮಾ ಲೋಕಕ್ಕೆ ಸೀಮಿತವಾದುದಲ್ಲ. ಸಂಗೀತ, ನೃತ್ಯ, ಭಾಷಣ ಎಲ್ಲಾ ಕ್ಷೇತ್ರದಲ್ಲೂ ಹೀಗೇ. ಇದರಲ್ಲಿ ಸರಿ ಅಥವಾ ತಪ್ಪು ಪ್ರಶ್ನೆ ಬರೋಲ್ಲ. ಆದ್ರೆ ಈ ತರಹದ ನಿರ್ಧಾರದಿಂದ ನಾವು ಅರಿವಿಲ್ಲದೆ ಕೆಲವೊಂದನ್ನು ಕಳೆದುಕೊಳ್ಳುತ್ತೇವೆ.
ಮೊನ್ನೆ ಒಂದು ಭರತನಾಟ್ಯ ಕಾರ್ಯಕ್ರಮಕ್ಕೆ ಹೋಗಿದ್ದೆ. ನಡೆಸಿಕೊಟ್ಟವರು ನನ್ನ ಸ್ನೇಹಿತನಾದ ಶ್ರೀ ವೆಂಕಟೇಶ್ ಅಯ್ಯಂಗಾರ್ ಮತ್ತು ಅವನ ಶಿಷ್ಯರು. ಅವನು ನನ್ನ ಸ್ನೇಹಿತನು ಎಂದೇ ನಾನು ಹೋಗಿದ್ದು. ಇಲ್ಲವಾದಲ್ಲಿ ನಾನು ಹೋಗುತ್ತಿರಲಿಲ್ಲವೇನೋ. ೩೦ ವರುಷದ ವೆಂಕಟೇಶ್, ನೃತ್ಯದಲ್ಲೇ ನನ್ನ ಜೀವನ ಅಂತ ತೀರ್ಮಾನಿಸಿ, ಅದರಲ್ಲೇ ಸದಾಕಾಲ ಮುಳುಗಿದ್ದು, ಬೆಂಗಳೂರಿನ ಮತ್ತಿಕೆರೆಯಲ್ಲಿ "ಕಿಂಕಿಣಿ" ನೃತ್ಯಶಾಲೆಯನ್ನು ಪ್ರಾರಂಬಿಸಿದ.

ನಾನು ಬಹಳಷ್ಟು ನೃತ್ಯ ಕಾರ್ಯಕ್ರಮಗಳಿಗೆ ಹೋಗಿಲ್ಲವಾದರೂ, ಇಂತಹ ನೃತ್ಯವನ್ನು ನಾನು ಎಂದೂ ಕಂಡಿರಲಿಲ್ಲ. ಒಂದೊಂದು ಹಾಡಿನ ಪ್ರಾರಂಭದಲ್ಲಿ ಅದರ ಪೀಠಿಕೆಯ ಮೂಲಕ ಅದರ ಸನ್ನಿವೇಶವನ್ನು ವಿವರಿಸಿ ನಂತರ ನಾಟ್ಯವನ್ನು ಮಾಡುತ್ತಿದ್ದರು. ಗಜೇಂದ್ರ ಮೋಕ್ಷ, ಶ್ರೀ ರಾಮ ಪಟ್ಟಾಭಿಷೇಕ ಮುಂತಾದ ಸನ್ನಿವೇಶಗಳಲ್ಲಿ, ಇದು ಭಾರತನಾಟ್ಯವೋ, ನಾಟಕವೋ ಎಂದೇ ತಿಳಿಯುತ್ತಿರಲಿಲ್ಲ. ತಾಳಕ್ಕೆ ತಕ್ಕಂತೆ ಮೆಟ್ಟುಗಳನ್ನು ಹಾಕುತ್ತಾ, ಪಾತ್ರಕ್ಕೆ ತಕ್ಕಂತೆ ಮುಖದಲ್ಲಿ ಭಾವನೆಯನ್ನು ತೋರುತ್ತಾ, ಪ್ರಸಂಗಕ್ಕೆ ಹೊಂದುವ ನೃತ್ಯವನ್ನು ಮಾಡುತ್ತಿದ್ದರು. ನೋಡುವುದಕ್ಕೆ ಎರಡು ಕಣ್ಣುಗಳು ಸಾಲದೇ ಹೋಯಿತು.

ಅಲ್ಲಿ ನಾನು ತೆಗೆದ ಕೆಲವೊಂದು ಚಿತ್ರಗಳು.ಆದರೆ ಸಭಾಂಗಣ ಅರ್ಧವೂ ತುಂಬಿರಲಿಲ್ಲ. ಇದೇ ಪದ್ಮ ಸುಬ್ರಮಣ್ಯಮ್ ಅಥವಾ ಇನ್ಯಾರೋ ಖ್ಯಾತ ವ್ಯಕ್ತಿ ಆಗಿದ್ದರೆ, ಸಭಾಂಗಣ ತುಂಬಿರುತ್ತಿತ್ತು.

Monday, July 13, 2009

ಕವಿಪರಿಚಯ - ಟಿ. ಎಸ್. ಇಲಿಯಟ್

ಟಿ. ಎಸ್. ಇಲಿಯಟ್ ಅವರ ಬಗ್ಗೆ ನಮ್ಮೆಲ್ಲರಿಗೂ ಪರಿಚಯ ಎಂದು ಭಾವಿಸಿರುವೆ. ಆಂಗ್ಲದ ಪ್ರಸಿದ್ಧ ಕವಿ. ಶಾಲೆಯಲ್ಲಿ ಇವರ ಪದ್ಯಗಳು ಇತ್ತೋ ಇಲ್ಲವೊ ನೆನಪಿಲ್ಲ. ಆದರೂ ಇವತ್ತು ಇವರ ಬಗ್ಗೆ ಬರೆಯುವ ಕಾರಣ, ಅವರ ಒಂದು ಪದ್ಯದ ಕೊನೆಯ ಸಾಲುಗಳು ನನಗೆ ತಂದ ಕುತೂಅಲ. ಪದ್ಯ "The waste Land" ಆ ಸಾಲುಗಳು -

Datta Dayadhvam Damyata
Shantih Shantih Shantih

ಈ ಸಾಲುಗಳು ಭ್ರೃಹದಾರಣ್ಯಕ ಉಪನಿಷತ್ತಿನ ಸಾಲುಗಳು.

ಇವರ ಪೂರ್ಣ ಹೆಸರು Thomas Stearns Eliot. ಹುಟ್ಟಿದ್ದು ೧೮೮೮ ಸೆಪ್ಟೆಂಬರ್ ೨೬ನೆ ತಾರೀಕು ಅಮೇರಿಕಾದ ಮಿಸ್ಸೌರಿ ರಾಜ್ಯದಲ್ಲಿ. ಹಾರ್ವರ್ಡ್ ವಿಶ್ವವಿಧ್ಯಾಲಯದಲ್ಲಿ ಪದವಿಪೂರ್ಣರಾಗಿ, ಅಲ್ಲೇ ಸ್ನಾತಕೋತ್ತರ ಪದವಿಯನ್ನೂ ಪಡೆದರು. ನಂತರ ೧೯೧೦-೧೯೧೧ ಕಾಲದಲ್ಲಿ ಪಾರಿಸ್ ನಲ್ಲಿ ಇದ್ದು, ೧೯೧೧ನಲ್ಲಿ ಮತ್ತೆ ಹಾರ್ವರ್ಡ್ಗೆ ಮರಳಿದರು, ತತ್ವಶಾಸ್ತ್ರದ ಉಪನ್ಯಾಸಕರಾಗಿ. ಆಗಲೇ ಅವರಿಗೆ ಭಾರತೀಯ ತತ್ವಶಾಸ್ತ್ರದ ಪರಿಚಯವಾದದ್ದು. ಪ್ರಾಕೃತ, ಸಂಸ್ಕೃತ ಭಾಷೆಗಳನ್ನು, ಉಪನಿಷತ್ಗಳನ್ನೂ ಪಠಿಸಿದರು.

ಇವರ ವಯ್ಯುಕ್ತಿಕ ಜೀವನ ಬಗ್ಗೆ ಹೆಚ್ಚು ಹೇಳಲು ಇಷ್ಟಪಡುವುದಿಲ್ಲ. ಜೀವನ ಪರ್ಯಂತ ಬರಿ ಕಷ್ಟವನ್ನೇ ಅನುಭವಿಸಿದವರು. ಗೂಗಲಿಸಿದರೆ ಇದರ ಬಗ್ಗೆ ಹೆಚ್ಚು ಮಾಹಿತಿ ದೊರಕುತ್ತದೆ.

"The waste Land"ಇನ ಕೊನೆಯ ಭಾಗವಾದ "What the thunder said" ಹೀಗಿದೆ.

The Waste Land (part V)

V. What the Thunder Said

Ganga was sunken, and the limp leaves
Waited for rain, while the black clouds
Gathered far distant, over Himavant.
The jungle crouched, humped, in silence.
Then spoke the thunder
D A
Datta: what have we given?
My friend, blood shaking my heart
The awful daring of a moment's surrender
Which an age of prudence can never retract
By this, and this only, we have existed
Which is not to be found in our obituaries
Or in memories draped by the beneficient spider
Or under seals broken by the lean solicitor
In our empty rooms
D A
Dayadhvam: I have heard the key
Turn in the door once and turn once only
We think of the key, each in his prison
Only at nightfall, aethereal rumors
Revive for a moment a broken Coriolanus
D A
Damyata: the boat responded
Gaily, to the hand expert with the sail and oar
The sea was calm, your heart would have responded
Gaily, when invited, beating obedient
To controlling hands

I sat upon a shore
Fishing, with the arid plain behind me
Shall I at least set my lands in order?
London Bridge is falling down, falling down falling down
Poi s'ascose nel foco che li affina
Quando fiam ut chelidon - O swallow swallow
Le Prince d'aquitaine à la tour abolie
These statements I have shored against my ruins
Why then Ile fit you. Hieronymo's mad againe.
Datta. Dayadhvam. Damyata.
Shantih shantih shantih

"The waster Land" ಪದ್ಯವನ್ನು ತಿಳಿದುಕೊಳ್ಳುವುದು ಸುಲಭವಲ್ಲ ಎಂದು ಈ ಕ್ಷೇತ್ರದ ನಿಪುನರೆ ಭಾವಿಸುತ್ತಾರೆ. ಇವತ್ತಿಗೂ ಕೂಡ ಶಾಲಾ ಕಾಲೇಜುಗಳಲ್ಲಿ ಇದನ್ನು ವಿವರಿಸಲು ಕೆಲವರಿಗೆ ಅಸಾಧ್ಯವಾಗಿರುವ ವಿಷಯ. ಪ್ರಾಯಶಃ, ಇದನ್ನು ತಿಳಿದುಕೊಳ್ಳಲು ಆಧ್ಯಾತ್ಮದ ಹಿನ್ನಲೆ ಅಗತ್ಯ. ನನಗೆ ಅಷ್ಟಾಗಿ ತಿಳಿವಳಿಕೆ ಇಲ್ಲ. ಆದರೂ ಕುತೂಹಲ ಬಿಡಬೇಕಲ್ಲ!!

"The Waste Land" ಜೀವನದ ಉದ್ದೇಶವನ್ನು ಹುಡುಕುವ ಪ್ರಯಾಣದ ಅಂತಿಮ ಘಟ್ಟ ಎಂದು ಹೇಳಬಹುದೇನೊ. ಕೊನೆಯ ಭಾಗದಲ್ಲಿ ಜೀವನದ ಸಾರ್ಥಕತೆಯನ್ನು ಅವರು ಅರ್ಥಮಾಡಿಕೊಂಡ ಮಾದರಿ. ಇದರ ಸಾರಾಂಶ ಹೀಗಿದೆ.

ನಮ್ಮ ಜೀವನ ನೋವು, ದುಃಖ್ಖಗಳಿಂದ ಧ್ವಂಸವಾಗುತ್ತಿದೆ. ಜೀವನದಿಯಾದ ಗಂಗೆಯಲ್ಲಿ ನೀರಿಲ್ಲದ ಹಾಗೆ. ದೇವರು (Thunder) ಇದಕ್ಕೆ ಪರಿಹಾರವಾಗಿ ಮೂರು ಗುಣಗಳನ್ನು ಭೋದಿಸುತ್ತಾನೆ. ಎಲ್ಲರಲ್ಲೂ ಮನುಷ್ಯತ್ವ, ರಾಕ್ಷಸತ್ವ ಮತ್ತು ದೈವತ್ವ ಇರುತ್ತದೆ. ಈ ಅಂಶಗಳಿಗೆ ದಾನ ಮಾಡುವ ಗುಣ (Datta), ಕರುಣೆ, ಅನುಕಂಪ (Dayadhvam) ಮತ್ತು ನಿಯಂತ್ರತೆ, ಹಿಡಿತ (Damyata) ಅಗತ್ಯ.

Fisher ಪದ ಫ್ರೆಂಚ್ ಪದದಿಂದ ಆರಿಸಲಾಗಿದೆ. ಇದರ ಮೂಲ ಅರ್ಥ sinner ಎಂದು ಹೇಳುತ್ತಾರೆ. ಅಂದರೆ, ಒಬ್ಬ ಮೀನುಗಾರರ ರಾಜ ದುಃಖ್ಖದಿಂದ, ತಾಪದಿಂದ ನರಳುತ್ತಿದ್ದಾನೆ. ಅವನ ಸುತ್ತ ಬರಿ ನೀರಸ ನಾಡು (arid plain). (ಇಲಿಯಟ್ ಆ ಸಮಯದಲ್ಲಿ ಕ್ರೈಸ್ತ ಧರ್ಮವನ್ನು ಒಪ್ಪಿಕೊಂಡಿಲ್ಲವಾದ್ದರಿಂದ ಈ fisher "ಏಸು ಕ್ರಿಸ್ತ" ಎಂದು ಕೆಲವರು ಹೇಳುತ್ತಾರೆ). ಈ ಭೂಮಿ ಪತನವಾಗುತ್ತಿದೆ. (ಅಥವಾ ಲಂಡನ್ ಪತನವಾಗುತ್ತಿದೆ?). "Le Prince d'aquitaine" ಒಂದು ಶಿಥಿಲ ಸ್ತೂಪವನ್ನು ಸೂಚಿಸುತ್ತದೆ. (ಲಂಡನ್ನಿನ ಕಟ್ಟಡಗಳು?). "la tour abolie" ನರಕದ ಪ್ರತಿಬಿಂಬ. "Poi s'ascose nel foco che li affina" ಸಾಲು ಇಟಲಿಯ "divine Comedy" ಇಂದ ಆರಿಸಲಾಗಿದೆ. Thomas Kyd ನ "The spanish tragedie" ನಲ್ಲಿ "Hieronymo" ಅನ್ನುವವನು ತನ್ನ ಮಗನನ್ನು ಕಳೆದುಕೊಂಡು ಹುಚ್ಚನಗುತ್ತಾನೆ.

ಇಷ್ಟೆಲ್ಲಾ ಅಳಿವಿನ ನಡುವೆ ಕಥನಕಾರ ನಾನಾದರೂ ಸೆರಿಯಾದ ರೀತಿಯಲ್ಲಿ ನಡೆಯಬಹುದೇ (Shall I at least set my lands in order?) ಎಂದು ಕೇಳುತ್ತಾ, ಈ ಕಾಲದಲ್ಲೂ, Datta Dayadhvam Damyata ಗಳಿಗೆ ಅರ್ಥವಿದ್ದು, ಮೋಕ್ಷಕ್ಕೆ (ಮುಕ್ತಿ) ಶಾಂತಿಗೆ ಇದೊಂದೇ ಪರಿಹಾರ ಎಂದು ಹೇಳುತ್ತಾನೆ.

ಇದರ ಬಗ್ಗೆ ಆಳವಾಗಿ ಅಧ್ಯಯನ ಮಾಡಿಲ್ಲ. ಕುತೂಹಲ ಕೆರಳಿಸಿದ ಈ ಪದ್ಯವನ್ನು ನಿಮಗೆ ಪರಿಚಯ ಮಾಡುವುದೇ ಈ ಲೇಖನದ ಉದ್ದೇಶ.

Friday, July 3, 2009

ಆಚಾರದಲ್ಲಿ (ಅಪ)ನಂಬಿಕೆ


ಹೀಗೇ ಒಂದು ಸಂವಾದ ...

"ಲೋ ಯೇನೋ ಮಾಡ್ತಿದಿಯಾ?"


"ಹೇಗೆ ಪಂಚಾಗ ನೋಡ್ತಿದ್ದೆ."

"ನೀನೂ ಎಲ್ಲದಕ್ಕೂ ಮುಹೂರ್ತ ನೂಡೂದಕ್ಕೆ ಶುರು ಮಾಡಿದಿಯಾ?"

"ಹಾಗಲ್ವೋ ಈ ಮಾಸದಲ್ಲಿ ಒಂದು ಸೂರ್ಯಗ್ರಹಣ ಬರತ್ತಂತೆ. ಯಾವತ್ತು ಅಂತ ನೋಡ್ತಿದ್ದೆ."

"ಯಾವತ್ತು ಬಂದ್ರೆ ಯೇನು? ನಿನಗೆ ಯಾವಾಗಿಂದ ಖಗೋಳಶಾಸ್ತ್ರದ ಹುಚ್ಚು?"

"ಇಲ್ಲ ಕಣಯ್ಯ. ಅವತ್ತು ಆಫ್ಫೀಸ್ ಇದ್ದರೆ ಹೇಗೆ ಯೇನು ಅಂತ ನೋಡ್ತಿದ್ದೆ."

"ಆಫ್ಫೀಸ್ ಇದ್ದರೆ ಯೇನು?"

"ಆಫ್ಫೀಸ್ನಲ್ಲಿ ಗ್ರಹಣ ಮೋಕ್ಷ ಸ್ನಾನ ಮಾಡಕ್ಕಾಗತ್ತಾ? ಎಷ್ಟು ಗಂಟೆಗೆ ಊಟ ಮಾಡ್ಬೇಕು ಅವತ್ತು, ಯೇನು, ಎತ್ತ ಅಂತ ನೋಡ್ತಿದ್ದೆ."

"ನೀನು ಇದೆನ್ನೆಲ್ಲ ನಂಬ್ತಿಯಾ? ಭೂಮಿ, ಚಂದ್ರ, ಸೂರ್ಯ ಇದೆಲ್ಲ ಸೂರ್ಯವ್ಯೂಹದಲ್ಲಿ ಸಂಚರಿಸುವ ವಸ್ತುಗಳು ಅಷ್ಟೇ. ಅದು ಒಂದು ರೀತಿಯ ಸಮರೇಖೆಯಲ್ಲಿದ್ದಾಗ ಗ್ರಹಣ ಸಂಭವಿಸತ್ತೆ. ಇದಕ್ಕೂ ಊಟಕ್ಕೂ ಸ್ನಾನಕ್ಕೂ ಏನಯ್ಯಾ ಸಂಭಂದ?"
......
......


ಹೀಗೇ ಮತ್ತೊಂದು ಸಂವಾದ.

"ಎಷ್ಟು ಹೊತ್ತೂ ನಿಂದು. ಬೇಗ ಬಾರೋ."

"ಒಂದು ೧೦ ನಿಮಿಷ ಇರು. ಸಂಧ್ಯಾವಂದನೆ ಮುಗಿಸಿ ಬರ್ತೀನಿ."

"ಯಾಕ ಮಾಡ್ಬೇಕೋ ಇದನ್ನೆಲ್ಲಾ. ಸುಮ್ನೆ ಟೈಮ್ ವೇಸ್ಟು."

"ನಮ್ಮಪ್ಪ ನನಗೆ ಉಪನಯನ ಮಾಡಿದ ತಪ್ಪಿಗಾದ್ರೂ ಮಾಡ್ಬೇಕು. ಸ್ವಲ್ಪ ಹೊತ್ತು ಸುಮ್ನಿರು."

"ಒಂದು ದಿನ ಸಂಧ್ಯಾವಂದನೆ ಮಾಡದೆ ಇದ್ರೆ ಯೇನಾಗತ್ತೆ?"
......
......

ಈ ರೀತಿಯ ಸಂವಾದಗಳಲ್ಲಿ ನೀವೂ ಸಹ ಪಾತ್ರದಾರಿಗಳಾಗಿದ್ದಿರಬಹುದು ಅಲ್ಲವೇ? ನಮ್ಮ ಧರ್ಮದಲ್ಲಿ ಸಹಸ್ರಾರು ಆಚರಣೆಗಳು, ಪದ್ಧತಿಗಳು ನಾವು ಕಾಣುತ್ತೇವೆ. ಆಚರಣೆಗಳಲ್ಲೂ ಕೂಡ ಸುರಾಚಾರ ಅಥವಾ ದುರಾಚಾರ ಎಂಬ ಭಗೆಗಳುಂಟು. ಆದರೆ ಇವತ್ತಿನ ಪರಿಸ್ಥಿತಿಯಲ್ಲಿ ಯಾರಿಗೂ (ಹೆಚ್ಚು ಜನರಿಗೆ) ಯಾವ ಆಚರಣೆಗಳಲ್ಲೂ ನಂಬಿಕೆಯಿಲ್ಲ. ಹಾಗೆಂದರೆ ಇದರ ಬಗ್ಗೆ ತಿರಸ್ಕಾರ ಭಾವನೆ ಇದೆ ಅಂತಲ್ಲ. ಆ ಆಚರಣೆಯ ಫಲ ಯೇನು? ಯಾಕೆ ಮಾಡಬೇಕು? ಯೇನು ಪ್ರಯೋಜನ? ಎಂದು ತಿಳಿಯದೆ ಅದರ ಬಗ್ಗೆ ನಂಬಿಕೆ ಇಡುವುದಿಲ್ಲ. ಇದು ತಪ್ಪು ಎಂದು ನಾನು ಹೇಳುವುದಿಲ್ಲ. ಒಂದು ವಿದದಲ್ಲಿ ಇದು ಸರಿಯೇ. ಹೀಗಿದ್ದರೆ ಮಾತ್ರ ಅಲ್ಲವೇ ಆಚರಣೆಗಳ ಬಗ್ಗೆ ಸಂಷೋದನೆ ನಡೆಸಿ ಅದರ ಫಲ-ವಿಫಲ, ಅನುಕೂಲ-ಅನಾನುಕೂಲಗಳನ್ನು ಕಂಡು ಹಿಡಿಯಲು ಸಾದ್ಯ?


ಆದರೆ ಎಲ್ಲವನ್ನೂ ತಿಳಿದೇ ಮಾಡುವುದು ಎಂದು ಹೇಳಿದರೆ, ಹಲವಾರು ಆಚರಣೆಗಳು ನಮ್ಮ ಮುಂದಿನ ಪೀಳಿಗೆಗೆ ಸಿಗುವುದೇ ಇಲ್ಲ. ಇದರ ಬಗ್ಗೆ ಹೆಚ್ಚು ಚರ್ಸಿಸುವ ಮುಂಚೆ, ದಿನನಿತ್ಯದಲ್ಲಿ ಕಂಡು ಬರುವ ಕೆಲವೊಂದು ಆಚರಣೆಗಳನ್ನು ಮತ್ತು ಅದರ ವೈಜ್ನಾನಿಕ ಸಮಜಾಯಿಷಿಗಳನ್ನು ನೋಡೋಣ.


ಬೆಳಗ್ಗೆ ಎದ್ದ ತಕ್ಷಣ ಎದ್ದು ಕೂತು "ಕರಾಗ್ರೆ ವಸತಿ ಲಕ್ಷ್ಮಿ ...." ಎಂಬ ಶ್ಲೋಕವನ್ನು ಹೇಳಬೇಕು. ನಂತರ ಬೇರೆಯ ಕೆಲಸ. "ಯಾಕೆ?" ಯಾರಾದರೂ ಹೆಚ್ಹು ಹೊತ್ತು ಮಲಗಿ, ಆ ಮಲಗಿರುವ ಸ್ಥಿತಿಯಿಂದ ತಕ್ಷಣ ನಿಂತು ನಡೆದಾಗ, ಅವನ ಹೃದಯದ ಒತ್ತಡ ಹೆಚ್ಚಾಗುತ್ತದೆ. ೨ ನಿಮಿಷ ಕೂತಿದ್ದರೆ, ಹೃದಯದ ಒತ್ತಡ ಕ್ರಮೇಣವಾಗಿ ಹೆಚ್ಚಾಗುತ್ತದೆ, ಇದ್ದಕ್ಕಿದ್ದಹಾಗೆ ಅಲ್ಲ. ಹೃದಯ ಆಘಾತದಿಂದ ಸತ್ತವರಲ್ಲಿ, ಶೇಕಡಾ ೨೩ರಶ್ಟು ಜನ ಸತ್ತದ್ದು, ಮಲಗಿರುವ ಸ್ಥಿತಿಯಿಂದ ತಕ್ಷಣ ನಿಂತು ನಡೆದಾಗ. ಇದು ಮೂಢನಂಬಿಕೆಯೂ ಅಥವಾ ಮನುಷ್ಯ ವಿಜ್ಞಾನಶಾಸ್ತ್ರವೋ? "ಸರಿ ಹಾಗಾದ್ರೆ, ದಿನಾ ಬೆಳಗ್ಗೆ ೨ ನಿಮಿಷ ಹಾಸಿಗೆಯಲ್ಲೇ ಕೂತು ಯೇಳುತ್ತೇನೆ. ಆದ್ರೆ ಶ್ಲೋಕ ಗ್ಲೀಕ ಎಲ್ಲ ಹೇಳಲ್ಲ." ಸರಿ ಅಷ್ಟಾದ್ರೂ ಮಾಡು, ನಿನ್ನ ಕರ್ಮ.


ಬೆಳಗ್ಗೆ ಯೇಳಬೇಕಾದರೆ ಕೈಯನ್ನು ನೆಲಕ್ಕೆ ಮುಟ್ಟಿಸಿ, "ಸಮುದ್ರವಸನೆ ದೇವಿ ...." ಎಂದು ಹೇಳಿ, ನಂತರ ಕಾಲನ್ನು ನೆಲಕ್ಕೆ ಇಡಬೇಕು. "ಯಾಕೆ?" ಬಹಳ ಹೊತ್ತು ಹಾಸಿಗೆಯಲ್ಲಿ ಮಲಗಿದರೆ, ಅವನಲ್ಲಿ ಸ್ತಿತಿ ವಿದ್ಯುದಂಶಗಳು (static charges) ಇರುತ್ತದೆ. ನೆಲವನ್ನು ಮುಟ್ಟಿದಾಗ ಈ ವಿದ್ಯುದಂಶಗಳು ಕೈಯಿಂದ ನಿರ್ಗಮನವಾಗುತ್ತದೆ (discharge). ಕಾಲಿನಿಂದ ಆದ ಪಕ್ಷದಲ್ಲಿ ವಾತರೋಗ (arthritis) ಅಥವಾ ನರರೋಗಗಳು (neuro disorders) ಸಂಭವಿಸಬಹುದು. ಇದು ಮೂಢನಂಬಿಕೆಯೂ ಅಥವಾ ವಿದ್ಯುತ್ಶಾಸ್ತ್ರವೂ?


ಊಟ ಮಾಡುವ ಮುಂಚೆ ಭೋಜನ ಮಂತ್ರವನ್ನು ಹೇಳಬೇಕು. "ಯಾಕೆ?" ಭೋಜನ ಮಂತ್ರ ಹೇಳಿದಾಗ, ಹೆಚ್ಚು ಜೊಲ್ಲು (saliva) ಉತ್ಪನ್ನವಾಗಿ ಅದರಲ್ಲಿರುವ ಕಿಣ್ವಗಳು (enzymes) ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.

ಹೀಗೇ ಬಹಳ ಆಚರಣೆಗಳಿಗೆ ವೈಜ್ನಾನಿಕ ರೀತಿಯಲ್ಲಿ ಪ್ರಮಾಣಿಸಲಾಗುತ್ತಿದೆ. ಆದರೆ ಆಧುನಿಕ ವಿಜ್ಞಾನದ ಮಿತಿಯಲ್ಲಿ ನಾವು ಎಷ್ಟು ತಿಳಿದುಕೊಳ್ಳುವ ಸಾದ್ಯತೆಗಳಿದೆ? ಈಗಲೂ ಕೂಡ, ಮೇಲೆ ಹೇಳಿರುವ ಆಚರಣೆಗಳ ಶಾರೀರಿಕ ಉಪಯೋಗಗಳನ್ನು ಹೇಳಿದೆಯೇ ಹೊರೆತು, ಆ ಶ್ಲೋಕ/ಮಂತ್ರಗಳ ಉಪಯೋಗಗಳ ಬಗ್ಗೆ ಅಲ್ಲ. ಅಮೇರಿಕದಲ್ಲಿ ಕೆಲವೊಂದು ಆಪರೇಷನ್ ಥಿಯೇಟರ್ಗಳಲ್ಲಿ ವೇದ ಮಂತ್ರಗಳನ್ನು ಉಪಯೋಗಿಸುತ್ತಾರೆ. ಇದರಿಂದ ಚಿಕಿತ್ಸೆ ಮಾಡಬೇಕಾದರೆ ಹೆಚ್ಚು ಗಮನ ಇರುವುದೆಂದು ಅವರೇ ಒಪ್ಪಿಕೊಳ್ಳುತ್ತಾರೆ. ಆದರೆ ಅದರ ಹಿಂದೆ ಇರುವ ಕಾರಣ ತಿಳಿದಿಲ್ಲ. ನಮ್ಮ ಅಜ್ಜಂದಿರು ಈ ರೀತಿ "ಪ್ರಮಾಣ ಇದ್ದರೆ ಮಾತ್ರ ನಂಬುತ್ತೇನೆ" ಎಂದಿದ್ದರೆ ಯಾರಿಗೆ ನಷ್ಟವಾಗುತ್ತಿತ್ತು? ಇಂತಹ ಆಚರಣೆಗಳನ್ನು ಉಳಿಸುವ ಸಲುವಾಗಿ ಆದರೂ, ಪ್ರಮಾಣವಿಲ್ಲದಿದ್ದರೂ ಪಾಲಿಸುವುದು ಒಳ್ಳೆಯದು ಅಲ್ಲವೇ?


"ಹಾಗಾದರೆ ಸುಮ್ಮನೆ ಕಣ್ಣು ಮುಚ್ಚಿಕೊಂಡು ಎಲ್ಲವನ್ನೂ ಪಾಲಿಸಬೇಕಾ?" ಕಂಡಿತಾ ಬೇಡ. ನಮ್ಮಲ್ಲಿ ಕೆಲವು ಮೂಢನಂಬಿಕೆಗಳು ನಿಜವಾಗಲೂ "ಮೂಢ"ನಂಬಿಕೆಗಳೇ. ನಮ್ಮ ಧರ್ಮದಲ್ಲಿ ಪ್ರಶ್ನೆ ಕೇಳುವ ಅರ್ಹತೆ ಇದೆ, ಅಂತಹ ಪ್ರಶ್ನ-ಪ್ರವೃತ್ತಿಗೆ ಬೆಲೆಯೂ ಇದೆ. ಸುಮ್ನೆ ಕಣ್ಣು ಮುಚ್ಚಿಕೊಂಡು ಯಾವುದನ್ನೂ ಪಾಲಿಸಬೇಕಾಗಿಲ್ಲ. ಆದರೆ ನಾವು ವೀಕ್ಷಿಸುವ ರೀತಿಯನ್ನು ನಾವು ಸ್ವಲ್ಪ ಬದಲಾಯಿಸಬೇಕು. ಮೊದಲು ಆಚರಣೆಯನ್ನು ನಂಬಬೇಕು. ಆಚರಿಸುವ ಮುಂಚೆ "ಯಾಕೆ ಆಚರಿಸಬೇಕು?" ಎಂಬುದರ ಬದಲು "ಯಾಕೆ ಆಚರಿಸಬಾರದು?" ಎಂದು ಕೇಳಿಕೊಳ್ಳುವುದು ಉಚಿತ ಎಂದು ನನ್ನ ಅಭಿಪ್ರಾಯ. "ಯಾಕೆ ಆಚರಿಸಬಾರದು?" ಎಂಬುದಕ್ಕೆ ಉತ್ತರ ಸಿಗದಿದ್ದಲ್ಲಿ ಅದನ್ನು ಪಾಲಿಸಿದರೆ ಒಳ್ಳೆಯದು. ಇದರಿಂದ ನಮಗೆ ತಿಳಿಯದೇ ಪ್ರಯೂಜನವದರೆ ಆಗಲಿ. ನಂತರ ಅದರ ಬಗ್ಗೆ ವಿಚಾರಿಸಿ, ಸಂಷೋದಿಸಿ ಅದರ ಫಲ-ವಿಫಲಗಳನ್ನು ಚರ್ಚಿಸಿದರೆ ಇನ್ನು ಒಳ್ಳೆಯದು.


ಇದು ಕೇವಲ ನನ್ನ ಅಭಿಪ್ರಾಯ. ಎಲ್ಲರೂ ಇದನ್ನು ಒಪ್ಪಬೇಕಾಗಿಲ್ಲ. ಅವರವರ ಭಾವಕ್ಕೆ ಅವರವರ ಭಕುತಿಗೆ.