Wednesday, October 14, 2009

ಮರಳಿ ಬಾ ಪುಣ್ಯಕೋಟಿ



ಬಹಳ ವರುಷಗಳಿಂದ ನನಗೊಂದು ಆಸೆ. ಮನೆಯಲ್ಲಿ ಒಂದು ಹಸು ಇರಬೇಕೆಂದು. ಆದರೆ ಈ ಬೆಂಗಳೂರಿನಲ್ಲಿ ಅದನ್ನು ಮೇಯಿಸಲು ಎಲ್ಲಿಗೆ ಕಳಿಸುವುದು? ಹಸು ಆರೋಗ್ಯದಿಂದ ಇರಬೇಕಾದರೆ ಅದು ದಿನಕ್ಕೆ ಐದಾರು ಗಂಟೆಗಳವರಿಗಾದರೂ ಓಡಾಡಿ ಮೇಯಬೇಕು. ಕೂತಲ್ಲೇ ಕೂತರೆ ಅದು ನಿಶ್ಪ್ರಯೋಜಕವಾಗುತ್ತದೆ. ನನ್ನ ಕನಸು ಕನಸಾಗಿಯೇ ಉಳಿಯಿತು.


ಹಸು ಮನೆಯಲ್ಲಿದ್ದರೆ ಮನೆಗೆ ಒಳ್ಳೆಯದು ಎಂಬ ಭಾವನೆ ಇದೆ. ಹಸುವಿನ ಪ್ರಯೋಜನ ಎಲ್ಲರಿಗೂ ತಿಳಿದ ವಿಷಯವೇ. ಪಾಕೆಟ್ ಹಾಲಿಗಿಂತ ಹಸುವಿನ ಹಾಲು ಬೆಳೆಯುವ ಮಕ್ಕಳಿಗೆ ಹೆಚ್ಚು ಪುಷ್ಟಿದಾಯಕ ಎಂದು ವಿಜ್ಙಾನವೇ ಹೇಳುತ್ತದೆ. ಅದರ ಮೂತ್ರ, ಸಗಣಿಯಿಂದ ನಿರೋಧಶಕ್ತಿ ಹೆಚ್ಚುತ್ತದೆ. ಮನೆಯಲ್ಲಿ ಹಸುವೊಂದಿದ್ದರೆ ಎಚ್೧ಎನ್೧ ಗೆ ಹೆದರಬೇಕಾಗಿಲ್ಲ ಅಲ್ಲವೇ?
ಈಗ ಯಾಕಪ್ಪ ಇದರ ಬಗ್ಗೆ, ಅದೂ ಬೆಂಗಲೂರಿನಲ್ಲಿ ಅಂತ ಯೋಚನೆ ಮಾಡ್ತಿದಿರಾ? ಭಾರತೀಯ ಹಸುವಿನ ೧೦೦ಕ್ಕೂ ಹೆಚ್ಚು ತಳಿಗಳಲ್ಲಿ ಕೇವಲ ೩೩ ತಳಿಗಲು ಇನ್ನು ನಶಿಸದೇ ಉಳಿದುಕೊಂಡಿದೆ. ಇದರ ಬಗ್ಗೆ ನಾವು ಏನು ಮಾಡುತ್ತಿದ್ದೀವಿ?


ನಮ್ಮ ಇತಿಹಾಸದಲ್ಲಿ ನಾವು ನೋಡುತ್ತೇವೆ, ಹಸುಗಳು ಆಧಾರವಾಗಿದ್ದ ರಾಜ್ಯಗಳು ಬೆಳವಣಿಗೆಯ ಹಾದಿಯಲ್ಲಿ ಸಾಗಿತು. ಆದರೆ ಇತಿಹಾಸದಿಂದ ನಾವು ಯಾವ ಪಾಠವನ್ನೂ ಕಲಿಯುತ್ತಿಲ್ಲ. ನಮ್ಮ ಪ್ರಧಾನ ಉದ್ಯಮ ಕೃಶಿ ಎಂದು ಹೇಳಿಕೊಂಡರೂ, ನಾವು ಪಾಶ್ಚಾತ್ಯದ ಹಾದಿನನ್ನು ಅನುಸರಿಸುತ್ತಿದ್ದೇವೆ. ಹಳ್ಳಿಗಳಿಂದ ರೈತರು ತಮ್ಮ ಬೇಸಾಯವನ್ನು ಬಿಟ್ಟು ಪಟ್ಟಣದ ಕಡೆ ಮುಖ ಮಾಡಿದ್ದಾರೆ. ಅವರನ್ನು ದೂಶಿಸುವುದು ಉಚಿತವಲ್ಲ. ಪಟ್ಟಣಗಳಲ್ಲಿರುವವರು ಲಕ್ಷಗಟ್ಟಲೆ ಸಂಪಾದಿಸಬೇಕಾದರೆ ರೈತರು ಮಾತ್ರ ಹಳ್ಳಿಗಳಲ್ಲೇ ಉಳಿಯಬೇಕು ಎಂದು ನಾವು ಯಾಕೆ ನಿರೀಕ್ಷಿಸಬೇಕು? ಆದರೆ ಹೀಗಯೇ ಮುಂದುವರೆದರೆ, ನಮ್ಮಲ್ಲಿ ಹಣವಿರಬಹುದೇನೋ ಆದರೆ ಉಣ್ಣಲು ಅನ್ನ ಇರುವುದಿಲ್ಲ. ಹೇಗೆ ಕಳೆದ ೨೦-೨೫ ವರುಷಗಳಿಂದ ಪಟ್ಟಣಗಳಲ್ಲಿ ಐಟಿ ಆಂದೋಲನವಾಯಿತೋ ಹಾಗೆ ಈಗ ಕೃಶಿ ಮತ್ತು ಗೋ ಆಂದೋಲನವಾಗಬೇಕು. ಈಗ ನಾವು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಪೀಳಿಗೆಯ ಗತಿ ಅದೋಗತಿ. ಗೋವನ್ನು ಕಾಪಾಡುವುದು ಎಲ್ಲರ ಕರ್ತವ್ಯವಲ್ಲವೇ? ಅದು ಬರಿ ರೈತರಿಗೆ ಸಂಬಂದಪಟ್ಟ ವಿಷಯವೇ?


ಸೆಪ್ಟಂಬರ್ ೩೦ನೇ ತಾರೀಕು ಕುರುಕ್ಷೇತ್ರದಲ್ಲಿ "ವಿಷ್ವ ಮಂಗಲ ಗೋ-ಗ್ರಾಮ ಯಾತ್ರೆ" ಪ್ರಾರಂಭವಾಯಿತು. ಯಾತ್ರೆ ೧೦೮ ದಿನ ನಡೆಯಲಿದ್ದು, ಭಾರತದ ಎಲ್ಲಾ ರಾಜ್ಯಗಳಿಂದಲೂ ಸಾಗಿ ನಾಗಪುರದಲ್ಲಿ ಅಂತ್ಯಗೊಳ್ಳಲಿದೆ. ಬೆಂಗಲೂರಿಗೆ ಡಿಸೆಂಬರ್ ೧ನೇ ತಾರೀಕು ಬರುತ್ತದೆ. ಭಾರತದ ಪ್ರತಿಷ್ಠಿತ ಸ್ವಾಮಿ-ಸಂತರು ಸೇರಿ ಮಾಡುತ್ತಿರುವ ಈ ಕಾರ್ಯಕ್ರಮ, ಹೆಚ್ಚು ಜನರನ್ನು ಗೋ ಸಂರಕ್ಷಣೆಯ ಬಗ್ಗೆ ಜಾಗೃತಗೊಳಿಸಲಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಗೆ http://kan.gougram.org/ ಗೆ ಭೇಟಿನೀಡಿ.


ಇದರಲ್ಲಿ ನಮ್ಮ ಪಾತ್ರವೂ ಇದೆ. ಈ ಯಾತ್ರೆಯ ಫಲ ಹೆಚ್ಚು ಜನರಿಗೆ ಮುಟ್ಟಬೇಕಾಗಿದೆ. ಹೆಚ್ಚೆಚ್ಚು ಜನರು, ರೈತರು, ಕೈಗಾರಿಕೋದ್ಯಮರು, ರಾಜಕಾರಿಣಿಗಳು ಎಲ್ಲರೂ ಇದರಲ್ಲಿ ಪಾಲ್ಗೊಳ್ಳಬೇಕು. ನಮ್ಮ ಸಾಂಸ್ಕೃತಿಕ ಬೆಳವಣಿಗೆಗೆ ಈಗಲೇ ಅಡಿಗಟ್ಟು ಹಾಕಬೇಕಿದೆ. ನೀವೂ ಇದಕ್ಕೆ ಕೈ ಜೋಡಿಸ್ತೀರ ಅಲ್ವಾ?

7 comments:

shivu.k said...

ಸರ್,

ಒಂದು ಉತ್ತಮ ಬರಹ. ಗೋ ಆಂದೋಲನದಲ್ಲಿ ನಾನು ಭಾಗವಹಿಸುತ್ತೇನೆ..

ಬಾಲು said...

ಹೌದು ಒಂದು ಒಳ್ಳೆಯ ಆಂದೋಲನ...

Guruprasad said...

ಹೌದು ರಾಜೀವ ಇದೊಂದು ಉತ್ತಮ ಆಂದೋಲನ,,, ಇದಕ್ಕೆ ನಮ್ಮೆಲ್ಲರ ಸಹಕಾರ ಬೇಕಿದೆ...ಖಂಡಿತವಾಗಿಯೂ ಎಲ್ಲರೂ ಒಟ್ಟಾಗಿ ಪಾಲ್ಗೊಳ್ಳೋಣ ...

Prabhuraj Moogi said...

ಬೆಂಗಳೂರಿನಲ್ಲಿ ಹಸು ಸಾಕಬೇಕೆಂದು ಮನಸು ಮಾಡಿದ್ದೇನೊ ಸರಿ ಮೇಯಲು ಎಲ್ಲಿ ಕಳಿಸುವುದು ಈ ಕಾಂಕ್ರೀಟ ಕಾಡಿನಲ್ಲಿ... ಊರಲ್ಲಿ ಕೂಡ ಸಾಕಲು ಮೇವಿನ ತೊಂದರೆ, ಒಂದು ಕಾಲದಲ್ಲಿ ನಮ್ಮನೆಯಲ್ಲೇ ಹಸುಗಳಿದ್ದವು.

Srinivas Girigowda said...

ಪ್ರಿಯ ಸ್ನೇಹಿತರೆ,

ನಿಮಗೆಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.
ಇಂದಿನ ವ್ಯವಸಾಯದ ಅಧೋಗತಿಗೆ ಹಲವಾರು ಕಾರಣಗಳಿದ್ದು, ಒಂದರ ಹಿಂದೆ ಒಂದು ಹನುಮಂತನ ಬಾಲದ ಹಾಗೆ ಬಿಡಿಸಲಾಗದ ಸಮಸ್ಯೆಗಳ ಸುಳಿಯಾಗಿದೆ. ಬರಿ ಗೋವಿನ ವಿಷಯಕ್ಕೆ ಬರುವುದಾದರೆ ಇಂದು ಮೊದಲಿನ ಹಾಗೆ ತುಂಬು ಸಂಸಾರವಿಲ್ಲ, ಹಾಸು ಸಾಕಿದ್ದದರೆ ಮನೆಯವರು ಒಬ್ಬರಾದರು ನೋಡಿಕೊಳ್ಳಲು ಇರಲೇಬೇಕು. ಈಗಿನ ಗಂಡ ಹೆಂಡತಿ ಸಂಸಾರದಲ್ಲಿ ಜನ ಎಲ್ಲಿ ಸಿಕ್ತಾರೆ. ನಮ್ಮೆಲ್ಲರಿಗೂ ಕಷ್ಟವಿಲ್ಲದೆ ಸುಖ ಬೇಕು, ಅಯ್ಯೋ ಹಾಲು ಬೇಡ ಏನು ಬೇಡ ಆ ಹಸುವಿನ ಚಾಕರಿ ಯಾರು ಮಾಡ್ತಾರೆ ಅಂತ ಎಷ್ಟೋ ಮಂದಿ ಹೇಳಿದ್ದು ಕೇಳಿದ್ದೇನೆ. ನಾನು ನನ್ನ ಅಕ್ಕನಿಗೂ ಎಷ್ಟೋಸಲ ಹಸು ಸಾಕಲು ಹೇಳಿದ್ದಗಳೆಲ್ಲಾ "ಅಯ್ಯೋ ಅದೆಲ್ಲ ಮಾಡೋಕ್ಕೆ ಮನೆ ತುಂಬ ಜನ ಇರ್ಬೇಕು, ಅಷ್ಟೊಂದು ಕೆಲಸ, ಕಳ್ಳರ ಕಾಟ, ಹುಲ್ಲು, ಜಾಗದ ತೊಂದರೆ, ನೆರೆಹೊರೆಯವರ ಬೈಗುಳ" ಅಂತ ಕಾರನಗಳನ್ನು ಹೇಳ್ತಾಇರ್ತಾರೆ.

ರಾಜೀವ said...

ಎಲ್ಲರಿಗೂ ದೀಪಾವಳಿಯ ಹಾರ್ಧಿಕ ಶುಭಾಶಯಗಳು.

@ಶಿವು, ಬಾಲು, ಗುರು,
ಧನ್ಯವಾದ. ಗೋ ಸಂರಕ್ಷಣೆಯಲ್ಲಿ ನಮ್ಮೆಲ್ಲರ ಪಾತ್ರವೂ ಇದೆ.

@ಪ್ರಭು,
ಹೌದು. ಊರಿನಲ್ಲೂ ತೊಂದರೆಯೇ. ಗ್ರಾಮಗಳೂ ಕಾಂಕ್ರೀಟ್ ಮಯ ಆಗುತ್ತಿದೆ.

@ಶ್ರೀನಿ,
ಬೆಂಗಳೂರಿನಂತ ನಗರದಲ್ಲಿ ಹಸು ಸಾಕುವುದು ಅಸಾಧ್ಯದ ಮಾತು ಅನ್ಸತ್ತೆ.
ನಿಮ್ಮ ಅಕ್ಕ ಹೇಳಿದ್ದು ಸೆರಿಯೇ. ಅದಕ್ಕಾಗಿಯೇ ಅವಿಭಕ್ತಕುಟುಂಬ ಇದ್ದದ್ದು ಆಗ.
ಈಗ ಒಂದು ೨೦X೩೦ ಸೈಟ್ ಇದ್ದರೂ ಸಾಕು, ಇಕ್ಕಟ್ಟಾದರೂ ಪರವಾಗಿಲ್ಲ, ಆದರೆ ಬೇರೆಯಾಗಿರಬೇಕು ಅಂತ ಬಯಸುತ್ತಾರೆ.

Ittigecement said...

ರಾಜೀವ...

ನಮ್ಮ ದೇಶಿಯ ಗೋವುಗಳನ್ನು ರಕ್ಷಿಸ ಬೇಕಾದದ್ದು ನಮ್ಮ ಆದ್ಯ ಕರ್ತವ್ಯ...
ಗಾಂಧೀಜೀಯವರೂ ಗೋಹತ್ಯೆ ನಿಷೇಧದ ಪರವಾಗಿದ್ದರು...

ಆದರೆ ಇದು ರಾಜಕೀಯದವರಿಗೆ ಕೇವಲ ಚುನಾವಣೆ ವಿಷಯವಾಗಿಬಿಟ್ಟಿದೆ...

ಇದರಲ್ಲಿ ನಾನು ಪಾಲ್ಗೊಳ್ಳುತ್ತೇನೆ...

ಧನ್ಯವಾದಗಳು...