Monday, June 22, 2009

ಪ್ರಶ್ನೆ, ಜಿಜ್ಞಾಸೆ - ಪುನರಾವರ್ತನೆ

ಓದುವ ವಯಸ್ಸಿನಲ್ಲಿ, ಪಠ್ಯ ಪುಸ್ತಕದಲ್ಲಿ ಇದ್ದಿದ್ದನ್ನ ಓದಿ, ಸ್ವಲ್ಪ ಮಟ್ಟಿಗೆ ತಿಳಿದು, ಮುಂದೆ ನಾನೇ ಆರಿಸಿಕೊಂಡ ಕ್ಷೇತ್ರದಲ್ಲಿ ಕಾಲಿಟ್ಟು, BE ಮುಗಿಸಿ ಇಷ್ಟಾ ಪಟ್ಟು ಸೇರಿದ ವೃತ್ತಿಯಲ್ಲಿ ನನ್ನ ಮೆದುಳನ್ನು ಪೂರ್ಣವಾಗಿ ಉಪಯೋಗಿಸಿದೆ. ಈಗ ಸ್ವಲ್ಪ ಸೆಟ್ಟೆಲ ಆದ ನಂತರ, ವೃತ್ತಿಯಲ್ಲದೆ ಬೇರೆಯ ವಿಷಯಗಳಲ್ಲೂ ಆಸಕ್ತಿ ಜಿಜ್ಞಾಸೆ ಹುಟ್ಟಿಕೊಳ್ಳುತ್ತಿದೆ. ಆಹಾ ... ಇದರ ಬಗ್ಗೆ ನಾನು ಮುಂಚೆಯೇ ಯಾಕೆ ತಿಳಿದುಕೊಳ್ಳಲು ಪ್ರಯತ್ನ ಮಾಡಲಿಲ್ಲ ಎಂದು ಯೋಚಿಸಿದಾಗ, ನನಗೆ ಅನಿಸಿದ್ದು ಹೀಗೆ.

ನಮಗೆ ಹೊಟ್ಟೆ ಕಾಲಿಯಾಗಿರಬೀಕಾದರೆ ಮಾತ್ರವೇ ಯೇನಾದರೂ ತಿನ್ನಬೇಕೆನಿಸುತ್ತದೆ. ಹೊಟ್ಟೆ ತುಂಬಿದ ನಂತರ ಬೇರೆ ವಿಷಯಗಳ ಯೋಚನೆ. ಹಾಗೆಯೇ, ಹಲವು ವರುಷಗಳಿಂದ ನನ್ನ ಮೆದುಳು technical ವಿಷಯಗಳ ಕೊರತೆಯಿಂದಾಗಿ ಅದರ ಬಗ್ಗೆಯೇ ಚಿಂತನೆ, ಇದನ್ನು ಪರಿಹರಿಸಿಕೊಳ್ಳುವ ಉತ್ಸಾಹ. ಈಗ ಇಂತಹ ವಿಷಯಗಳಿಂದ ನನ್ನ ಮೆದುಳು ತುಂಬಿ, ಬೇರೆ ಬೇರೆ ವಿಷಗಳ ಬಗ್ಗೆ ಜಿಜ್ಞಾಸೆ ಹುಟ್ಟಿಕೊಳ್ಳುತ್ತಿದೆ. ಇಂತಹ ಜಿಜ್ಞಾಸೆಯಿಂದ ಹುಟ್ಟುವ ಪ್ರಶ್ನೆಗಳೇ ಜ್ಞಾನಮಾರ್ಗದ ಮೊದಲನೆಯ ಮೈಲುಗಲ್ಲು ಎಂದು ನನ್ನ ಅಭಿಪ್ರಾಯ. ಈ ಪ್ರಶ್ನಾ ಪ್ರವೃತ್ತಿಯ ಬಗ್ಗೆಯೇ ಜಿಜ್ಞಾಸೆ ಉಂಟಾಗಿ ಅದರ ಬಗ್ಗೆ ತಿಳಿದದ್ದು ಹೀಗಿದೆ.

ಪ್ರಶ್ನೆ ಕೇಳುವುದು ಮನುಷ್ಯನ ಮನಸ್ಸಿನ ಮೂಲ ಪ್ರವೃತ್ತಿ. ಇದನ್ನು ಹತ್ತಿಕ್ಕುವುದು ಒಂದು ವಿಧವಾದ ಆತ್ಮಹತ್ಯೆಯೇ. ಮಾನವನು ಕೀಳುವ ಪ್ರಶ್ನೆಗಳಿಗೆಲ್ಲ ಉತ್ತರ ಸಿಕ್ಕಿಲ್ಲ. ಹಾಗೆಂದು ಅದನ್ನು ಬಿಡುವಂತೆಯೂ ಇಲ್ಲ. ಅಲ್ಲದೆ ಎಲ್ಲರಿಗೂ ಹೀಗೆ ಪ್ರಶ್ನೆ ಕೇಳುವುದರಲ್ಲಿ ರುಚಿ ಉಂಟಾಗಲಾರದು. ಎಲ್ಲಿಯೋ ಸಾವಿರದಲ್ಲಿ ಒಬ್ಬನು ಸಿದ್ದಿಗಾಗಿ ಹಂಬಲಿಸುತ್ತಾನೆಂದೂ, ಅಂತಹ ಸಾವಿರದಲ್ಲಿ ಎಲ್ಲೋ ಒಬ್ಬನಿಗೆ ಸಿದ್ಧಿಯಾಗಬಹುದೆಂದೂ ಬಗವಂತನೇ ಗೀತೆಯಲ್ಲಿ ಹೇಳಿದ್ದಾನೆ (VII-3). ಆದುದರಿಂದ ಸಮಂಜಸವಾದ ಪ್ರಶ್ನೆಗಳನ್ನು ಕೇಳುವುದು ಮಹಾತ್ಕಾರ್ಯವೇ ಸರಿ. ಭಾರತೀಯ ತತ್ತ್ವಶಾಸ್ತ್ರದಲ್ಲಿ ಈ ಪ್ರವೃತ್ತಿಗೆ ಬಹಳ ಗೌರವವಾದ ಸ್ಥಾನವಿದೆ. ಪ್ರಶ್ನೆ ಮಾಡದವನಿಗೆ ತತ್ತ್ವೋಪದೇಶ ಮಾಡಕೂಡದೆಂದೂ, ಪ್ರಶ್ನೆ ಸರಿಯಾದ ಕ್ರಮದಲ್ಲಿ ಮಾಡದವನಿಗೆ ಹೀಳಕೂಡದೆಂದೂ ಮನುಸ್ಮೃತಿಯಲ್ಲಿ ಹೇಳಿದೆ. ಒಂದು ಇಡೀ ಉಪನಿಷತ್ತಿಗೆ ಹೆಸರು "ಪ್ರಶ್ನೋಪನಿಶತ" ಎಂದಿದೆ.

ಆದರೆ ಕೆಲವರು ಪ್ರಶ್ನೆ ಕೇಳುವ ಪ್ರವೃತ್ತಿಯೇ ತಪ್ಪೆಂದು ಹೇಳುತ್ತಾರೆ. ಜ್ಞಾನವನ್ನು ಮೌನ ಮಾರ್ಗದಿಂದಲೂ ಸಾಧಿಸಬಹುದೆಂದೂ ತಿಳಿದಿರುವುದು ದುರ್ದೈವದ ಸಂಗತಿ. ಪ್ರಶ್ನೆ ಕೇಳುವುದು ಒಂದು ವಿಧವಾದ ಅಗ್ನಿಯನ್ನು ಹೊತ್ತಿಸಿದಂತೆ. ಇಂದು ಕೇಳುವ ಪ್ರಶ್ನೆಗೆ ಇಂದೇ ಉತ್ತರ ಸಿಗಲಿಲ್ಲವೆಂದು ಈ ಅಗ್ನಿಯನ್ನೇ ಆರಿಸತಕ್ಕದ್ದಲ್ಲ. ಅಗ್ನಿಯು ದೀಪ್ತವಾಗಿದ್ದರೆ ತನಗೆ ತಾನೇ ಬೆಳಕಾಗಿ ಉತ್ತರವೂ ಕಾಲಾಂತರದಲ್ಲಿ ದೊರೆಯುವುದು. ಆದ್ದರಿಂದ ಪ್ರಶ್ನೆ ಕೇಳುವ ಪ್ರವೃತ್ತಿಯನ್ನು ಬಿಡಬೇಡಿ.

6 comments:

Prabhuraj Moogi said...

ಬಹಳ ಚೆನ್ನಗಿದೆ ನಿಮ್ಮ ಬ್ಲಾಗ ಪ್ರತೀ ಪೊಸ್ಟ ವಿಭಿನ್ನ, ವೀಕೆಂಡಿಗೆ ಓದಿ ಇನ್ನೂ ಧೀರ್ಘವಾಗಿ ಪ್ರತಿಕ್ರಿಯಿಸುತ್ತೇನೆ.

ರಾಜೀವ said...

ಪ್ರಭು ಅವರೆ, ನನ್ನ ಬ್ಲಾಗಿಗೆ ಸ್ವಾಗತ.
ಇತ್ತೀಚಿಗೆ ನನ್ನ ತಲೆಯಲ್ಲಿ ವಿಭಿನ್ನವಾದ ಯೋಚನೆಗಳು. ಆದ್ದರಿಂದ ಪ್ರತೀ ಬರಹವೂ ವಿಭಿನ್ನ.
ಕೆಲವೊಂದರಲ್ಲಿ ಅರ್ಥವೇ ಇರುವುದಿಲ್ಲ. ಹಾಗೇ ಗೀಚಿರುತ್ತೇನೆ.
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ರಾಜೀವ್ ಸರ್,

ಪ್ರಶ್ನೆ ಕೇಳುವ ವಿಚಾರದಲ್ಲಿ ಎಷ್ಟೆಲ್ಲಾ ಸಂಗತಿಗಳು ಆಡಗಿದೆಯಲ್ಲಾ....ನಿಮ್ಮ ಬರವಣಿಗೆಯೂ ಸ್ವಲ್ಪ ಬೇರೆದಿಕ್ಕಿನಲ್ಲಿ ಆಲೋಚಿಸುವಂತಿದೆ....ಇರಲಿ...ಬಿಡುವು ಮಾಡಿಕೊಂಡು ಉಳಿದ ಲೇಖನವನ್ನು ಓದುತ್ತೇನೆ...

ಧನ್ಯವಾದಗಳು.

Ittigecement said...

ರಾಜೀವ....

ಪ್ರಶ್ನೆ ಕೇಳುವ ಪ್ರವ್ರತ್ತಿಯನ್ನು ಹತ್ತಿಕ್ಕುವದು ಆತ್ಮಹತ್ಯೆಯ ಪ್ರತೀಕ....
ನಮ್ಮ ಕನ್ನಡ ಶಾಲೆಯ ಮೇಷ್ಟ್ರು ನಮಗೆ ಪ್ರಶ್ನೆ ಕೇಳಲು ಪ್ರೋತ್ಸಹಿಸುತ್ತಿದ್ದರು..
ನಾವು ನಿರ್ಭಿಡೆಯಿಂದ ಕೇಳುತ್ತಿದ್ದೇವು..
ಅವರನ್ನು ಎಷ್ಟು ನೆನಪಿಸಿಕೊಂಡರೂ ಸಾಲದು...

ನಿಮ್ಮ ವಿಚಾರ ಧಾರೆಗಳು ಇಷ್ಟವಾಗುತ್ತವೆ..

ಹಸಿವು ಅರೋಗ್ಯದ ಲಕ್ಷಣ..

ಜ್ಞಾನದ ಹಸಿವು ನಮಗೆಲ್ಲ ಅತ್ಯಗತ್ಯ...

ಹಸಿವು ಒಂದುಕಡೆ ಇರಬೇಕು...
ದುಡಿತ ಇನ್ನೊಂದುಕಡೆ....
ಎರಡರ ಮಧ್ಯೆ ಎಲ್ಲೋ ಒಂದು ಹೊಂದಾಣಿಕೆ..
ನಾವೇ ಮಾಡಿಕೊಳ್ಳ ಬೇಕು ಅಲ್ಲವಾ...?

ಧನ್ಯವಾದಗಳು...

Prabhuraj Moogi said...

ಬ್ಲಾಗ ಅಂದ ಮೇಲೆ ವಿಭಿನ್ನವಾಗಿರಲೇಬೇಕು, ಪ್ರಶ್ನೇ ಕೇಳೊ ಪ್ರವ್ರುತ್ತಿ ಇನ್ನೂ ನಾನು ಉಳಿಸಿಕೊಂಡಿದ್ದೇನೆ, ಕೆಳಬೇಕು ಸರ್ ಪ್ರಶ್ನೆ ಕೇಳಿದಾಗಲೇ ಉತ್ತರ ಸಿಗೋದು... ಅದಕ್ಕೆ ಅಂತಾರೆ ಪ್ರಶ್ನೇ ಕೇಳೊನು ಆ ಸಮಯಕ್ಕೆ ಪೆದ್ದನಾಗಿ ಕಾಣಬಹುದು ಆದರೆ ಕೇಳದವನು ಯಾವಾಗಲೂ ಪೆದ್ದನಾಗಿಯೇ ಇರ್ತಾನೆ ಅಂತ...

ರಾಜೀವ said...

ಶಿವು ಅವರೇ,
ನನ್ನ ಬರವಣಿಗೆ ಬೇರೆ ದಿಕ್ಕಿನಲ್ಲಿ ಸಾಗಿದರೂ ಪರವಾಗಿಲ್ಲ. ದಿಕ್ಕಾಪಾಲಾಗದೆ ಓಡದಿದ್ದರೆ ಸಾಕು.

ಪ್ರಕಾಶ್ ಅವರೇ,
ನೀವು ಹೇಳುವುದು ಸರಿ. ನಮ್ಮ ಜ್ಞಾನದ ಹಸಿವು ಹಾಗೆಯೇ ಉಳಿಯಲಿ.

ಪ್ರಭು ಅವರೇ,
ಪರೋಕ್ಷವಾಗಿ ನನ್ನನ್ನು ಪೆದ್ದ ಅಂದಿದ್ದು ಅರ್ಥವಾಯಿತು ;)
ಇದೇ ರೀತಿ ಬರುತ್ತಿರಿ.