ಮೊನ್ನೆ ಶನಿವಾರ ಕೃಷ್ಣ ಮತ್ತೆ ಮನೆಗೆ ಬಂದಿದ್ದ (ದಿನಾಗ್ಲು ಮನೇಲೇ ಇರ್ತಾನೆ. ಆದರೆ ಅವನು ಇದ್ದ ಗುರುತು ಮಾತ್ರ ವರುಷಕ್ಕೆ ಒಂದೇ ಸಲ). ಪುಟ್ಟ ಪುಟ್ಟ ಹೆಜ್ಜೆ ಹಾಕೊಂಡು, ಮಂಟಪದ ಮೇಲೆ ಏರಿ ಕೂತೇಬಿಟ್ಟ. ಕೃಷ್ಣ ಜನ್ಮಾಷ್ಟಮಿ ಬಂದರೆ ಸಾಕು ಏನೋ ಒಂತರಾ ಕುಶಿ. ಕೃಷ್ಣನಿಗೆ ಮಾಡುವ ತಿಂಡಿತಿನಿಸುಗಳು ಇನ್ಯಾರಿಗೂ ಮಾಡುವುದೇ ಇಲ್ಲ. ಅದೇನು ಮೋಡಿ ಮಾಡಿದಾನೋ ಅವನು. ಆದರೂ ಪರವಾಗಿಲ್ಲ. ಅವನ ಹೆಸರಿನಲ್ಲಿ ನಮಗೂ ತಿಂಡಿ ಸಿಗತ್ತೆ. ಅದೂ ಒಂದಾ ಎರಡಾ, ಚಕ್ಕುಲಿ, ಕೋಡ್ಬಳೆ, ನಿಪ್ಪಟ್ಟು, ಬರ್ಫಿಗಳು, ಉಂಡೆಗಳು ಅಂತ ಸುಮಾರು ೧೫-೨೦ ಬಗೆಬಗೆಯ ತಿಂಡಿಗಳು ಮಾಡ್ತೀವಿ ನಮ್ಮಲ್ಲಿ. ಹೊಟ್ಟೆ ಗತಿ ಏನು ಅಂತ ಮಾತ್ರ ಕೇಳಬೇಡಿ.
ಕುಶಿ ಪಡಲು ಮತ್ತೊಂದು ಕಾರಣ ಇದೆ. ಕೃಷ್ಣೆ ಬಂದಮೇಲೆ ಹರಿಶಿನ ಕುಂಕುಮ ನೆಪದಲ್ಲಿ ಗೋಪಿಕಾ ಸ್ತ್ರೀಯರೂ ಬರಬೇಕು ಅಲ್ವೇ? ಎಲ್ಲರೂ ಬಂದು ಕೃಷ್ಣನನ್ನು ನೋಡಿ ಹೋದರು. ಕೃಷ್ಣನ ಕೃಪೆಯಿಂದ ನಮಗೂ ಅವರ ದರ್ಶನದ ಭಾಗ್ಯ ಸಿಕ್ತು ;-)
ಕೃಷ್ಣನ ಕಾಲು ಗುರುತು ಹೀಗಿತ್ತು.
ಕೃಷ್ಣ ಮಂಟಪದಲ್ಲಿ ಹೀಗೆ ಕಾಣಿಸುತ್ತಿದ್ದ.
ಎಲ್ಲಾ ಸರಿ. ಆದ್ರೆ ಯಾಕೆ ಕೃಷ್ಣನಿಗೆ ಮಾತ್ರ ಈ ಸಡಗರ? ಪಾಪ ರಾಮ ಏನು ಪಾಪ ಮಾಡಿದ್ದ? ಕೃಶ್ಣಾನೋ ಒಬ್ಬ ಗೊಲ್ಲ. ಅವನಿಗೆ ಇಷ್ಟೊಂದು ತಿಂಡಿಗಳು, ಮಂಟಪ, ರಾತ್ರಿ ನಿದ್ದೆ ಕೆಟ್ಟು ಇವನಿಗೆ ಪೂಜೆ. ಆದ್ರೆ ರಾಮ ಒಬ್ಬ ರಾಜ. ಅವನಿಗೆ ಇನ್ನಷ್ಟು ಸಡಗರ ಆಗಿರಬೇಕಲ್ಲವೇ? ಊಹು, ಬರಿ ಒಂದಿಷ್ಟು ಕೋಸಂಬರಿ ಪಾನಕ.
ರಾಜನಾದರೂ ರಾಮ ಕಾಡಿಗೆ ಹೋಗಬೇಕಾಯಿತು. ಹೆಂಡತಿಯಿಂದ ದೂರ ಇರಬೇಕಾಯಿತು. ಕೃಷ್ಣ ರಾಜಾನೂ ಅಲ್ಲ, ಮಂತ್ರಿನೂ ಅಲ್ಲ. ಆದರೂ ಗೋಕುಲದಲ್ಲಿ ಅವನೇ ರಾಜನ ಹಾಗೆ ಇದ್ದ. ಮಥುರಾಗೆ ಬಂದಮೇಲೂ ಅಷ್ಟೇ. ಒಂದಲ್ಲ ಎರಡಲ್ಲ ೧೬೦೦೦ ಹೆಂಡತಿಯರು.
ಈಗ ನೀವೇ ಹೇಳಿ, ನೀವು ಸಿಂಹಾಸನದ ಮೇಲೆ ಕೂತು ರಾಮನ ಹಾಗೆ ಆಗಬೇಕೋ ಅಥವಾ ಒಬ್ಬ ಸಾಮಾನ್ಯ ಮನುಷ್ಯನಾಗಿ ಕೃಷ್ಣನ ಹಾಗೆ ಆಗಬೇಕೋ? ಈ ರಾಜಕಾರಿಣಿಗಳು ಯಾಕೆ ಪದವಿ ಪದವಿ ಅಂತ ಸಾಯ್ತಾರೋ. ರಾಮ ಕೃಷ್ಣರನ್ನ ನೋಡಿ ಕಲ್ತ್ಗೋಬಾರ್ದೇ.
10 comments:
ಹರಿಶಿನ ಕುಂಕುಮ ನೆಪದಲ್ಲಿ ಗೋಪಿಕಾ ಸ್ತ್ರೀಯರನ್ನು ನೀವು ಮಾತ್ರ ನೋಡಿ ಆನಂದಿಸಿ ಆಯ್ತಾ....?
ಇದಕ್ಕೆ ಅಲ್ಲವೇ ಅವನನ್ನು ಕೃಷ್ಣ ಅನ್ನೊಂದು...
ರಾಜೀವ ಅವರೇ,
ಭಾರಿ ಕಳ್ಳ ಅದಿರ್ರಿ ನೀವು, (ತಮಾಷೆಗೆ....!) ಇದ್ಕೆನಾ ನೀವ್ ಹಬ್ಬ ಆಚರಿಸ್ಯೋದು..................?!!!
ಸಂಪ್ರದಾಯವಾಗಿ ಹಬ್ಬ ಆಚರಿಸೋದನ್ನು ಮರೆಯುಥ್ಥಿರೋ ಈ ದಿನಗಳಲ್ಲಿ ನಿಮ್ಮ ಹಬ್ಬದ ಸಂಭ್ರಮ ಕಂಡು ಖುಷಿಯಾಯ್ತು. ಕೃಷ್ಣ ಮತ್ತು ರಾಮ ಲೋಕ ಕಲ್ಯಾಣಕ್ಕಾಗಿ ಅವತಾರ ಎತ್ತಿ ಬದುಕಿನ ಕಷ್ಟ, ಸುಖ, ದ್ಯೇಯ, ಆದರ್ಶ ತಿಳಿಸಿದರು. ಆದರೆ ಇದನ್ನೆಲ್ಲಾ ಮರ್ತು ಹಬ್ಬದ ಊಟ ಮಾತ್ರ ನೆನಪಿಟ್ಟುಕೊಂಡಿದ್ದೇವಿ ಈಗ ನಾವು. ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು.
ಮಹಾಸ್ವಾಮಿ ನಮ್ಮ ರಾಜಕಾರಣಿಗಳು ಅಷ್ಟೆಲ್ಲಾ ಕಲಿಯುವ ಹಾಗೆ ಇದ್ದಿದ್ದರೆ ನಮ್ಮ ದೇಶ ಹೀಗೆ ಇರುತ್ತಿತ್ತಾ? ಅವರು ಬದುಕಿರುವಷ್ಟು ಕಾಲ ಕಾಟ ಕೊಡ್ತಾರೆ, ಸತ್ತ ಮೇಲೆ ನಮ್ಮ ಮಾದ್ಯಮಗಳು ಅವರನ್ನು "ದೇವರು" ಅನ್ನೋ ತರ ತೋರಿಸ್ತಾವೆ.
ಕೃಷ್ಣ ನ ಪೂಜೆ ಮಾಡಿದ್ದಿರಿ, ಅನುಗ್ರಹ ಆಯಿತೆ? ನಿಮಗೆ ಇಷ್ಟವಾದ ಅಪ್ಲಿಕಶನ್ (ಗೋಪಿಕೆಗೆ ) ಸ್ಯಾಂಕ್ಷನ್ ಮಾಡು ಅಂತ ಪ್ರಾರ್ತನೆ ಮಾಡಬೇಕಿತ್ತು!!
@ಗುರು,
ಎನ್ ಸ್ವಾಮಿ. ಅವರ ದರ್ಶನದ ಭಾಗ್ಯ ಸಿಕ್ತು ಅನ್ದ್ರೆ ನೀವು ಇನ್ನೇನೋ ತಪ್ಪಾಗಿ ತಿಳ್ಕೋಳೋದಾ?
@ಎಸ್ಎಸ್ಕೆ,
ಹಬ್ಬಗಳು ಬರಿ ದೇವರಿಗೆ ಮಾತ್ರ ಅಲ್ಲ? ಅದು ಸಮಾಜಮುಖಿ ಆಗಿರಬೇಕು ಅಲ್ವಾ?
ಜನರು ಬರ್ಬೇಕು, ಸೇರಬೇಕು, ಸತ್ಸಂಘವಾಗಬೇಕು.
ಶನ್ಕರಾಚಾರ್ಯರೇ ಹೇಳಿಲ್ವೇ "ಸತ್ಸಂಘತ್ವೇ ನಿಸ್ಸಂಘತ್ವಂ, ನಿಸ್ಸಂಘತ್ವೇ ನಿರ್ಮೋಹತ್ವಂ, ನಿರ್ಮೋಹತ್ವೇ ನಿಶ್ಚಲತ್ವಂ, ನಿಶ್ಚಲತ್ವೇ ಜೀವನ್ಮುಖಿ".
ಈ ದೃಷ್ಟಿಯಲ್ಲಿ ಆ ಸತ್ಸಂಘದ ದರ್ಶನವಾಯಿತು ಅಂತ ನಾನು ಹೇಳಿದ್ದು ;-)
@ಶ್ರೀನಿ,
ನಿಮಗೂ ಶ್ರೀಕೃಶ್ಣ ಜನ್ಮಾಷ್ಟಮಿಯ ಶುಭಾಶಯಗಳು.
ನೀವು ಹೇಳುತ್ತಿರುವುದು ನಿಜ ಎನಿಸಿದರೂ, ಇತ್ತೀಚಿನ ದಿನಗಳಲ್ಲಿ ಜನರು ಜಾಗೃತರಾಗುತ್ತಿದ್ದಾರೆ.
ಹಬ್ಬಗಳ ಅಗತ್ಯ ಎದ್ದು ಕಾಣಿಸುತ್ತಿದೆ.
ನಿಮ್ಮ ಕಾಳಜಿಗೆ ನನ್ನ ಮೆಚ್ಚುಗೆ ಇದೆ.
@ಬಾಲು,
ಅಪ್ಲಿಕೆಶನ್ ಹಾಕುವ ಅವಶ್ಯಕತೆ ಇಲ್ಲ. ನನ್ನ ಇಷ್ಟ ಕಷ್ಟಗಳು ಅವನಿಗೆ ಗೊತ್ತಿಲ್ಲವೇ?
ಅವನನ್ನೇ ನಂಬಿದೀನಿ. ಮುಂದೆ ಅವನು ನೋಡ್ಕೋತಾನೆ. ಏನನ್ತೀರ?
ಖಂಡಿತ ಕೃಷ್ಣ ಆಗೋದೇ ವಾಸಿ :)
ಆದರೆ ಕೃಷ್ಣ ಅಂತಿದ್ದಂಗೆ ಎಲ್ರಿಗೂ ಗೋಪಿಕೆಯರು, ಬೆಣ್ಣೆ ಕಳ್ಳ ಅಂತ ನೆನಪು... ಕೃಷ್ಣ ಒಂಥರಾ ಗ್ರೇಟ ಪರಸನ್ಯಾಲಿಟಿ... ಎನೇ ಮಾಡಿದರೂ ಎಲ್ಲಾ ಲೆಕ್ಕಾಚಾರ ತಕ್ಕ ಹಾಗೆ, ಮಹಾಭಾರತದ ಮಹಾಯುದ್ಧದಲ್ಲಿನ ಒಂದೊಂದು ನಡೆಯೂ ಆ ಚಾತುರ್ಯವನ್ನು ಸೂಚಿಸುತ್ತದೆ.
ಸೀತೆಯನ್ನು ಕಾಡಿನಲ್ಲಿ ಬಿಟ್ಟ ಏಕಪತ್ನೀವೃತಸ್ತ ಅಂತನ್ನೊ ರಾಮನಿಗಿಂತ, ಹಲವು ಹೆಂಡಿರಾದರೂ ಎಲ್ಲ ಸರಿಯಾಗಿ ನಿಭಾಯಿಸಿದ ಕೃಷ್ಣನೇ ಮೆಚ್ಚಿಗೆಯಾಗುತ್ತಾನೆ.
ರಾಜೀವ್,
ರಾಮ ರಾಜ ಕೃಷ್ಣ ಅಲ್ಲ ಅದು ಏನೇ ಆಗಿರಲಿ....ಮುಂದಿನ ವರ್ಷ ಕೃಷ್ಣಾಷ್ಟಮಿಗೆ ನಿಮ್ಮಗೆ ಬರುತ್ತೇನೆ..ರುಚಿಯಾದ ತಿಂಡಿಗೆ....
@ಪ್ರಭು,
ಕೃಷ್ಣ ಅನ್ದ ತಕ್ಷಣ ಗೋಪಿಕೆಯರು ನೆನಪಾಗುತ್ತಾರೆ. ಆದರೆ ಎಲ್ಲರಿಗೂ ತಿಳಿಯದ ವಿಶಯ, ಕೃಷ್ಣ ಒಬ್ಬ ಬ್ರಹ್ಮಚಾರಿ. ಭಾಗವತದಲ್ಲಿ ಪರಿಕ್ಷಿತನ ಕಥೆಯನ್ನು ಓದಿದರೆ ತಿಳಿಯುವುದು, ಕೃಷ್ಣ ಒಬ್ಬ ನಿತ್ಯ ಬ್ರಹ್ಮಚಾರಿಯೆಂದು. ಇದು ತಿಳಿದಮೇಲೂ ನೀವು ಕೃಷ್ಣನನ್ನೇ ಇಷ್ಟ ಪಡುತ್ತೀರ?
@ಶಿವು,
ನಿಮಗೆ ಸ್ವಾಗತ. ಬರೀ ದೇವರ ಪೂಜೆ ಮಾಡಿಬಿಟ್ಟರೆ ಸಾಕೆ? ಹಬ್ಬಗಳು ಇರುವುದೇ ಜನರು ಸೇರಲೆಂದು. ಒಟ್ಟಿಗೆ ಸಿಹಿ ತಿನ್ನಲೆಂದು.
ರಾಜೀವ....
ನನಗಂತೂ ಕೃಷ್ಣನೇ ಇಷ್ಟ..
ಆತನ ಮತ್ಸದ್ದಿತನ... ಚಾಣಾಕ್ಷ್ಯತನ...
ಕಲಹ ಮಾಡಿದರೂ ಅಲ್ಲಿ ಸಜ್ಜನರಿಗೆ ಒಳಿತನ್ನೇ ಮಾಡುವ..
ಸಜ್ಜನರ, ನ್ಯಾಯ ಧರ್ಮದ ಹಿತರಕ್ಷಣೆ ಮಾಡುವ
ಕೃಷ್ಣ ನನಗೆ ಇಷ್ಟ...
ನಿಮ್ಮ ಬರಹ ತುಂಬಾ ಚೆನ್ನಾಗಿದೆ
ಅಭಿನಂದನೆಗಳು...
ಪ್ರಕಾಶ್ ಅವರೆ,
ಪ್ರತಿಕ್ರಿಯೆಗೆ ಧನ್ಯವಾದ.
ಹೌದು. ಕೃಷ್ಣ ಎಶ್ಟೇ ಕಲಹ ಮಾಡಿದರೂ, ಅದು ಧರ್ಮದ ಚೌಕಟ್ಟಿನಲ್ಲೇ.
Post a Comment