Monday, July 13, 2009

ಕವಿಪರಿಚಯ - ಟಿ. ಎಸ್. ಇಲಿಯಟ್

ಟಿ. ಎಸ್. ಇಲಿಯಟ್ ಅವರ ಬಗ್ಗೆ ನಮ್ಮೆಲ್ಲರಿಗೂ ಪರಿಚಯ ಎಂದು ಭಾವಿಸಿರುವೆ. ಆಂಗ್ಲದ ಪ್ರಸಿದ್ಧ ಕವಿ. ಶಾಲೆಯಲ್ಲಿ ಇವರ ಪದ್ಯಗಳು ಇತ್ತೋ ಇಲ್ಲವೊ ನೆನಪಿಲ್ಲ. ಆದರೂ ಇವತ್ತು ಇವರ ಬಗ್ಗೆ ಬರೆಯುವ ಕಾರಣ, ಅವರ ಒಂದು ಪದ್ಯದ ಕೊನೆಯ ಸಾಲುಗಳು ನನಗೆ ತಂದ ಕುತೂಅಲ. ಪದ್ಯ "The waste Land" ಆ ಸಾಲುಗಳು -

Datta Dayadhvam Damyata
Shantih Shantih Shantih

ಈ ಸಾಲುಗಳು ಭ್ರೃಹದಾರಣ್ಯಕ ಉಪನಿಷತ್ತಿನ ಸಾಲುಗಳು.

ಇವರ ಪೂರ್ಣ ಹೆಸರು Thomas Stearns Eliot. ಹುಟ್ಟಿದ್ದು ೧೮೮೮ ಸೆಪ್ಟೆಂಬರ್ ೨೬ನೆ ತಾರೀಕು ಅಮೇರಿಕಾದ ಮಿಸ್ಸೌರಿ ರಾಜ್ಯದಲ್ಲಿ. ಹಾರ್ವರ್ಡ್ ವಿಶ್ವವಿಧ್ಯಾಲಯದಲ್ಲಿ ಪದವಿಪೂರ್ಣರಾಗಿ, ಅಲ್ಲೇ ಸ್ನಾತಕೋತ್ತರ ಪದವಿಯನ್ನೂ ಪಡೆದರು. ನಂತರ ೧೯೧೦-೧೯೧೧ ಕಾಲದಲ್ಲಿ ಪಾರಿಸ್ ನಲ್ಲಿ ಇದ್ದು, ೧೯೧೧ನಲ್ಲಿ ಮತ್ತೆ ಹಾರ್ವರ್ಡ್ಗೆ ಮರಳಿದರು, ತತ್ವಶಾಸ್ತ್ರದ ಉಪನ್ಯಾಸಕರಾಗಿ. ಆಗಲೇ ಅವರಿಗೆ ಭಾರತೀಯ ತತ್ವಶಾಸ್ತ್ರದ ಪರಿಚಯವಾದದ್ದು. ಪ್ರಾಕೃತ, ಸಂಸ್ಕೃತ ಭಾಷೆಗಳನ್ನು, ಉಪನಿಷತ್ಗಳನ್ನೂ ಪಠಿಸಿದರು.

ಇವರ ವಯ್ಯುಕ್ತಿಕ ಜೀವನ ಬಗ್ಗೆ ಹೆಚ್ಚು ಹೇಳಲು ಇಷ್ಟಪಡುವುದಿಲ್ಲ. ಜೀವನ ಪರ್ಯಂತ ಬರಿ ಕಷ್ಟವನ್ನೇ ಅನುಭವಿಸಿದವರು. ಗೂಗಲಿಸಿದರೆ ಇದರ ಬಗ್ಗೆ ಹೆಚ್ಚು ಮಾಹಿತಿ ದೊರಕುತ್ತದೆ.

"The waste Land"ಇನ ಕೊನೆಯ ಭಾಗವಾದ "What the thunder said" ಹೀಗಿದೆ.

The Waste Land (part V)

V. What the Thunder Said

Ganga was sunken, and the limp leaves
Waited for rain, while the black clouds
Gathered far distant, over Himavant.
The jungle crouched, humped, in silence.
Then spoke the thunder
D A
Datta: what have we given?
My friend, blood shaking my heart
The awful daring of a moment's surrender
Which an age of prudence can never retract
By this, and this only, we have existed
Which is not to be found in our obituaries
Or in memories draped by the beneficient spider
Or under seals broken by the lean solicitor
In our empty rooms
D A
Dayadhvam: I have heard the key
Turn in the door once and turn once only
We think of the key, each in his prison
Only at nightfall, aethereal rumors
Revive for a moment a broken Coriolanus
D A
Damyata: the boat responded
Gaily, to the hand expert with the sail and oar
The sea was calm, your heart would have responded
Gaily, when invited, beating obedient
To controlling hands

I sat upon a shore
Fishing, with the arid plain behind me
Shall I at least set my lands in order?
London Bridge is falling down, falling down falling down
Poi s'ascose nel foco che li affina
Quando fiam ut chelidon - O swallow swallow
Le Prince d'aquitaine à la tour abolie
These statements I have shored against my ruins
Why then Ile fit you. Hieronymo's mad againe.
Datta. Dayadhvam. Damyata.
Shantih shantih shantih

"The waster Land" ಪದ್ಯವನ್ನು ತಿಳಿದುಕೊಳ್ಳುವುದು ಸುಲಭವಲ್ಲ ಎಂದು ಈ ಕ್ಷೇತ್ರದ ನಿಪುನರೆ ಭಾವಿಸುತ್ತಾರೆ. ಇವತ್ತಿಗೂ ಕೂಡ ಶಾಲಾ ಕಾಲೇಜುಗಳಲ್ಲಿ ಇದನ್ನು ವಿವರಿಸಲು ಕೆಲವರಿಗೆ ಅಸಾಧ್ಯವಾಗಿರುವ ವಿಷಯ. ಪ್ರಾಯಶಃ, ಇದನ್ನು ತಿಳಿದುಕೊಳ್ಳಲು ಆಧ್ಯಾತ್ಮದ ಹಿನ್ನಲೆ ಅಗತ್ಯ. ನನಗೆ ಅಷ್ಟಾಗಿ ತಿಳಿವಳಿಕೆ ಇಲ್ಲ. ಆದರೂ ಕುತೂಹಲ ಬಿಡಬೇಕಲ್ಲ!!

"The Waste Land" ಜೀವನದ ಉದ್ದೇಶವನ್ನು ಹುಡುಕುವ ಪ್ರಯಾಣದ ಅಂತಿಮ ಘಟ್ಟ ಎಂದು ಹೇಳಬಹುದೇನೊ. ಕೊನೆಯ ಭಾಗದಲ್ಲಿ ಜೀವನದ ಸಾರ್ಥಕತೆಯನ್ನು ಅವರು ಅರ್ಥಮಾಡಿಕೊಂಡ ಮಾದರಿ. ಇದರ ಸಾರಾಂಶ ಹೀಗಿದೆ.

ನಮ್ಮ ಜೀವನ ನೋವು, ದುಃಖ್ಖಗಳಿಂದ ಧ್ವಂಸವಾಗುತ್ತಿದೆ. ಜೀವನದಿಯಾದ ಗಂಗೆಯಲ್ಲಿ ನೀರಿಲ್ಲದ ಹಾಗೆ. ದೇವರು (Thunder) ಇದಕ್ಕೆ ಪರಿಹಾರವಾಗಿ ಮೂರು ಗುಣಗಳನ್ನು ಭೋದಿಸುತ್ತಾನೆ. ಎಲ್ಲರಲ್ಲೂ ಮನುಷ್ಯತ್ವ, ರಾಕ್ಷಸತ್ವ ಮತ್ತು ದೈವತ್ವ ಇರುತ್ತದೆ. ಈ ಅಂಶಗಳಿಗೆ ದಾನ ಮಾಡುವ ಗುಣ (Datta), ಕರುಣೆ, ಅನುಕಂಪ (Dayadhvam) ಮತ್ತು ನಿಯಂತ್ರತೆ, ಹಿಡಿತ (Damyata) ಅಗತ್ಯ.

Fisher ಪದ ಫ್ರೆಂಚ್ ಪದದಿಂದ ಆರಿಸಲಾಗಿದೆ. ಇದರ ಮೂಲ ಅರ್ಥ sinner ಎಂದು ಹೇಳುತ್ತಾರೆ. ಅಂದರೆ, ಒಬ್ಬ ಮೀನುಗಾರರ ರಾಜ ದುಃಖ್ಖದಿಂದ, ತಾಪದಿಂದ ನರಳುತ್ತಿದ್ದಾನೆ. ಅವನ ಸುತ್ತ ಬರಿ ನೀರಸ ನಾಡು (arid plain). (ಇಲಿಯಟ್ ಆ ಸಮಯದಲ್ಲಿ ಕ್ರೈಸ್ತ ಧರ್ಮವನ್ನು ಒಪ್ಪಿಕೊಂಡಿಲ್ಲವಾದ್ದರಿಂದ ಈ fisher "ಏಸು ಕ್ರಿಸ್ತ" ಎಂದು ಕೆಲವರು ಹೇಳುತ್ತಾರೆ). ಈ ಭೂಮಿ ಪತನವಾಗುತ್ತಿದೆ. (ಅಥವಾ ಲಂಡನ್ ಪತನವಾಗುತ್ತಿದೆ?). "Le Prince d'aquitaine" ಒಂದು ಶಿಥಿಲ ಸ್ತೂಪವನ್ನು ಸೂಚಿಸುತ್ತದೆ. (ಲಂಡನ್ನಿನ ಕಟ್ಟಡಗಳು?). "la tour abolie" ನರಕದ ಪ್ರತಿಬಿಂಬ. "Poi s'ascose nel foco che li affina" ಸಾಲು ಇಟಲಿಯ "divine Comedy" ಇಂದ ಆರಿಸಲಾಗಿದೆ. Thomas Kyd ನ "The spanish tragedie" ನಲ್ಲಿ "Hieronymo" ಅನ್ನುವವನು ತನ್ನ ಮಗನನ್ನು ಕಳೆದುಕೊಂಡು ಹುಚ್ಚನಗುತ್ತಾನೆ.

ಇಷ್ಟೆಲ್ಲಾ ಅಳಿವಿನ ನಡುವೆ ಕಥನಕಾರ ನಾನಾದರೂ ಸೆರಿಯಾದ ರೀತಿಯಲ್ಲಿ ನಡೆಯಬಹುದೇ (Shall I at least set my lands in order?) ಎಂದು ಕೇಳುತ್ತಾ, ಈ ಕಾಲದಲ್ಲೂ, Datta Dayadhvam Damyata ಗಳಿಗೆ ಅರ್ಥವಿದ್ದು, ಮೋಕ್ಷಕ್ಕೆ (ಮುಕ್ತಿ) ಶಾಂತಿಗೆ ಇದೊಂದೇ ಪರಿಹಾರ ಎಂದು ಹೇಳುತ್ತಾನೆ.

ಇದರ ಬಗ್ಗೆ ಆಳವಾಗಿ ಅಧ್ಯಯನ ಮಾಡಿಲ್ಲ. ಕುತೂಹಲ ಕೆರಳಿಸಿದ ಈ ಪದ್ಯವನ್ನು ನಿಮಗೆ ಪರಿಚಯ ಮಾಡುವುದೇ ಈ ಲೇಖನದ ಉದ್ದೇಶ.

15 comments:

shivu.k said...

rajiv,

tuMbaa chennagi vivarisiddhiri..nanagu hosa vicharavannu thiLidukoNda Age aithu...thanks...

ಬಾಲು said...

nanu a kavi bagge kelidde ashte, yava padya nu odiralilla. nimma vivarane chennagide.

Alli prabhu avara blog nalli sihi suddi kodthini antha heltha iddiri, yavaga oota haakisuviri? :)

ರಾಜೀವ said...

ಶಿವು ಸರ್,

ನನಗೂ ಇದು ಹೊಸ ವಿಷಯವೇ. ಇದರ ಬಗ್ಗೆ ನಮ್ಮ ಮೈಸೂರಿನ ಕೆ.ಎಸ್.ನಾರಾಯಣಾಚಾರ್ಯ ಅವರು ಥೀಸೀಸ್ ಬರೆದಿದ್ದಾರೆ. ಅದು ಸಿಕ್ಕರೆ ಓದಬೇಕು. ಪ್ರತಿಕ್ರಿಯೆಗೆ ದನ್ಯವಾದಗಳು.

ರಾಜೀವ said...

ಬಾಲಣ್ಣ,

ಪ್ರಭು ಅವರ ಬರವಣಿಗೆ ನೋಡಿ, ಇವತ್ತಲ್ಲಾ ನಾಳೆ ನಾನು ಕೂಡ ಅದನ್ನು ಅನುಭವಿಸಲೇಬೇಕು ಅಂದು ಹಾಗೆ ಹೇಳ್ದೆ. ಸಿಹಿ ಸುದ್ದಿಗೆ ಇನ್ನು ಸ್ವಲ್ಪ ಸಮಯ ಇದೆ.

ಅದು ಸರೀ, ನೀವೇ ತಾನೇ "ಎಲ್ಲಾ ಓಕೆ, ಮದುವೆ ಯಾಕೆ" ಬರಹ ಬರ್ದಿದ್ದು. ಇವಾಗ ನೀವೇ ಕೇಳ್ತಿದಿರಲ್ಲಾ!! ನೀವೇ ಚಿವುಟಿ ನೀವೇ ತೊಟ್ಲು ಆಡೆಸ್ತಿರಾ ;) (ತಮಾಷೆಗೆ)

ಪ್ರತಿಕ್ರಿಯೆಗೆ ಥ್ಯಾಂಕ್ಸ್.

Murali said...

I really had tough time reading .......eg: Saaramsha was read as Naaramsha!!!! ohhh its high time i got my kannada right!!!!

wht i really noticed is the gap which u have grow and accomplished....the Raji whom i knew and the Raji with this piece of article....ohhh u have grow leaps dude!!! keep up the good work.

The next stage of ripped apple is to get rotten.....so be ripening all the time. God bless u!!!

Ittigecement said...

ಜನುಮ ದಿನದ ಶುಭಾಶಯಗಳು...

ರಾಜೀವ said...

Thanks Murali,

I didnt know I ahd such a bad reputation ;).

Anyways .. Why do you think I started this? To make that difference and to motivate you too to follow!! You have a teachers at home to push you to the top. Get going. I am waiting ...

I am still a bud. I still have a long way to go till I get ripened.

ರಾಜೀವ said...

ಪ್ರಕಾಶ್ ಸರ್,

ನನಗೆ ಅರ್ಥ ಆಗ್ಲಿಲ್ಲ. ಇದು ರಾಂಗ್ ನಂಬರ್ ಅನ್ಸತ್ತೆ. ನನ್ನ ಜನುಮ ದಿನ ಆಚರಣೆಗೆ ತುಂಬಾ ಟೈಮ್ ಇದೆ.

Murali said...

I got that!!!!

Srinivas Girigowda said...

ಮೊಟ್ಟ ಮೊದಲಿಗೆ ಚರಿತ್ರೆಯಲ್ಲಿ ಮಿಂಚಿ ಮರೆಯಾದ ಅಪ್ರತಿಮ ಕವಿಯ ಬಗ್ಗೆ ಪರಿಚಯಿಸಿದಕ್ಕೆ ಧನ್ಯವಾದಗಳು. ಕವಿಯ ಲೇಖನದ ಘ್ಹಢಾರ್ಥ ತಿಳಿಯಲು ನಿಜಕ್ಕೂ ಕಷ್ಟಾಸಾದ್ಯ. ಲೇಖನವನ್ನು ಓದುತ್ತಾ ಒಂದು ಹೊಸ ಪ್ರಪಂಚವನ್ನೇ ಕಂಡೆ. ಡಾ||ರಾಜ್ ಕುಮಾರ್ 'ಬಡವರ ಬಂಧು' ಚಲನಚಿತ್ರದ ಮಧುರವಾದ ಗೀತೆಯಲ್ಲಿ ಹೇಳುವ ಹಾಗೆ "ಕಲಿಯುವುದಿಲ್ಲಿ ಸಾಗರದಂತಿದೆ ಕಲಿತವರಾರಿಲ್ಲಿ, ಶತಮಾನಗಳೆ ಕಲಿತರು ಮುಗಿಯಾದು ವಿದ್ಯೆಗೆ ವಯಸೆಲ್ಲಿ" ಎಂಬ ಮಾತು ಮನದಟ್ಟಾಯಿತು.

ನಿಮ್ಮ ಅಭಿರುಚಿಯನ್ನು ಮೆಚ್ಚಿದೆ.

Prabhuraj Moogi said...

ಇಂಗ್ಲೀಷು ನನಗೆ ತಿಳಿಯುವುದು ಅಷ್ಟಕ್ಕಷ್ಟೇ, ಭಾವಾನುವಾದ ಕೊಟ್ಟದ್ದು ಒಳ್ಳೇದಾಯ್ತು... ಇಲಿಯಟ ಬಗ್ಗೆ ಗೊತ್ತಿರಲಿಲ್ಲ, ಹಾಗೆ ನೋಡಿದರೆ ಕನ್ನಡದ ಎಷ್ಟೊ ಕವಿಗಳೆ ಗೊತ್ತಿಲ್ಲ ನನಗೆ... ಒಳ್ಳೆ ಮಾಹಿತಿ.
ಇನ್ನು ಬಾಲು ಕಮೆಂಟನಲ್ಲಿ ನಾನು ಕೂಡ ಅದನ್ನು ಅನುಭವಿಸಲೇಬೇಕು ಅಂದಿದ್ದು ನಿಜ ಎಲ್ಲರಿಗೂ ಅನುಭವಗಳು ಆಗುತ್ತವೆ, ಒಳ್ಳೆ ಸ್ವಾರಸ್ಯಕರ ಘಟನೆ ನಡೆದರೆ, ಬ್ಲಾಗಿನಲ್ಲಿ ಬರೆಯಿರಿ(ವೈಯಕ್ತಿಕ ಅನಿಸದ ಹೊರತು).. ನಾವೂ ಓದಿ ಖುಶಿ ಪಟ್ಟೆವು...

Ittigecement said...

ರಾಜೀವ್....

ವಿಳಾಸ ತಪ್ಪಿದೆ...
ಕನ್ನಡ ಬ್ಲಾಗರ್ಸ್ ನಲ್ಲಿ ರಾಜೀವ್ ಅವರಿಗೆ ವಿಷ್ ಮಾಡಿ ಇಲ್ಲಿ ಬಂದು..
ನೀವೂ ಕೂಡ ಅವರೆ ಇರಬಹುದು ಅಂದು ಕೊಂಡೆ...

ಇದನ್ನು ಅಡ್ವಾನ್ಸ್ ಅಂತ ಇಟ್ಟುಕೊಳ್ಳಿ...

ಇಂಗ್ಲೀಷ್ ಕವಿಗಳ, ಕವಿತೆ ಸಾಹಿತ್ಯದ ಬಗೆಗೆ ನನಗೆ ಜ್ಞಾನ ಕಡಿಮೆ...
ನೀವು ಅಂಥವರ ಪರಿಚಯ ಮಾಡಿಕೊಟ್ಟಿದ್ದು ತಿಳಿದುಕೊಳ್ಳಲು ಸಹಾಯಕ...

ಅಭಿನಂದನೆಗಳು...

ರಾಜೀವ said...

ಶ್ರೀನಿ,

ನಿನ್ನ ಪ್ರತಿಕ್ರಿಯೆ ನನಗೆ ಹೊಸ ಹುಮ್ಮಸ್ಸು ನೀಡಿತು. ದನ್ಯವಾದಗಳು.

ಕಲಿಯುವುದಕ್ಕೆ ನಿಜಕ್ಕೂ ಸಾಗರದಷ್ಟಿದೆ. ಆ ದೃಷ್ಟಿಯಲ್ಲಿ ನೋಡುವ ಮನಸ್ಸು ಮಾಡಬೇಕು ನಾವು. ಅದಕ್ಕೆ ಮೊದಲು ನಮ್ಮ ಬಾವಿಯಿಂದ ಹೊರಕ್ಕೆ ಬರಬೇಕು. ಬಂದು ನೋಡಿದರೆ ಸಾಕು, ಅದು ನಮ್ಮನ್ನು ಸೆಳೆದುಬಿಡುತ್ತದೆ.

ನಿಮ್ಮ ಉತ್ಸಾಹವೂ ಹೇಗೇ ಇರಲಿ.

ರಾಜೀವ said...

ಪ್ರಭು,

ಇಂಗ್ಲೀಷು ನನಗೂ ಅಷ್ಟಕ್ಕಷ್ಟೇ. ಆ ಎರಡು ಸಾಲುಗಳು ನನ್ನನ್ನು ಸೆಳೆಯಿತು.

ಸದ್ಯಕ್ಕೆ ಬಾಲು ಹೇಳಿರುವ ಅನುಭವ ಅಥವಾ ಸ್ವಾರಸ್ಯಕರ ಘಟನೆ ಏನು ನಡೆದಿಲ್ಲ. ನಡೆದರೆ ಅದರ ಬಗ್ಗೆ ಬರೆಯುತ್ತೇನೆ.

ರಾಜೀವ said...

ಪ್ರಕಾಶ್ ಸರ್,

ಅಡ್ವಾನ್ಸ್ ಶುಭ ಹಾರೈಕೆಗೆ ವಂದನೆಗಳು.

ನನಗೂ ಇದು ಹೊಸ ವಿಷಯವೇ. ಕೆಲವು ಹೊಸ ವಿಷಯಗಳು ನಮ್ಮನ್ನು ಬೇರೆಯ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ, ಅಲ್ಲವೇ?