Tuesday, December 1, 2009

ವೃತ್ತಿಧರ್ಮದ ದ್ವಂದ್ವ

ನಾನು ಒಬ್ಬ "ಐಟಿ"ಗ. "ಐಟಿ" ಎಂದ ತಕ್ಷಣ ನಮ್ಮ ಮನಸ್ಸಿಗೆ ಹಲವಾರು ಗುಣಗಳು ಮೋಡುವುದು ಸಹಜ. ಬೆಂಗಳೂರಿನಲ್ಲಿ ಇರುವವರಿಗೆ ಇದರ ಬಗ್ಗೆ ಗೊತ್ತಿರುವುದು ಸರ್ವೇ ಸಾಮಾನ್ಯ.


ಪ್ರಶ್ನೆ: ಮತ್ತೆ ಇವಾಗ ಯಾಕಪ್ಪಾ ಇದರ ಬಗ್ಗೆ ಚರ್ಚೆ?
ಉತ್ತರ: ಇತ್ತೀಚಿನ ದಿನಗಳಲ್ಲಿ ನನ್ನ ತಲೆಯಲ್ಲಿ ಕೊರೆಯುತ್ತಿರುವ ವಿಷಯದ ಹುಳ ನಿಮಗೂ ಹಾಕೋಣಾ ಅಂತ.


ಭಾರತೀಯರು ತಮ್ಮ ಪುರಾತನ ಐತಿಹಾಸಿಕ ಸಂಸ್ಕೃತಿಯನ್ನು ಪಾಲಿಸುತ್ತಿಲ್ಲ ಅಂತ ದೂರುವವರು ಇದ್ದಾರೆ. ಒಂದು ರೀತಿಯಲ್ಲಿ ಅದು ಸತ್ಯವೇ (ಇದರ ಬಗ್ಗೆ ಚರ್ಚೆ ಬೇಡ). ಆದರೆ ಇದಕ್ಕೆ ’ಐಟಿ’ಯೇ ಕಾರಣ ಅಂತ ಹೇಳುವವರಿದ್ದಾರೆ. ಐಟಿನವರಿಂದಲೇ ಗಾರ್ಡನ್ ಸಿಟಿ ಪಬ್ ಸಿಟಿಯಾಯಿತು, ಅಂತ ನಮ್ಮನ್ನೇ ದೂಷಿಸ್ತಾರೆ.


ಪ್ರಶ್ನೆ: ಇದನ್ನೆಲ್ಲಾ ನೀನು ನಂಬ್ತೀಯಾ?
ಉತ್ತರ: ಗೊತ್ತಿಲ್ಲ. ಆದರೆ ನನಗೆ ತಿಳಿದವರ ವೃತ್ತಿಯಲ್ಲಿ ತಮ್ಮ ಮನೆತನದ ಆಚರಣೆಗಳನ್ನು ಕಳಚಿ, ತಮ್ಮ ಐಟಿ ಕೆಲಸವೇ ಮಹಾನ್ ಕಾರ್ಯ, ಸಮಯವೆಲ್ಲಾ ಈ ಕೆಲಸಕ್ಕೇ ಹಾಕಬೇಕು ಎಂದು ಹೇಳುವವರೇ ಹೆಚ್ಚು ಇದ್ದಾರೆ.


ಐಟಿ ಕೆಲಸ, ಸಮಾನ್ಯ ಬೇರೆ ಎಲ್ಲ ಕೆಅಸಗಳಂತೆ ಒಂದು ಅಷ್ಟೆ. ಆದರೆ ನಮಗೆ ಅದು ಹೆಚ್ಚು ದಿಮಾಂಡಿಂಗ್ ಅಂತ ಅನಿಸುವುದು ಅದರ ಕಾಂಪಿಟಿಟಿವ್ನೆಸ್ಸ್ ಇಂದ. ಅಂದರೆ, ನಾನು ನನ್ನ ಕೆಲಸಗಳನ್ನು ಮುಗಿಸುವುದಕ್ಕೆ ಇಷ್ಟು ಸಮಯ ಬೇಕು ಎಂದು ನಿರ್ದಿಷ್ಟವಾಗಿ ಹೇಳುವುದಕ್ಕೆ ಆಗುವುದಿಲ್ಲ. ಯಾಕೆಂದರೆ, ಅದು ಬೇರೆಯವರು ಎಷ್ಟು ಕೆಲಸ ಮಾಡುತ್ತಾರೆ ಅನ್ನುವುದರ ಆದಾರದ ಮೇಲೆ ನಿಂತಿದೆ.


ಪ್ರಶ್ನೆ: ಇಂತಹ ಕಾಂಪಿಟಿಟಿವ್ನೆಸ್ಸ್ ಬೇರೆ ಕ್ಷೇತ್ರದಲ್ಲು ಇರಬಹುದಲ್ಲಾ?
ಉತ್ತರ: ಇರಬಹುದು. ಆದರೆ ಬೇರೆ ಕ್ಷೇತ್ರದಲ್ಲಿ ನಿರ್ದಾಕ್ಷಿಣ್ಯವಾಗಿ ಕೆಲಸದಿಂದ ಕಿತ್ತುಹಾಕುವುದು ಕಡಿಮೆ. ಕೆಲಸದ ಭಯ (ಇನ್ಸೆಕ್ಯೂರಿಟಿ ಫೀಲಿಂಗ್) ಐಟಿಯಲ್ಲಿ ಹೆಚ್ಚು.


ಪ್ರಶ್ನೆ: ಬೇರೆ ಎಷ್ಟೋ ಜನ ಕೆಲಸ ಕಳ್ಕೊಂಡಿಲ್ವಾ? ಬಾಂಕು, ಸಪ್ಪೋಟು ಇಟಿಸಿ.
ಉತರ: ಹೌದು. ಇಲ್ಲಿ ಐಟಿ ಅಂದರೆ ಎಮ್‍ಎನ್‍ಸಿ ಅಂತ ಹೇಳ್ಬಹುದಾ ಹಾಗಿದ್ದರೆ? ಎಮ್‍ಎನ್‍ಸಿನವರಿಗೆ ಮಾನವೀಯತೆ ಸ್ವಲ್ಪ ಕಡಿಮೆ ;-)


ವೈಯಕ್ತಿಕವಾಗಿ ನಾನು ಇಂತಹ ಮಾತುಗಳನ್ನು ಒಪ್ಪುವುದುಲ್ಲ. ನಾನು ಕೂಡ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿತ್ತಿದ್ದೀನಿ. ಆದರೆ ನನ್ನ ಕೆಲಸ ನನ್ನ ಪ್ರವೃತ್ತಿಗೆ ಅಡ್ಡಿ ಬಂದಿತೆಂದು ನನಗೆ ಅನಿಸುವುದಿಲ್ಲ. ಆದರೆ ಐಟಿನವರು ತಮ್ಮ ಮನೆತನದ ಸಂಸ್ಕೃತಿಯನು ಮರೆಯುತ್ತಿರುವುದು ನಿಜವಲ್ಲವೇ? ಸೋ ... ಇಲ್ಲಿ (ಐಟಿನಲ್ಲಿ) ಅದೊಂತರಾ ಸೆಳೆತನ ಇದೆ ಅಂತ ಅರ್ಥ ಅಲ್ವಾ? ನನ್ನಲ್ಲೂ ಈ ಆಕರ್ಷಣೆ ಮೂಡಿದ್ರೆ? ನಾನೂ ಹೀಗೇ ಎಲ್ಲರಂತೆ ಇಲ್ಲೇ ಕೊಳಿಬೇಕಾ? ಇದಿಲ್ಲದಿದ್ದರೆ ಏನು ಮಹಾ? ಸುಮ್ಮನೆ ಇಲ್ಲಿಂದ ಹೊರಗೆ ಬಂದು ಮತ್ತೇನಾದರೂ ಮಾಡುವುದರ ಬಗೆ ಯೋಚಿಸಬಹುದಲ್ಲವೇ!!


ಪ್ರಶ್ನೆ: ಯಾಕೆ ಕೆಲಸ ಬೀಡಬೇಕು? ಕೆಲಸ ಇಷ್ಟ ಆಗ್ತಿಲ್ವಾ?
ಉತ್ತರ: ಕೆಲಸ ಇಷ್ಟ. ನನಗೇನು ತೊಂದರೆ ಇಲ್ಲ ಇಲ್ಲಿ. ಒಳ್ಳೆ ಹೆಸರೂ ಇದೆ. ಯಾರ ಜೊತೆನೂ ಜಗಳವಾಡಿಲ್ಲ. ನಾನೇನು ರಾತ್ರಿಯೆಲ್ಲ ಕೂತು ಕೆಲಸ ಮಾಡ್ಬೇಕಿಲ್ಲ. ಬರಿ ೬ ಗಂಟೆವರಿಗೆ ಅಷ್ಟೆ. ಆದರೆ ಬೇರೆಯವರ ದೃಷ್ಟಿಕೋನ ಬೇರೆ ರೀತಿಯಲ್ಲಿ ಇದೆ. ಮಾತುಮಾತಿಗೂ ಅವರು ಕೇಳುವ ಪ್ರಶ್ನೆ "ನೀನು ಐಟಿನಲ್ಲಿ ಇದಿಯಾ. ಯಾವ ತೊಂದರೆಯೂ ಇಲ್ಲ. ಅದಕ್ಕೆ ನಿನಗೆ ನಮ್ಮ ಕಷ್ಟ ಅರ್ಥ ಆಗಲ್ಲ" ಅಂತ. ಮುಂದೆ ನಾನೇನು ಮಾತಾಡ್ಲಿ?


ಪ್ರಶ್ನೆ: ಇದನ್ನು ಬಿಟ್ಟು ಇನ್ನೇನು ಮಾಡ್ಬೇಕು ಅಂತ ಯೋಚನೆ ಮಾಡ್ತಿದೀಯ?
ಉತ್ತರ: ಗೊತ್ತಿಲ್ಲ.


ಪ್ರಶ್ನೆ: ಶಿಕ್ಷಣ ಕ್ಷೇತ್ರಕ್ಕೆ ಕಾಲಿಡುವ ಪ್ಲಾನ್?
ಉತ್ತರ: ನನ್ನ ಪ್ರಕಾರ, ಶಿಕ್ಷಣ ಕ್ಷೇತ್ರಕ್ಕೆ ಹೋಗಬೇಕಾದರೆ ಕೆಲವೊಂದು ಅರ್ಹತೆಗಳಿರಬೇಕು. ಈಗ ಸಧ್ಯಕ್ಕೆ ಅದು ನನಗೆ ಇದೆ ಅಂತ ನನಗೆ ಅನಿಸುತ್ತಿಲ್ಲ. ಸುಮ್ಸುಮ್ನೆ ಎಲ್ಲರೂ ಅಲ್ಲಿಗೆ ಹೂಗಕ್ಕಾಗಲ್ಲ.


ಪ್ರಶ್ನೆ: ಮುಂದೆ ಏನು ಅಂತ ಗೊತ್ತಿಲ್ದೇನೆ ಇದ್ದರೆ ಹೇಗೆ? ಹೊಟ್ಟೆಗೆ ಏನು ಮಾಡ್ತೀಯ?
ಉತ್ತರ: ದೇವರು ಏನಾದ್ರು ಒಂದು ದಾರಿ ತೋರಿಸ್ತಾನೆ.


ಪ್ರಶ್ನೆ: ನಿನಗೆ ಇನ್ನೂ ಮದುವೆ ಕೂಡ ಆಗಿಲ್ಲ. ಕೆಲಸಾನೂ ಇಲ್ಲದಿದ್ರೆ ನಿನಗೆ ಯಾರು ಹೆಣ್ಣು ಕೊಡೊಲ್ಲ.
ಉತ್ತರ: !!!


ಪ್ರಶ್ನೆ: ಉದ್ಯೋಗಂ ಪುರುಷಲಕ್ಷಣಂ.
ಉತ್ತರ: ಹೌದು. ಆದರೆ ಉದ್ಯೋಗ ಅಂದ್ರೆ ಏನು? ದುಡ್ದು ಸಂಪಾದಿಸುವ ಕೆಲಸಮಾತ್ರವೇ ಉದ್ಯೋಗವೇ? ಮನೆಯಲ್ಲಿ ಗಾರ್ಡನಿಂಗ್, ವೇದಪಾಠ, ಬ್ಲಾಗಿಂಗ್, ಸಮಾಜ ಸೇವೆ, ಓದು, ಅಂತ ಆಕ್ಟಿವ್ ಆಗಿ ಇದ್ದರೆ ಅದು ಉದ್ಯೋಗ ಅಂತ ಅನ್ನಿಸ್ಕೊಳಲ್ವಾ? ಬರೀ ದುಡ್ಡಿನಿಂದ ಇದನ್ನು ಅಳಿಯಬೇಕಾ?
....
....
ಪ್ರಶ್ನೆ: ಇವಾಗ ಏನು ನಿನ್ನ ಪ್ರಾಬ್ಲಮ್ಮು?
ಉತ್ತರ: ಇವತ್ತು "ವಿಶ್ವ ಮಂಗಲ ಗೌ ಗ್ರಾಮ ಯಾತ್ರೆ"ಯ ಸಮಾವೇಶ ಬೆಂಗಳೂರಿನಲ್ಲಿ ಇದೆ. ಆದರೆ ನನಗೆ ಹೋಗಕ್ಕೆ ಅಗ್ತಿಲ್ಲ. ಇಲ್ಲಿ ನನ್ನನ್ನು ಯಾರು ಕಾಟ್ಟಾಕಿಲ್ಲ. ಆದರೆ ವೃತ್ತಿಧರ್ಮ ಅಂತ ಇದೆಯಲ್ಲಾ? ನನ್ನ ಜವಾಬ್ದಾರಿಯನ್ನ ಬಿಟ್ಟು ಹೋಗಕ್ಕೆ ಮನಸ್ಸಿಲ್ಲ. ಬಿಡುವುದಕ್ಕೂ ಮನಸ್ಸಿಲ್ಲ.


ಓಓಓ ಹಾಗೆ!!!


ಎಲ್ಲವೂ ದ್ವಂದ್ವಮಯವಾಗಿದೆ. ಇಷ್ಟೊತ್ತು ಏನೇನು ಬರ್ದೆ ಅಂತ ಕೂಡ ಗೊತ್ತಾಗ್ತಿಲ್ಲ. ನಿಮಗೇನಾದ್ರು ಅರ್ಥ ಆಯ್ತಾ?

ಚಿತ್ರ: ಅಂತರ್ಜಾಲ

7 comments:

Murali said...

Awesome!!! I Could see myself in every aspect of what u have said. This is how i look at life. Life is right now, right now.

There was this single mother who had a only son. He grew, n one day she got him married. as the new couple bowed to the feet of the holy mother, she said, "This is the happiest day of my life!!!", Son asked, "How come Mamma, the day u got married, isn’t that the happiest?", She politely replied, that was happiest then, this is happiest now.

We take on games in life, we accomplish that n then we move on.

What do we need to get is, our life is not ours alone, there r many who r significant to us. Family (Appa, Amma, Siblings, Extended Family), people who r dependent rather who r soon to be dependent on us, friends, Society, Self. For me its Students too!!

Keeping all these at the background, it’s just the conscious choice of what’s next?
Remember, u will solely be responsible for whatever you did n whatever u dint!!!!

All the best.

shivu.k said...

ಸರ್,

ನಿಜಕ್ಕೂ ನಿಮ್ಮ ಮನದ ದ್ವಂದ್ವ ಚೆನ್ನಾಗಿ ಅರ್ಥವಾಗುತ್ತದೆ. ಆದ್ರೆ ನಿಮ್ಮ ಕೆಲಸ[ಎಲ್ಲರಿಗೂ ಅವರವರ ಕೆಲ್ಸವೆಂದರೆ ಹೀಗೆ]ಒಂಥರ ಕಟ್ಟಿಕೊಂಡ ಹೆಂಡ್ತಿ ತರ. ಅವಳು ಹೇಗಿದ್ದರೂ ಹೊಂದಿಕೊಳ್ಳಲೇ ಬೇಕು. ಬಿಡುವ ಆಗಿಲ್ಲ ಆಗಿದೆ ಅಲ್ವಾ ನಿಮ್ಮ ಪರಿಸ್ಥಿತಿ...[ಎಲ್ಲರ ಪರಿಸ್ಥಿತಿಯೂ ಹೀಗೆ ಅನ್ನಿಸುತ್ತೆ..]

Raghu said...

ವೃತ್ತಿಧರ್ಮದ ದ್ವಂದ್ವ ತುಂಬಾ ಚೆನ್ನಾಗಿದೆ.. ಎಸ್ಟೆಲ್ಲ ಪ್ರಶ್ನೆಗಳಿವೆ...!
ನಿಮ್ಮವ,
ರಾಘು.

ರಾಜೀವ said...

@Murali,

Dont ever tell me this is all because of Forum ;-)
The problem is, practical life is more than this theory.
These are nice to read, not so handy when it comes to following it.

@ಶಿವು ಅವರೇ,
ಕೆಲಸ ನಿಅವಾಗ್ಲೂ ಚನ್ನಾಗೇ ಇದೆ. ಅದಕ್ಕೇ ದ್ವಂದ್ವ್ವ. ಇಲ್ಲದಿದ್ದರೆ, ಯಾವತ್ತೋ ಬಿಟ್ತುಬಿಡುತ್ತಿದ್ದೆ ಅಂಸತ್ತೆ.
ಆದರೆ ಹೇಳುವಷ್ಟು ಸುಲಭ ಅಲ್ಲ ಈ ಐಟಿ ಸೆಳೆತದಿಂದ ತಪ್ಪಿಸಿಕೊಳ್ಳುವುದು.
ಪ್ರತಿಕ್ರಿಯೆಗೆ ಧನ್ಯವಾದ.

@ರಘು,
ಹು ಕಣ್ರಿ. ಬರೀ ಪ್ರಷ್ನೇಗಳೆ ತುಂಬಿದೆ ಸಧ್ಯದಲ್ಲಿ.
ಉತ್ತರ ಸಿಕ್ಕಿದರೆ ನಮಗೂ ತಿಳಿಸಿ ;-)

Prabhuraj Moogi said...

ನಿಮ್ಮ ದ್ವಂದ್ವವೇ ನನ್ನದೂ ಕೂಡ... ಗೆಳೆಯರೊಂದಿಗೆ ಮಾತಾಡೊವಾಗ ನೀವ್ ಬಿಡಪ್ಪ ಐಟಿ ಅಂದಾಗ ಎಲ್ಲಾ ಹೀಗೇ ಗೊಂದಲಗಳು ಮೂಡುತ್ತವೆ... ಈ ವೃತ್ತಿ ನಡುವೆ ಪ್ರವೃತ್ತಿಗೆ ಸಮಯವೇ ಸಿಗುವುದಿಲ್ಲ...

ದಿನಕರ ಮೊಗೇರ said...

ರಾಜೀವ್ ಸರ್,
ನಿಮ್ಮ ಈ ಪ್ರಶೆಗಳನ್ನು ನಾನೂ ಸಹ ತುಂಬಾ ಜನರಿಗೆ ಕೇಳಿದ್ದೇನೆ.... ಅವರೂ ನಿರುತ್ತರರಾಗಿದ್ದಾರೆ.... ನಿಮ್ಮ ಹಾಗೆ.... ಆದರೆ ಆ ಮೌನದ ಹಿಂದೆ ಇವೆಲ್ಲಾ ಪ್ರಶ್ನೆಗಳಿವೆ ಎಂದು ಈಗ ಗೊತ್ತಾಯಿತು.... ತುಂಬಾ ಚಿಂತನೆಗೆ ಹಚುವ ಬರಹನಿಮ್ಮದು.....

ರಾಜೀವ said...

@ಪ್ರಭು,
ನೀವೂ ನಮ್ಮ ಕಾಟಗೊರಿ ಅಂತ ತಿಳಿದು ಕುಶಿ ಆಯ್ತು.
ಹೌದು ಕಣ್ರಿ, ಐಟಿ ಅಂದ ತಕ್ಷಣ ಸುಖವಾಗಿರಬಹುದು ಅನ್ನುವ ಕಲ್ಪನೆ ಕೆಲವರಿಗೆ.
ಇರ್ಲಿ ಬಿಡಿ ಅವರ ತಪ್ಪಲ್ಲ ಅದು, ಈ ಐಟಿನಲ್ಲಿರುವ ಕೆಲವರು ವರ್ತಿಸುವ ರೀತಿಯೂ ಅಂತಹದೇ.

<< ಪ್ರವೃತ್ತಿಗೆ ಸಮಯವೇ ಸಿಗುವುದಿಲ್ಲ >>
ಇದನ್ನು ಒಪ್ಪುವುದಿಲ್ಲ. ಸಮಯ ಖಂದಿತ ಇದೆ. ನಾವು ಮಾಡ್ಕೋಬೇಕು ಅಷ್ಟೆ.
ಪ್ರತಿಕ್ರಿಯೆಗೆ ಧನ್ಯವಾದಗಳು.

@ದಿನಕರ,
ನನ್ನ ಬ್ಲಾಗಿಗೆ ಸ್ವಾಗತ.
ಹೌದ್ರಿ. ಪ್ರಶ್ನೆಗಳು ಇನ್ನೂ ಬಹಳಷ್ಟು ಇದೆ. ಕೇಳುವುದಕ್ಕೆ ಮಾತು ಹೊರಳುತಿಲ್ಲ.
ಈ ವೃತ್ತಿಯ ಸೌಕರ್ಯಗಳು ಬಹಳಷ್ಟು ಇದೆ. ಆದರೆ ಅವರವರ ಸ್ವಾರ್ಥಕ್ಕಾಗಿ ಉಪಯೋಗಿಸುತ್ತಿರುವುದು ಖೇದದ ವಿಷಯ.