ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ
ಮಾಮಕಾಃ ಪಾಂಡವಾಶ್ಚೈವ ಕಿಮ ಕುರ್ವತ ಸಂಜಯ
ಭವದ್ಗೀತೆಯ ಈ ಸಾಲು ಎಲ್ಲರಿಗೂ ಚಿರಪರಿಚಿತ. ಕುರುಕ್ಷೇತ್ರ ಮಹಾಯುದ್ಧದ ಮೂಲ ಕಾರಣ, ಈ ಒಂದು ಸಾಲು ಎತ್ತು ತೋರಿಸುತ್ತದೆ. ಮಹಾರಾಜ ಧೃತರಾಷ್ಟ್ರ, ಸಂಜಯನಿಗೆ ಹೇಳುವ ಮಾತಿದು. ಕುರುಕ್ಷೇತ್ರದ ಯುದ್ಧದಲ್ಲಿ ನಡೆಯುವ ಪ್ರಸಂಗಗಳನ್ನು ವಿವರಿಸುವಂತೆ ಸಂಜಯನಿಗೆ ಹೇಳುತ್ತಾನೆ. ಇಲ್ಲಿ ಕೌರವರನ್ನು "ಮಾಮಕಾಃ" ಎಂಬಲ್ಲಿ "ನನ್ನವರು ಮತ್ತು ಪಾಂಡವರು" ಎಂದು ಒಂದೇ ಮನೆಯಲ್ಲೇ ಇದ್ದು ಬೆಳೆದ ಕೌರವ-ಪಾಂಡವರನ್ನು ಬೇರೆಬೇರೆಯಾಗೇ ಕಾಣುತ್ತಾನೆ. ಮೊನ್ನೆ "ವಂದೇ ಮಾತರಮ್" ಹಾಡಿಗೆ ಫತ್ವಾ ಹೊರಡಿಸಲಾಗಿದೆ. ಕಾರಣ, ಮುಸಲ್ಮಾನರು ಬೇರೆ ಯಾರನ್ನೂ ಪೂಜಿಸಬಾರದೆಂದು. ಇವರಿಗೂ ಅಂಧ ಧೃತರಾಷ್ಟ್ರನಿಗೂ ಇರುವ ವ್ಯತ್ಯಾಸ ಇಷ್ಟೇ, ಆ ಅಂಧರಾಜ ರಾಷ್ಟ್ರದ ಹಿತದ ಬಗ್ಗೆ ಯೋಚಿಸದೆ, ತನ್ನ ಮಕ್ಕಳ ಅಧಿಕಾರದ ಸ್ವಾರ್ಥ ಮನೋಭಾವವನ್ನೇ ಬೆಳೆಸಿಕೊಂಡು ಬಂದ. ಇವತ್ತು ಒಂದು ಮತದ ಸ್ವಾರ್ಥಕ್ಕೆ ರಾಷ್ಟ್ರವನ್ನು ಪೂಜಿಸುವ ಗೀತೆಯನ್ನು ತಡೆದು ನಿಲ್ಲಿಸುವ ಪ್ರಯತ್ನ.
ಕುರುಕ್ಷೇತ್ರ ಯುದ್ದದ ಪ್ರಾರಂಭದಲ್ಲಿ ಅರ್ಜುನ ತನ್ನ ಶಸ್ತ್ರಾಸ್ತ್ರಗಳನ್ನು ಕಳಚಿ, ಕೆಳಗಿಟ್ಟು ತಾನು ಯುದ್ಧ ಮಾಡುವುದಿಲ್ಲವೆಂದು ಹೇಳುತ್ತಾನೆ. ಕಾರಣ, ತನ್ನ ಶತ್ರುಸೈನ್ಯದಲ್ಲಿ ಅವನಿಗೆ ಎಲ್ಲರೂ ತನ್ನವರೇ ಕಾಣಿಸುತ್ತಾರೆ (ಸ್ವಜನೇ ಶತೃಸೈನ್ಯೆ). ಕೌರವರಿಗೂ ಪಾಂಡವರಿಗೂ ಇದ್ದ ವ್ಯತ್ಯಾಸ ಈ ಮನೋಭಾವವೇ. ಆದರೆ ತನ್ನವರು ಎಂಬ ಮಮಕಾರಕ್ಕಿಂತ, ರಾಷ್ಟ್ರದ ಹಿತ ಮುಖ್ಯ, ಧರ್ಮವನ್ನು ಕಾಪಾಡುವುದಕ್ಕೆ ಹೆಚ್ಚು ಪ್ರಾಧಾನ್ಯತೆ ಕೊಡಬೇಕೆಂದು ಶ್ರೀ ಕೃಷ್ಣ ನಮಗೆಲ್ಲರಿಗೂ ಗೀತೆಯ ಮೂಲಕ ಸಂದೇಶವನ್ನು ಕೊಟ್ಟಿದ್ದಾನೆ. ಭಗವದ್ಗೀತೆಯ ಪೂರ್ಣ ಸಾರವನ್ನು ತಿಳಿಯಬೇಕಾದರೆ, ಶ್ರೀ ಕೃಷ್ಣನ ಜೀವನ ಚರಿತ್ರೆಯನ್ನು ತಿಳಿಯಬೇಕು.
ವಂದೇ ಮಾತರಮ್ ವಿರುದ್ಧ ಮಾತುಗಳು ಕೇಳುತ್ತಿರುವುದು ಇದೇನು ಮೊದಲನೆಯ ಸಲವಲ್ಲ. ಆದರೆ ಎಷ್ಟು ಸಲ ಇದರ ಬಗ್ಗೆ ಮಾತಾದರೂ, ಇದರ ಬಗ್ಗೆ ಹೆಚ್ಚು ಜನ ಕಾಳಜಿಯನ್ನೇ ತೋರಿಸುವುದಿಲ್ಲ. ಅದು ತಪ್ಪಲ್ಲ. ಕೆಟ್ಟದ್ದನ್ನು ಇಗ್ನೋರ್ ಮಾಡುವುದು ಒಂದು ರೀತಿಯಲ್ಲಿ ಒಳ್ಳೆಯದು. ಇತಿಹಾಸವು ನಮಗೆ ತೋರಿಸುವ ಘೋರಾತಿಘೋರ ವನ್ನಿವೇಷಗಳನ್ನು ನಾವು ಎಷ್ಟು ಬೇಗ ಮರೆತುಬಿಡುತ್ತೇವೆ ಅಲ್ಲವೇ? ಎಲ್ಲವನ್ನೂ ಮರೆತರೆ ಇತಿಹಾಸ ಓದುವುದಾದರೂ ಯಾಕೆ?
ರಮಾಯಣದಲ್ಲಿ ಕೈಕೇಯಿ-ಮಂತರರ ಪಿತೂರಿಯಿಂದ ರಾಮ ಕಾಡಿಗೆ ಹೋಗಬೇಕಾಯಿತು. ಕೈಕೇಯ ರಾಜ್ಯ ಈಗಿನ ಅಫ್ಗಾನಿಸ್ಥಾನ್-ರಶ್ಶ್ಯಾ ಬಾರ್ಡರ್. ಅವರು ಭಾರತಕ್ಕೆ ಬಂದಿದ್ದು ಈಗ ಭಯೋತ್ಪಾದಕರು ಬರುತ್ತಿರುವ ದಾರಿಯಲ್ಲೇ. ಮಹಭಾರತದಲ್ಲಿ, ಗಾಂಧಾರಿ-ಶಕುನಿಯರು ಕೂಡ ಬಂದಿದ್ದು ಅದೇ ದಾರಿಯಲ್ಲೇ. ಈಗಲೂ ನಾವು ಈ ದಾರಿಯನ್ನು ಮುಕ್ತವಾಗಿ ಓಡಾದಲು ಬಿಡುತ್ತಿದ್ದೇವೆ. ಭಾರತೀಯರು ಎಷ್ಟು ಕರುಣಾಮಯಿಗಳು. ಎಲ್ಲರಿಗೂ "ಬನ್ನಿ ಬನ್ನಿ, ನಮ್ಮನ್ನು ದೋಚಿ, ನೀವು ಸುಖವಾಗಿರಿ" ಎಂದು ಸಾರಿ ಸಾರಿ ಹೇಳುತ್ತಿದ್ದಾರೆ. ಇಂತಹವರನ್ನು ತನ್ನ ಭೂಮಿಯಲ್ಲಿ ಹೆತ್ತಿದ್ದಕ್ಕೆ ಭಾರತ ಮಾತೆ ಎಷ್ಟು ಸಂತೋಶ ಪಡುತ್ತಿದ್ದಾಳೋ.
ದ್ವಾಪರಯುಗದಲ್ಲಿ ಶ್ರೀ ಕೃಷ್ಣ, ಸಮುದ್ರದ ನೆಲದಲ್ಲೇ ದ್ವಾರಕೆಯೆಂಬ ನಗರವನ್ನು ನಿರ್ಮಾಣ ಮಾಡಿದ. ಸಮುದ್ರದಿಂದ ಬರುವ ಅಪಾಯಗಳಿಂದ ರಾಷ್ಟ್ರವನ್ನು ಕಾಪಾಡಬೇಕೆಂಬ ಹಿತದೃಷ್ಟಿಯಲಿ. ನಂತರ ಏನಾಯಿತು ನೋಡಿ. ಮಹಮ್ಮದ್ ಘಝ್ನಿ ಸಮುದ್ರಿಂದ ದಾಳಿ ನಡೆಸಿ ಸೊಮನಾಥ ದೇವಾಲಯವನ್ನು ಮಟ್ಟ ಹಾಕಿದ ಎಂದು ಕೇಳ್ಪಟ್ಟೆ. ಇತ್ತೀಚೆಗೆ ನಡೆದ ಮುಂಬೈ ದಾಳಿಯಲ್ಲಿ ಕೂಡ ಭಯೋದ್ಪಾದಕರು ಸಮುದ್ರದಿಂದ ಬಂದಿಳಿದಿದ್ದರು. ಆದರೆ ನಾವು ಭಾರತೀಯರು ತೆರೆದ ಹೃದಯದಿಂದ ಎಲ್ಲರನ್ನೂ ಒಪ್ಪಿಕೊಳ್ಳಬೇಕಲ್ಲವೇ? ಅದಕ್ಕೇ ಹೊಸ ಭದ್ರಕೋಟೆಗಳನ್ನು ಕಟ್ಟುವುದಿಲ್ಲ. ಬೇರೆಯವರು ನಮ್ಮ ಮೇಲೆ ಎಷ್ಟು ಕೈ ಮಾಡಿದರೂ ನಾವು ಅಂತಹ ದುಃಸಾಹಸಕ್ಕೆ ಕೈ ಹಾಕುವುದಿಲ್ಲ. ಸುಭಾಶ್ ಚಂದ್ರ ಬೋಸ್ ಅವರ "ಇಂಡಿಯನ್ ನಾಶನಲ್ ಆರ್ಮಿ" ಇಂದ ನಮಗೆ ಸ್ವಾತಂತ್ರ್ಯ ಬಂದಿದ್ದು ನಿಜವಾದರೂ, ನಾವು ಅದನ್ನು ಒಪ್ಪುವುದಿಲ್ಲ. ಯಾಕೆಂದರೆ ನಾವು ಅಹಿಂಸಾವಾದಿಗಳಲವೇ?
ಅರ್ಜುನ, ಚಂದ್ರಗುಪ್ತರು ನಮಗೆ ಸಿಗಬಹುದೇನೋ. ಆದರೆ ಅವರ ಸಾರಥಿಯಾಗಿ ಒಬ್ಬ ಶ್ರೀ ಕೃಷ್ಣ, ಚಾಣಕ್ಯ ಅಥವಾ ವಿವೇಕಾನಂದ ಬರಬಾರದೇ?
6 comments:
ಅಲಗಿನ ಮೊನೆಯಿಂದ ಜನತೆಗೆ ಧರ್ಮ ಕಲಿಸುವ ಪ್ರವೃತ್ತಿಯನ್ನು ಇಸ್ಲಾಂ ತೊರೆಯುವವರೆಗೆ ಭಾರತ ವರ್ಷದಲ್ಲಿ ಮಾತ್ರವೇ ಅಲ್ಲ ವಿಶ್ವದಲ್ಲೆ ಯುದ್ದ ಮತ್ತು ಅಶಾಂತಿ ಅನಿವಾರ್ಯ. (ಶ್ರೀ ವಿದ್ಯಾರಣ್ಯರು)
ಅವರಿಗೆ ದೇಶಭಕ್ತಿ ಎನ್ನುವುದಿರಲು ಸಾಧ್ಯವೇ ಇಲ್ಲ. ಅಂತಹ ಒಂದು ನಾಟಕ ಆಡಬಹುದಷ್ಟೆ.
ಲೇಖನ ಚೆನ್ನಾಗಿದೆ
ಒಳ್ಳೆಯ ಲೇಖನ ರಾಜೀವ್...
ನಾವು ನಮ್ಮ ಧರ್ಮವನ್ನು ಯಾರ ಮೇಲೂ ಬಲವಂತವಾಗಿ ಹೇರುವುದಿಲ್ಲವಲ್ಲ... ಯಾವ ಧರ್ಮದ ದೇವರುಗಳನ್ನೂ ಅವಮಾನ ಪಡಿಸುವುದಿಲ್ಲವಲ್ಲ... ಆದರೂ ಏಕೆ ನಮ್ಮ ಮೇಲೆ ಈ ರೀತಿಯ ದೈಹಿಕ, ಮಾನಸಿಕ, ದಾಳಿಗಳನ್ನು ಇತರ ಧರ್ಮದವರು ಮಾಡುತ್ತಾರೆ? ಅವರಿಗೆ ಎಲ್ಲಕ್ಕಿಂತ ಮೊದಲು ದೇಶ ಎನ್ನುವುದನ್ನು ಹೇಗೆ ಕಲಿಸಬೇಕೋ?
ಶ್ಯಾಮಲ
ತುಂಬ ಒಳ್ಳೆಯ ಲೇಖನ ರಾಜೀವ,,,, ಹೌದಲ್ವ,, ನಮ್ಮ ಒಳ್ಳೆ ತನವೇ. ನಮಗೆ ಮುಳುವಾಗುತ್ತಿದೆ....ವಾಸ್ತವದ ಜೊತೆ, ಇತಿಹಾಸದ ಉದಾಹರಣೆಯನ್ನು ಕೊಟ್ಟು,, ಚೆನ್ನಾಗಿ ಬರೆದಿದ್ದೀರ...
ಎಲ್ಲರಿಗೂ ನಮಸ್ಕಾರ
ಲೇಖನ ಚೆನ್ನಾಗಿದೆ. ಇದು ಸಣ್ಣ ವಿಷಯವಲ್ಲ ಎಷ್ಟು ಗಂಟೆ, ಎಷ್ಟು ಪುಸ್ತಕ ಬರೆದರು ಮುಗಿಯುವುದೇ ಇರುವ ಶೀರ್ಷಿಕೆ. ಆದರೂ ನಿಮ್ಮ ಪ್ರಯತ್ನಕ್ಕೆ ನನ್ನ ಧನ್ಯವಾದಗಳು.
ಅವತಾರ ಪುರುಷ ಭಗವಂತ ಶ್ರೀಕೃಷ್ಣ ಪರಮಾತ್ಮನು ಭಗವದ್ಗೀತೆಯ ಮೂಲಕ ಜೀವನದ ಮೌಲ್ಯ, ಸಾರ್ಥಕತೆಯನ್ನು ಜಗತ್ತಿಗೆ ಅರ್ಥ್ಯಿಸಿದ್ದಾನೆ. ಹಾಗೆಯೇ ಆ ಆ ಧರ್ಮದವರು ತಮ್ಮ ತಮ್ಮ ಧರ್ಮ ಗ್ರಂಥವನ್ನು ಪೂಜಿಸುವುದು ಸರಿಯೇ. ಆದರೆ ಸ್ವಾಮಿ ವಿವೇಕಾನಂದರು ತಮ್ಮ ಚಿಕಾಗೋ ಭಾಷಣದಲ್ಲಿ ಹೇಳಿದಂತೆ (http://www.youtube.com/watch?v=ShrD0zjPGrs) ಎಲ್ಲ ಧರ್ಮದವರು ಬಾವಿಯೊಳಗಿನ ಕಪ್ಪೆಯಂತೆ; ಬಾವಿಯನ್ನೇ ಸಮುದ್ರವೆಂದು ತಿಳಿದು ಅದರಿಂದ ಹೊರಬರದೆ ಕಚ್ಚಾಡುತ್ತಿದ್ದಾರೆ.
"ವಂದೇ ಮಾತರಂ" ವಿಷಯವಾಗಿ; ಮುಸ್ಲಿಮರು "ಅಲ್ಲ" ನ ಬಿಟ್ಟು ಬೇರೆ ಯಾರಿಗೂ ತಲೆಬಾಗಬಾರದು ಎಂದು ಹೇಳಿದ್ದುಂಟು.
"ದೇಶ ಸೇವೆಯೇ ಈಶ ಸೇವೆ"; ಅವರು ದೇಶಕ್ಕೆ ತಲೆ ಬಾಗದಿದ್ದರೆ ಬೇಡ "ಕುರಾನ್" ನಲ್ಲಿ ಇರುವ ಅರ್ಥವನ್ನು ಅರಿತುಕೊಂಡು ಅದರಂತೆ ನಡೆದುಕೊಂಡರೆ ಸಾಕು.
ನಾವು ಭಾರತೀಯರು "ಗಿಡವಾಗಿ ಬಗ್ಗಿಸದೆ ಅದು ಮರವಾಗಿ ಹೆಮ್ಮರವಾಗಿ ಪ್ರಾಣಕ್ಕೆ ಸಂಚಕಾರ ಬಂದಾಗ ಒದ್ದಾಡುವ ಮನೋಭಾವದವರು". ರಾಮ ಇದ್ದಾಗ ರಾವಣ ಇದ್ದ; ಭೀಮ ಇದ್ದಾಗ ದುರ್ಯೋದನ ಇದ್ದ ಹಾಗೆ ಎಲ್ಲ ಕಾಲಕ್ಕೂ ಕೀಚಕರು ಇದ್ದೆ ಇರುತ್ತಾರೆ. ಆದರೆ ಅವರನ್ನು ಸದೆಬಡಿದು ಧರ್ಮಕ್ಕೆ ಜಯ ಎಂದು ಸಾರುವ ಧೀರತನ ನಮಗಿರಬೇಕು.
ಭಾರತದ ಸ್ವಾತಂತ್ರ್ಯಕ್ಕೆ ಮೂಲ ಕಾರಣ ಪುರುಷ ನೇತಾಜಿ ಸುಭಾಷ್ ಚಂದ್ರ ಬೋಸ್ ಸೆ ಹೊರತು ಮಹಾತ್ಮಾ ಗಾಂಧಿ ಅಲ್ಲ. ಗಾಂಧಿಯವರ ಆದರ್ಶಗಳು ನನಗು ಅಚ್ಚು ಮೆಚ್ಚು. ಆದರೆ ನಮ್ಮ ನಾಯಕರು ಇತಿಹಾಸವನ್ನು ತಿರುಚಿ ಮರುಚಿ ನಮ್ಮ ಜನರ ಕಣ್ಣಿಗೆ ಮಣ್ಣು ಎರಚಿರುವುದು ವಿಷಾದನೀಯ. ಈ ಲೇಖನದ ಹಿಂದೆ ಇರುವ ಎಷ್ಟೋ ವಿಷಯಗಳು ಅಪ್ಪಟ ದೇಶಪ್ರೇಮಿಯಾದ ನಾಥೂರಾಮ್ ಗೋಡ್ಸೆಯನ್ನು ಗಾಂಧಿಯ ಸಾವಿಗೆ ಕಾರಣನಾಗಲೂ ಪ್ರೇರೇಪಿಸಿತ್ತು.
ದೇಶದ ಬಗ್ಗೆ ಹುರುಳಿಲ್ಲದೇ ಘಂಟೆ ಘಂಟೆ ಮಾತಾಡುವ ನಮ್ಮ ಜನ ಮೊದಲು ದೇಶದ ಬಗ್ಗೆ ಭಯ ಮೂಡಿಸಿಕೊಳ್ಳಬೇಕು ನಂತರ ಭಕ್ತಿ. ಏಕೆಂದರೆ ಭಯದ ಮಗಳೇ ಭಕ್ತಿ.
ಹೌದು! ದೇಶವನ್ನು ಮುನ್ನಡೆಸುವ ಧೀರ ಸಾರಥಿಯ ಅವಶ್ಯಕತೆ ಭಾರತಕ್ಕಿದೆ.!!!
ಕೊನೇ ಸಾಲಂತೂ ಯೋಚನೆಗೀಡು ಮಾಡಿಡುತ್ತದೆ... ಅರ್ಜುನ ಎಂಥ ಶೂರನಿದ್ದರೇನಂತೆ, ಕೃಷ್ಣ ಸಾರಥಿಯಿದ್ದದ್ದರಿಂದಲೇ ಯುಧ್ಧ ಮಾಡಿದ್ದು...
ಇತಿಹಾಸದಿಂದ ಕಲಿಯುವುದು ಬಹಳ ಇದೆ, ಆದರೆ ಬಹಳಷ್ಟು ಇತಿಹಾಸವನ್ನೇ ತಿರುಚಲಾಗಿದೆ ಎನ್ಮಾಡೊದು.
@ಪ್ರಸನ್ನ ಅವರೇ,
ಅದು ಅಷ್ಟು ಸುಲಭವಾಗಿ ಆದೀತೆ? ಪರಿವರ್ತನೆ ಆಗಬೇಕಾಗಿದೆ. ನಿಜ. ನೋಡೋಣ ಯಾವ ರೀತಿಯಲ್ಲಿ ಸಫಲಗೊಳ್ಳುವುದೋ?
ನಮ್ಮಲ್ಲಿ ಒಗ್ಗಟ್ಟು ಇಲ್ಲದೆ ಬೇರೆಯವರನ್ನು ಇಲ್ಲಗಳಿಸಲು ಆಗುವುದಿಲ್ಲ ಅಂತ ನನ್ನ ಅಭಿಪ್ರಾಯ.
@ಶ್ಯಾಮಲ ಅವರೇ,
ನಮ್ಮ ಮೇಲೆ ದಾಳಿ ಆಗುತ್ತಿರುವುದು ಯಾಕೆಂದರೆ ನಾವು ಅದನ್ನು ಮಾಡಿಸಿಕೊಳ್ಳುತ್ತಿದ್ದೀವಿ ಅದಕ್ಕೆ, ಅಲ್ಲವೇ?
ನಿಮ್ಮ ಎರಡನೇ ಪ್ರಶ್ನೆಗೆ ನನ್ನಲ್ಲಿ ಉತ್ತರವಿಲ್ಲ. ನಾವು ಒಗ್ಗಟ್ಟಾದರೆ, ನಮ್ಮ ತೊಂದರೆಗಳು ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದೇನೋ.
ಪ್ರತಿಕ್ರಿಯೆಗೆ ಧನ್ಯವಾದಗಳು.
@ಗುರು,
ಹೌದು. ತೊಂದರೆ ಏನೆಂದರೆ, ಒಲ್ಲೆಯವರು ಯುದ್ಧ ಮಾಡಬಾರದು ಎಂಬ ತಪ್ಪು ಕಲ್ಪನೆ ಕೆಲವರಲ್ಲಿದೆ.
ಅದು ದೂರವಾಗಬೇಕು.
@ಶ್ರೀನಿ,
ಎಷ್ಟು ಬೇಕಾದರೂ ಬರಿಯಬಹುದು ಇದರ ಬಗ್ಗೆ ನಿಜ. ಅದಕ್ಕೆ ನಾನು ಹೇಳಿದ್ದು ನೀನೂ ಬರಿಯಕ್ಕೆ ಪ್ರಾರಂಭ ಮಾಡು ಅಂತ.
ನಿನ್ನ ರೀತಿ ಬೇರೆಯವರಿಗೆ ಬರೆಯುವುದು ಸುಲಭದ ಕೆಲಸವಲ್ಲ. ನಿನ್ನಲ್ಲಿ ಸಧಾರಣವಾಗಿ ಬಂದಿರುವಂತಹ ಕಲೆ ಅದು.
ನೀನು ಕೊಟ್ಟಿರುವ ಯೂಟ್ಯೂಬ್ ಕೊಂಡಿಗೆ ಧನ್ಯವಾದ.
ಧೀರ ಸಾರಥಿಯು ಎಲ್ಲಿದ್ದಾನೋ!!
@ಪ್ರಭು,
ಕೃಷ್ಣ ಇಲ್ಲದಿದ್ದರೆ ಅರ್ಜುನನ ಶೊರ್ಯಕ್ಕೆ ಬೆಲೆ ಎಲ್ಲಿರುತ್ತಿತ್ತು?
ರಾಮಾನುಜಾಚಾರ್ಯರು ಇಲ್ಲದಿದ್ದರೆ ವಿಷ್ನುವರ್ಧನನಿಗೆ ಬೆಲೆ ಎಲ್ಲಿರುತ್ತಿತ್ತು?
ಇತಿಹಾಸ ತಿರುಚಿದರೂ ಸತ್ಯವನ್ನು ತಿರುಚಲಾದೀತೇ?
Post a Comment