Friday, July 3, 2009
ಆಚಾರದಲ್ಲಿ (ಅಪ)ನಂಬಿಕೆ
ಹೀಗೇ ಒಂದು ಸಂವಾದ ...
"ಲೋ ಯೇನೋ ಮಾಡ್ತಿದಿಯಾ?"
"ಹೇಗೆ ಪಂಚಾಗ ನೋಡ್ತಿದ್ದೆ."
"ನೀನೂ ಎಲ್ಲದಕ್ಕೂ ಮುಹೂರ್ತ ನೂಡೂದಕ್ಕೆ ಶುರು ಮಾಡಿದಿಯಾ?"
"ಹಾಗಲ್ವೋ ಈ ಮಾಸದಲ್ಲಿ ಒಂದು ಸೂರ್ಯಗ್ರಹಣ ಬರತ್ತಂತೆ. ಯಾವತ್ತು ಅಂತ ನೋಡ್ತಿದ್ದೆ."
"ಯಾವತ್ತು ಬಂದ್ರೆ ಯೇನು? ನಿನಗೆ ಯಾವಾಗಿಂದ ಖಗೋಳಶಾಸ್ತ್ರದ ಹುಚ್ಚು?"
"ಇಲ್ಲ ಕಣಯ್ಯ. ಅವತ್ತು ಆಫ್ಫೀಸ್ ಇದ್ದರೆ ಹೇಗೆ ಯೇನು ಅಂತ ನೋಡ್ತಿದ್ದೆ."
"ಆಫ್ಫೀಸ್ ಇದ್ದರೆ ಯೇನು?"
"ಆಫ್ಫೀಸ್ನಲ್ಲಿ ಗ್ರಹಣ ಮೋಕ್ಷ ಸ್ನಾನ ಮಾಡಕ್ಕಾಗತ್ತಾ? ಎಷ್ಟು ಗಂಟೆಗೆ ಊಟ ಮಾಡ್ಬೇಕು ಅವತ್ತು, ಯೇನು, ಎತ್ತ ಅಂತ ನೋಡ್ತಿದ್ದೆ."
"ನೀನು ಇದೆನ್ನೆಲ್ಲ ನಂಬ್ತಿಯಾ? ಭೂಮಿ, ಚಂದ್ರ, ಸೂರ್ಯ ಇದೆಲ್ಲ ಸೂರ್ಯವ್ಯೂಹದಲ್ಲಿ ಸಂಚರಿಸುವ ವಸ್ತುಗಳು ಅಷ್ಟೇ. ಅದು ಒಂದು ರೀತಿಯ ಸಮರೇಖೆಯಲ್ಲಿದ್ದಾಗ ಗ್ರಹಣ ಸಂಭವಿಸತ್ತೆ. ಇದಕ್ಕೂ ಊಟಕ್ಕೂ ಸ್ನಾನಕ್ಕೂ ಏನಯ್ಯಾ ಸಂಭಂದ?"
......
......
ಹೀಗೇ ಮತ್ತೊಂದು ಸಂವಾದ.
"ಎಷ್ಟು ಹೊತ್ತೂ ನಿಂದು. ಬೇಗ ಬಾರೋ."
"ಒಂದು ೧೦ ನಿಮಿಷ ಇರು. ಸಂಧ್ಯಾವಂದನೆ ಮುಗಿಸಿ ಬರ್ತೀನಿ."
"ಯಾಕ ಮಾಡ್ಬೇಕೋ ಇದನ್ನೆಲ್ಲಾ. ಸುಮ್ನೆ ಟೈಮ್ ವೇಸ್ಟು."
"ನಮ್ಮಪ್ಪ ನನಗೆ ಉಪನಯನ ಮಾಡಿದ ತಪ್ಪಿಗಾದ್ರೂ ಮಾಡ್ಬೇಕು. ಸ್ವಲ್ಪ ಹೊತ್ತು ಸುಮ್ನಿರು."
"ಒಂದು ದಿನ ಸಂಧ್ಯಾವಂದನೆ ಮಾಡದೆ ಇದ್ರೆ ಯೇನಾಗತ್ತೆ?"
......
......
ಈ ರೀತಿಯ ಸಂವಾದಗಳಲ್ಲಿ ನೀವೂ ಸಹ ಪಾತ್ರದಾರಿಗಳಾಗಿದ್ದಿರಬಹುದು ಅಲ್ಲವೇ? ನಮ್ಮ ಧರ್ಮದಲ್ಲಿ ಸಹಸ್ರಾರು ಆಚರಣೆಗಳು, ಪದ್ಧತಿಗಳು ನಾವು ಕಾಣುತ್ತೇವೆ. ಆಚರಣೆಗಳಲ್ಲೂ ಕೂಡ ಸುರಾಚಾರ ಅಥವಾ ದುರಾಚಾರ ಎಂಬ ಭಗೆಗಳುಂಟು. ಆದರೆ ಇವತ್ತಿನ ಪರಿಸ್ಥಿತಿಯಲ್ಲಿ ಯಾರಿಗೂ (ಹೆಚ್ಚು ಜನರಿಗೆ) ಯಾವ ಆಚರಣೆಗಳಲ್ಲೂ ನಂಬಿಕೆಯಿಲ್ಲ. ಹಾಗೆಂದರೆ ಇದರ ಬಗ್ಗೆ ತಿರಸ್ಕಾರ ಭಾವನೆ ಇದೆ ಅಂತಲ್ಲ. ಆ ಆಚರಣೆಯ ಫಲ ಯೇನು? ಯಾಕೆ ಮಾಡಬೇಕು? ಯೇನು ಪ್ರಯೋಜನ? ಎಂದು ತಿಳಿಯದೆ ಅದರ ಬಗ್ಗೆ ನಂಬಿಕೆ ಇಡುವುದಿಲ್ಲ. ಇದು ತಪ್ಪು ಎಂದು ನಾನು ಹೇಳುವುದಿಲ್ಲ. ಒಂದು ವಿದದಲ್ಲಿ ಇದು ಸರಿಯೇ. ಹೀಗಿದ್ದರೆ ಮಾತ್ರ ಅಲ್ಲವೇ ಆಚರಣೆಗಳ ಬಗ್ಗೆ ಸಂಷೋದನೆ ನಡೆಸಿ ಅದರ ಫಲ-ವಿಫಲ, ಅನುಕೂಲ-ಅನಾನುಕೂಲಗಳನ್ನು ಕಂಡು ಹಿಡಿಯಲು ಸಾದ್ಯ?
ಆದರೆ ಎಲ್ಲವನ್ನೂ ತಿಳಿದೇ ಮಾಡುವುದು ಎಂದು ಹೇಳಿದರೆ, ಹಲವಾರು ಆಚರಣೆಗಳು ನಮ್ಮ ಮುಂದಿನ ಪೀಳಿಗೆಗೆ ಸಿಗುವುದೇ ಇಲ್ಲ. ಇದರ ಬಗ್ಗೆ ಹೆಚ್ಚು ಚರ್ಸಿಸುವ ಮುಂಚೆ, ದಿನನಿತ್ಯದಲ್ಲಿ ಕಂಡು ಬರುವ ಕೆಲವೊಂದು ಆಚರಣೆಗಳನ್ನು ಮತ್ತು ಅದರ ವೈಜ್ನಾನಿಕ ಸಮಜಾಯಿಷಿಗಳನ್ನು ನೋಡೋಣ.
ಬೆಳಗ್ಗೆ ಎದ್ದ ತಕ್ಷಣ ಎದ್ದು ಕೂತು "ಕರಾಗ್ರೆ ವಸತಿ ಲಕ್ಷ್ಮಿ ...." ಎಂಬ ಶ್ಲೋಕವನ್ನು ಹೇಳಬೇಕು. ನಂತರ ಬೇರೆಯ ಕೆಲಸ. "ಯಾಕೆ?" ಯಾರಾದರೂ ಹೆಚ್ಹು ಹೊತ್ತು ಮಲಗಿ, ಆ ಮಲಗಿರುವ ಸ್ಥಿತಿಯಿಂದ ತಕ್ಷಣ ನಿಂತು ನಡೆದಾಗ, ಅವನ ಹೃದಯದ ಒತ್ತಡ ಹೆಚ್ಚಾಗುತ್ತದೆ. ೨ ನಿಮಿಷ ಕೂತಿದ್ದರೆ, ಹೃದಯದ ಒತ್ತಡ ಕ್ರಮೇಣವಾಗಿ ಹೆಚ್ಚಾಗುತ್ತದೆ, ಇದ್ದಕ್ಕಿದ್ದಹಾಗೆ ಅಲ್ಲ. ಹೃದಯ ಆಘಾತದಿಂದ ಸತ್ತವರಲ್ಲಿ, ಶೇಕಡಾ ೨೩ರಶ್ಟು ಜನ ಸತ್ತದ್ದು, ಮಲಗಿರುವ ಸ್ಥಿತಿಯಿಂದ ತಕ್ಷಣ ನಿಂತು ನಡೆದಾಗ. ಇದು ಮೂಢನಂಬಿಕೆಯೂ ಅಥವಾ ಮನುಷ್ಯ ವಿಜ್ಞಾನಶಾಸ್ತ್ರವೋ? "ಸರಿ ಹಾಗಾದ್ರೆ, ದಿನಾ ಬೆಳಗ್ಗೆ ೨ ನಿಮಿಷ ಹಾಸಿಗೆಯಲ್ಲೇ ಕೂತು ಯೇಳುತ್ತೇನೆ. ಆದ್ರೆ ಶ್ಲೋಕ ಗ್ಲೀಕ ಎಲ್ಲ ಹೇಳಲ್ಲ." ಸರಿ ಅಷ್ಟಾದ್ರೂ ಮಾಡು, ನಿನ್ನ ಕರ್ಮ.
ಬೆಳಗ್ಗೆ ಯೇಳಬೇಕಾದರೆ ಕೈಯನ್ನು ನೆಲಕ್ಕೆ ಮುಟ್ಟಿಸಿ, "ಸಮುದ್ರವಸನೆ ದೇವಿ ...." ಎಂದು ಹೇಳಿ, ನಂತರ ಕಾಲನ್ನು ನೆಲಕ್ಕೆ ಇಡಬೇಕು. "ಯಾಕೆ?" ಬಹಳ ಹೊತ್ತು ಹಾಸಿಗೆಯಲ್ಲಿ ಮಲಗಿದರೆ, ಅವನಲ್ಲಿ ಸ್ತಿತಿ ವಿದ್ಯುದಂಶಗಳು (static charges) ಇರುತ್ತದೆ. ನೆಲವನ್ನು ಮುಟ್ಟಿದಾಗ ಈ ವಿದ್ಯುದಂಶಗಳು ಕೈಯಿಂದ ನಿರ್ಗಮನವಾಗುತ್ತದೆ (discharge). ಕಾಲಿನಿಂದ ಆದ ಪಕ್ಷದಲ್ಲಿ ವಾತರೋಗ (arthritis) ಅಥವಾ ನರರೋಗಗಳು (neuro disorders) ಸಂಭವಿಸಬಹುದು. ಇದು ಮೂಢನಂಬಿಕೆಯೂ ಅಥವಾ ವಿದ್ಯುತ್ಶಾಸ್ತ್ರವೂ?
ಊಟ ಮಾಡುವ ಮುಂಚೆ ಭೋಜನ ಮಂತ್ರವನ್ನು ಹೇಳಬೇಕು. "ಯಾಕೆ?" ಭೋಜನ ಮಂತ್ರ ಹೇಳಿದಾಗ, ಹೆಚ್ಚು ಜೊಲ್ಲು (saliva) ಉತ್ಪನ್ನವಾಗಿ ಅದರಲ್ಲಿರುವ ಕಿಣ್ವಗಳು (enzymes) ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.
ಹೀಗೇ ಬಹಳ ಆಚರಣೆಗಳಿಗೆ ವೈಜ್ನಾನಿಕ ರೀತಿಯಲ್ಲಿ ಪ್ರಮಾಣಿಸಲಾಗುತ್ತಿದೆ. ಆದರೆ ಆಧುನಿಕ ವಿಜ್ಞಾನದ ಮಿತಿಯಲ್ಲಿ ನಾವು ಎಷ್ಟು ತಿಳಿದುಕೊಳ್ಳುವ ಸಾದ್ಯತೆಗಳಿದೆ? ಈಗಲೂ ಕೂಡ, ಮೇಲೆ ಹೇಳಿರುವ ಆಚರಣೆಗಳ ಶಾರೀರಿಕ ಉಪಯೋಗಗಳನ್ನು ಹೇಳಿದೆಯೇ ಹೊರೆತು, ಆ ಶ್ಲೋಕ/ಮಂತ್ರಗಳ ಉಪಯೋಗಗಳ ಬಗ್ಗೆ ಅಲ್ಲ. ಅಮೇರಿಕದಲ್ಲಿ ಕೆಲವೊಂದು ಆಪರೇಷನ್ ಥಿಯೇಟರ್ಗಳಲ್ಲಿ ವೇದ ಮಂತ್ರಗಳನ್ನು ಉಪಯೋಗಿಸುತ್ತಾರೆ. ಇದರಿಂದ ಚಿಕಿತ್ಸೆ ಮಾಡಬೇಕಾದರೆ ಹೆಚ್ಚು ಗಮನ ಇರುವುದೆಂದು ಅವರೇ ಒಪ್ಪಿಕೊಳ್ಳುತ್ತಾರೆ. ಆದರೆ ಅದರ ಹಿಂದೆ ಇರುವ ಕಾರಣ ತಿಳಿದಿಲ್ಲ. ನಮ್ಮ ಅಜ್ಜಂದಿರು ಈ ರೀತಿ "ಪ್ರಮಾಣ ಇದ್ದರೆ ಮಾತ್ರ ನಂಬುತ್ತೇನೆ" ಎಂದಿದ್ದರೆ ಯಾರಿಗೆ ನಷ್ಟವಾಗುತ್ತಿತ್ತು? ಇಂತಹ ಆಚರಣೆಗಳನ್ನು ಉಳಿಸುವ ಸಲುವಾಗಿ ಆದರೂ, ಪ್ರಮಾಣವಿಲ್ಲದಿದ್ದರೂ ಪಾಲಿಸುವುದು ಒಳ್ಳೆಯದು ಅಲ್ಲವೇ?
"ಹಾಗಾದರೆ ಸುಮ್ಮನೆ ಕಣ್ಣು ಮುಚ್ಚಿಕೊಂಡು ಎಲ್ಲವನ್ನೂ ಪಾಲಿಸಬೇಕಾ?" ಕಂಡಿತಾ ಬೇಡ. ನಮ್ಮಲ್ಲಿ ಕೆಲವು ಮೂಢನಂಬಿಕೆಗಳು ನಿಜವಾಗಲೂ "ಮೂಢ"ನಂಬಿಕೆಗಳೇ. ನಮ್ಮ ಧರ್ಮದಲ್ಲಿ ಪ್ರಶ್ನೆ ಕೇಳುವ ಅರ್ಹತೆ ಇದೆ, ಅಂತಹ ಪ್ರಶ್ನ-ಪ್ರವೃತ್ತಿಗೆ ಬೆಲೆಯೂ ಇದೆ. ಸುಮ್ನೆ ಕಣ್ಣು ಮುಚ್ಚಿಕೊಂಡು ಯಾವುದನ್ನೂ ಪಾಲಿಸಬೇಕಾಗಿಲ್ಲ. ಆದರೆ ನಾವು ವೀಕ್ಷಿಸುವ ರೀತಿಯನ್ನು ನಾವು ಸ್ವಲ್ಪ ಬದಲಾಯಿಸಬೇಕು. ಮೊದಲು ಆಚರಣೆಯನ್ನು ನಂಬಬೇಕು. ಆಚರಿಸುವ ಮುಂಚೆ "ಯಾಕೆ ಆಚರಿಸಬೇಕು?" ಎಂಬುದರ ಬದಲು "ಯಾಕೆ ಆಚರಿಸಬಾರದು?" ಎಂದು ಕೇಳಿಕೊಳ್ಳುವುದು ಉಚಿತ ಎಂದು ನನ್ನ ಅಭಿಪ್ರಾಯ. "ಯಾಕೆ ಆಚರಿಸಬಾರದು?" ಎಂಬುದಕ್ಕೆ ಉತ್ತರ ಸಿಗದಿದ್ದಲ್ಲಿ ಅದನ್ನು ಪಾಲಿಸಿದರೆ ಒಳ್ಳೆಯದು. ಇದರಿಂದ ನಮಗೆ ತಿಳಿಯದೇ ಪ್ರಯೂಜನವದರೆ ಆಗಲಿ. ನಂತರ ಅದರ ಬಗ್ಗೆ ವಿಚಾರಿಸಿ, ಸಂಷೋದಿಸಿ ಅದರ ಫಲ-ವಿಫಲಗಳನ್ನು ಚರ್ಚಿಸಿದರೆ ಇನ್ನು ಒಳ್ಳೆಯದು.
ಇದು ಕೇವಲ ನನ್ನ ಅಭಿಪ್ರಾಯ. ಎಲ್ಲರೂ ಇದನ್ನು ಒಪ್ಪಬೇಕಾಗಿಲ್ಲ. ಅವರವರ ಭಾವಕ್ಕೆ ಅವರವರ ಭಕುತಿಗೆ.
Subscribe to:
Post Comments (Atom)
15 comments:
ರಾಜೀವ್ ಸರ್,
ಎಂಥ ಉತ್ತಮ ವಿಚಾರ ತಿಳಿಸಿದ್ದೀರಿ...ನಾನು ಪ್ರತಿದಿನ ಬೆಳಿಗ್ಗೆ ನಾಲ್ಕು ಗಂಟೆಗೆ ಏಳುವವನು. ಕೆಲವೊಮ್ಮೆ ಗಡಿಬಿಡಿಯಲ್ಲಿ ಎದ್ದುಬಿಡುತ್ತಿದ್ದೆ...ಸದ್ಯ ಇನ್ನು ಮುಂದೆ ಖಂಡಿತ ಎದ್ದು ಕೂತು "ಕರಾಗ್ರೆ ವಸತಿ ಲಕ್ಷ್ಮಿ ...." ಹೇಳಿಯೇ ನಂತರ ಬೇರೆ ಕೆಲಸ ಮಾಡುತ್ತೇನೆ....
ನಾನು ಕೂಡ ಮೂಡನಂಭಿಕೆಗಳಲ್ಲಿ ನಂಬಿಕೆಯಿಡುವುದಿಲ್ಲ...ಆದ್ರೆ ಹೀಗೆ ಅದನ್ನು ವಿಶ್ಲೇಷಿಸಿದಾಗ ಖಂಡಿತ ಅದರ ಉಪಯೋಗ ಪಡೆದುಕೊಳ್ಳುತ್ತೇನೆ...
ನಿಜಕ್ಕೂ ನಿಮ್ಮ ಈ ಲೇಖನ ಉಪಯುಕ್ತವಾದುದು...
ಧನ್ಯವಾದಗಳು.
ರಾಜೀವ್ ಸರ್, ನಿಮ್ಮ ಅನಿಸಿಕೆ ಸರಿಯಿದೆ. ಹಿಂದಿನವರು ತಂದ ಅನೇಕ ಆಚರಣೆಗಳು ವೈಜ್ನಾನಿಕವಾಗಿದ್ದವು. ಹಾಗೆಂದಮಾತ್ರಕ್ಕೆ ಹಿಂದಿನವರು ಮಾಡಿದ್ದೆಲ್ಲ ಸರಿ ಎನ್ನಲಾಗದು. ಕೆಲವು ಆಚಾರವಿಚಾರಗಳು ಆ ಕಾಲಕ್ಕೆ ಸರಿಯಾಗಿದ್ದವು. ಅವನ್ನು ಈಗಿನ ಕಾಲಮಾನಕ್ಕೆ ಆಚರಿಸಲು ಹೋದರೆ ಆಗುವುದಿಲ್ಲ.
ಉದಾಹರಣೆಗೆ, ಕತ್ತಲಾದ ಮೇಲೆ ಕಸಗುಡಿಸಬಾರದೆನ್ನುವುದು. ಆಗ ವಿದ್ಯುದ್ದೀಪಗಳಿರಲಿಲ್ಲ, ಎಣ್ಣೆ ದೀಪಗಳಲ್ಲಿ ಕತ್ತಲಲ್ಲಿ ಸರಿಯಾಗಿ ಕಾಣುತ್ತಿರಲಿಲ್ಲ. ಕಸ ಗುಡಿಸುವಾಗ ನೆಲದಮೇಲೆ ಹಣ್, ಚಿನ್ನ ಏನಾದರೂ ಬಿದ್ದಿದ್ದರೆ, ಮಂದ ಬೆಳಕಿನಲ್ಲಿ ಗೊತ್ತಾಗದೆ ಕಳೆದುಹೋಗುವ ಸಾಧ್ಯತೆ ಜಾಸ್ತಿ. ಅದಕ್ಕೆ ಅವರು ಕತ್ತಲಾದ ಮೇಲೆ ಕಸಗುಡಿಸಿದರೆ ಲಕ್ಶ್ಮಿ ಮನೆಯಿಂದ ಹೊರಹೋಗುತ್ತಾಳೆ ಎನ್ನುತ್ತಿದ್ದರು. ಈಗಿನ ಪ್ರಖರ ಬೆಳಕಿನ ದಿನಗಳಲ್ಲಿ ಇಂಥಾ ನಂಬಿಕೆಗಳು ಸುಳ್ಳಾಗಿಬಿಡುತ್ತವೆ. ಕತ್ತಲಾದ ಮೇಲೆ ಉಗುರು ಕತ್ತರಿಸಬಾರದು ಎನ್ನುವುದೂ ಈ ಕಾರಣದಿಂದಲೇ.
ಹೀಗೆ ಇನ್ನೂ ಅನೇಕ ನಂಬಿಕೆಗಳು ಕಾಲಕ್ಕೆ ತಕ್ಕಂತೆ ಬದಲಾಗಬೇಕು. ಹಿಂದಿನವರು ಹೇಳಿದ್ದೆಲ್ಲ ಮೂಢನಂಬಿಕೆ ಎನ್ನುವುದು ಎಷ್ಟು ತಪ್ಪೋ, ಅವರು ಹೇಳಿದ್ದೆಲ್ಲ ಸರಿ, ಅಜ್ಜ ಹಾಕಿದ ಆಲದಮರಕ್ಕೇ ನೇಣು ಹಾಕಬೇಕು ಎನ್ನುವುದೂ ಅಷ್ಟೇ ತಪ್ಪು. ಯಾವುದು ಪಾಲಿಸಬೇಕು, ಯಾವುದನ್ನು ಬಿಡಬೇಕು ಎನ್ನುವ ವಿವೇಚನೆ ಇರಬೇಕು
ರಾಜೀವ ಅವರೇ,
ನಿಮ್ಮ ಈ ಲೇಖನ ಓದುತ್ತಾ, ನನಗೆ ನನ್ನ ಅಕ್ಕನ (cousine sister) ನಂಬಿಕೆ ಮೂಡನಂಬಿಕೆಗಳ ಹುಚ್ಚುತನದ ಬಗ್ಗೆ ನೆನಪಾಗಿ ನಗು ಬಂದಿತು. ಇದರ ಬಗೆಗಿನ ವಿವರವನ್ನು ಸಾಧ್ಯವಾದಾಗ ಒಮ್ಮೆ ನನ್ನ ಬ್ಲಾಗಿನಲ್ಲಿ ಬರೆಯುತ್ತೇನೆ.
ಲೇಖನ ಮತ್ತು ವಿಚಾರಗಳು ಚೆನ್ನಾಗಿವೆ!
ಮತ್ತೊಂದು ಮಾತು, ನೀವು ತಪ್ಪು ತಿಳಿಯುವುದಿಲ್ಲ ಎಂದರೆ ನನ್ನ ಅನಿಸಿಕೆಯೊಂದನ್ನು ನಿಮಗೆ ಹೇಳಲಿಚ್ಛಿಸುತ್ತೇನೆ!
ಅದೇನೆಂದರೆ ನಿಮ್ಮ ಬ್ಲಾಗಿನ ಹೆಸರಿನ ಬಗ್ಗೆ! 'ಎನ್ನ ಮಾತು' ಎನ್ನುವ ಹೆಸರನ್ನು ಇಟ್ಟಿದ್ದೀರಾ ಅಲ್ವ ಈ 'ಎನ್ನ' ಎನ್ನುವ ಪದ ಹಳೆಗನ್ನಡದ್ದು.......ಮತ್ತು ಈ ಎನ್ನ ಅನ್ನುವ ಪದ ತಮಿಳಿನಲ್ಲೂ ಇದೆ (ತಮಿಳಿನಲ್ಲಿ ಎನ್ನ ಅಂದರೆ ಏನು ಎಂದರ್ಥ).
ಅದಿರಲಿ, ಕನ್ನಡದ ಪದವನ್ನೇ ವಿಶ್ಲೇಷಿಸಿದರೆ ನೀವಿಟ್ಟಿರುವ ಹೆಸರು ಅರ್ಥಪೂರ್ಣವಾಗಿಲ್ಲ ಎನಿಸುತ್ತಿದೆ.
ಇದರ ಬದಲು ನೀವು, 'ನನ್ನ ಮಾತು' ಅಥವಾ 'ಎನ್ನೊಳಗಿನ ಮಾತು'. ಈ ರೀತಿ ಏನಾದರು ಬದಲಾಯಿಸಿಕೊಂಡರೆ ಚೆನ್ನಾಗಿರುತ್ತೆ. ಇದು ಕೇವಲ ನನ್ನ ಅನಿಸಿಕೆ/ಅಭಿಪ್ರಾಯ ಅಷ್ಟೇ. ಇದರಲ್ಲಿ ತಪ್ಪೇನಾದರೂ ಇದ್ದರೇ ದಯವಿಟ್ಟು ಕ್ಷಮಿಸಿ.
ಆದರೆ ಬೇಸರ ಮಾಡಿಕೊಳ್ಳಬೇಡಿ, if u do not like this suggetion just ignore it please!
ಶಿವುಅವರೆ,
ನನಗೂ ಕೂಡ ಮೂಢನಂಬಿಕೆಗಳಲ್ಲಿ ನಂಬಿಕೆಯಿಲ್ಲ. ಆದರೆ ಎಲ್ಲಾ ಆಚರಣೆಗಳೂ ಮೂಢನಂಬಿಕೆಗಳಲ್ಲ ಎಂಬುದೇ ನನ್ನ ಅಭಿಪ್ರಾಯ.
ಪ್ರತಿಕ್ರಿಯೆಗೆ ಧನ್ಯವಾದಗಳು.
ದೀಪಸ್ಮಿತಅವರೆ,
ನನ್ನ ಬ್ಲಾಗಿಗೆ ಸ್ವಾಗತ.
ಕತ್ತಲಾದಮೇಲೆ ಕಸ ಗುಡಿಸಬಾರದೆಂದರೆ, ಮನೆಯಲ್ಲಿ ಬರಿ ಕಸವೇ ತುಂಬಿರುತ್ತದೆ. ;)
<< ಯಾವುದು ಪಾಲಿಸಬೇಕು, ಯಾವುದನ್ನು ಬಿಡಬೇಕು ಎನ್ನುವ ವಿವೇಚನೆ ಇರಬೇಕು >>
ನಿಜ. ಆದರೆ ಆ ವಿವೇಚನೆ ಬರಿ ವೈಜ್ನಾನಿಕ ಆದಾರದ ಮೇಲೆ ಇರಬಾರದು. ಆಧುನಿಕ ವಿಜ್ಞಾನ ಇನ್ನು ಅಷ್ಟು ಬೆಳದಿಲ್ಲ.
ಪ್ರತಿಕ್ರಿಯೆಗೆ ಧನ್ಯವಾದಗಳು. ಹೀಗೆ ಬರುತ್ತಿರಿ.
SSK ಅವರೆ,
ನಿಮ್ಮ ಅಕ್ಕನ ವಿಷಯ ಬರೆಯಿರಿ. ನಾನೂ ಕಾಯಿತಾ ಇರ್ತೀನಿ.
<< ನೀವು ತಪ್ಪು ತಿಳಿಯುವುದಿಲ್ಲ ಎಂದರೆ >>
ಎಲ್ಲಾದರು ಉಂಟೆ. ನೀವು ಹೇಳುವುದು ಹೆಚ್ಚೋ ನಾನು ಕೇಳುವುದು ಹೆಚ್ಚೋ. ;)
ನನ್ನ ಬ್ಲಾಗಿಗೆ ಒಂದು ಹೆಸರನ್ನಿಡುವುದೇ ಒಂದು ಸಮಸ್ಯೆ ಆಗಿತ್ತು. ಮೊದಲು "ನನ್ನ ಮಾತು" ಎಂದೇ ಇಟ್ಟಿದ್ದೆ. ಅದರಲ್ಲಿ ಏನು ಸ್ವಾರಸ್ಯ ಇಲ್ಲವೆಂದು, ನಂತರ ಬದಲಾಯಿಸಿದೆ.
ಯಾವ ಹೆಸರಿದ್ದರೂ ನೀವು ಬಂದು ಓದ್ತಿರಾ ಅಲ್ವ?
ರಾಜೀವ,,,
ತುಂಬ ಒಳ್ಳೆಯ ಲೇಖನ ವಿಚಾರ ಮಾಡುವಂಥದ್ದು.....ಹೌದು ನಾನು ಕೆಲವೊಂದು ಸಲ ಈ ರೀತಿ ಯೋಚನೆ ಮಾಡ್ತಾ ಇಉತ್ತೇನೆ ,,ಒಂದೊಂದು ಸಲ ನನಗು ಅನ್ನಿಸಿದೆ.... ಹೌದು ವೈಜ್ಞಾನಿಕವಾಗಿ ಇದು ಕರೆಕ್ಟ್ ಎಂದು.... ನೀವು ಹೇಳಿದ ಹಾಗೆ ಕೆಲವೊಂದು ಪದ್ಧತಿಗಳು ಮೂಡ ನಂಬಿಕೆ ಇರಬಹುದು... ಆದರೆ ಕೆಲವು ಅನುಭವದಿಂದ ಬಂದ ಪದ್ಧತಿ ಆಗಿರುತ್ತೆ... ಅದರಲ್ಲಿ ಅನೇಕ ಸತ್ಯ ಗಳು ಇರುತ್ತವೆ
ಉದಾಹರಣೆಗೆ.. ಸಂದ್ಯವಂದನೆ.... ನನಗು ಉಪನಯನವದಾಗ ಮನೆಯವರ ಬಲವಂತಕ್ಕೆ ಮಾಡುತ್ತಾ ಇದ್ದೆ. ಆದರೆ ಯಾಕೆ ಇದನ್ನು ಮಾಡಬೇಕು ಅಂತ ಕೆಲವು ಸಲ ಯೋಚಿಸಿದೆ ಕೂಡ... ಆದರೆ ನಾನು ತಿಳಿದು ಕೊಂದ ವಿಚಾರ ಏನು ಅಂದರೆ,, concentration improve ಆಗೋದು ಹಾಗೆ,,, ನೆಮ್ಮದಿ ಸಿಗೋದು,,, ಇವಾಗ ಎಲ್ಲರೂ ಸ್ವಲ್ಪ ನೆಮ್ಮದಿ ಗೋಸ್ಕರ ಧ್ಯಾನ , ಅದು ಇದೆ ಅಂತ ಮಾಡ್ತಾರಲ್ವಾ ಅದೇ ರೀತಿ ಸಂದ್ಯವಂದನೆ ಇಂದ ನಮ್ಮ ಮನಸು ಸ್ವಲ್ಪ ಹೊತ್ತು ಧ್ಯಾನ ಮಾಡಲಿ ಅಂತ ಎ ಪದ್ಧತಿ ಅಳವಡಿಸಿದ್ದಾರೆ,,, ಗಾಯತ್ರಿ ಮಂತ್ರವನ್ನು ೧೦೮ ಸಲ ೧೦೦೮ ಸಲ ಹೇಳಿ ಅನ್ನೊಂದು ಇದಕ್ಕೆ ಇರಬೇಕು,, ನಮಗೆ ಬೇರೆ ಏನು ಯೋಚನೆ ಬರದೀರ ಒಂದೇ ಒಂದು object ಮೇಲೆ ಮನಸನ್ನು ಕೇಂದ್ರೀಕರಿಸಿ ಧ್ಯಾನ ಮಾಡುವುದು ....
ಹಾಗೆ ನಮ್ಮ ಬ್ರಾಮ್ಹಣರಲ್ಲಿ ಊಟ ಮಾಡುವಾಗ ಒಂದು ಪದ್ಧತಿ ಇದೆ , ಎಲ್ಲರೂ ಕುಲಿತುಕೊಂಡ್ ಇರಬೇಕಾದಾಗ , ಎಲ್ಲ ಎಲೆ ಮೇಲೆ ಬಡಿಸಿದ ಮೇಲೇನೆ ಎಲ್ಲರೂ ಉಟಕ್ಕೆ ಕುಳಿತುಕೊಳ್ಳ ಬೇಕು ಎಂದು... ಹೌದು ಇದು ಖಂಡಿತ ನಿಜ..ಒಟ್ಟಿಗೆ ಊಟ ಸ್ಟಾರ್ಟ್ ಮಾಡಿದಾಗ , ಬಡಿಸುವವರಿಗೂ ಅನುಕೂಲ ಆಗುತ್ತೆ,, ಇನ್ನು ಜಾಸ್ತಿ ಜನ ಇದ್ದರೇ ಒಂದೊಂದೇ ಬ್ಯಾಚ್ ನಲ್ಲಿ ಅನುಕೂಲ ಅಗೋ ಥರ ಊಟ ಮಾಡಬಹುದು... ಇವಾಗ example ಬೇರೆ ಯಾವುದೂ ಮದುವೆ ಮನೆ ಊಟ ದಲ್ಲಿ ಊಟ ಬಡಿಸುತ್ತ ಇರಬೇಕಾದ್ರೆ ತಿನ್ನೋಕೆ ಸ್ಟಾರ್ಟ್ ಮಾಡಿದ್ರೆ... ಕೆಲವರು ಬೇಗ ಊಟ ಮಾಡಿ ಬಿಡುತ್ತಾರೆ ಇನ್ನು ಸ್ವಲ್ಪ ಜನ ನಿದಾನಕ್ಕೆ ಊಟ ಮಾಡಬೇಕಾಗತ್ತೆ,, ಹಾಗೆ ಬಡಿಸುವವರಿಗೂ ತೊಂದರೆ,, ಮತ್ತೆ next ಬ್ಯಾಚ್ ಗೆ ಉಟಕ್ಕೆ ಬರಬೇಕಾದರೆ ಅವರಿಗೂ ತೊಂದರೆ .. ಅದೇ ಎಲ್ಲರೂ ಒಟ್ಟಿಗೆ ಒಂದೇ ಸರಿ ಸ್ಟಾರ್ಟ್ ಮಾಡಿದರೆ ಎಷ್ಟು ಕರೆಕ್ಟ್ ಆಗಿ maintain ಆಗುತ್ತೆ ಅಲ್ವ....
ಒಳ್ಳೆ ಲೇಖನ ರಾಜೀವ...
ಹಿರಿಯರು ಮಾಡಿದ ಕೆಲವು ಶಾಸ್ತ್ರ ಸಂಪ್ರದಾಯಗಳಲ್ಲಿ ಬಹಳ ಗೂಡಾರ್ಥವಿರುವುದ ನಿಜ ಕೆಲವು ಹಾಗೇ ಗೊತ್ತಿಲ್ಲದೆ ಪಾಲಿಸಿಬಿಡುತ್ತೇವೆ, ಕೆಲವುದರ ಮಾಹಿತಿ ನಿಮ್ಮಲ್ಲಿ ಸಿಕ್ಕಿತು. ಹೀಗೆ ಒಂದು ಹಾಸ್ಯ ಸಂಗತಿ ಕೇಳಿ.. ಈ ಒಂದು ಸಂಪ್ರದಾಯದಲ್ಲಿ ಸಮಾರಂಭ ನಡೆಯುವಾಗ ಬೆಕ್ಕು ಕಂಬಕ್ಕೆ ಕಟ್ಟೊ ಶಾಸ್ತ್ರ ಇದೆ, ಅದೇನೊ ಆವತ್ತು ಅವರ ಮನೆಯಲ್ಲಿ ಬೆಕ್ಕು ಗಲಾಟೆ ಮಾಡಿರಬೇಕು ಅವರು ಕಟ್ಟಿರಬೇಕು. ಈಗ ಬೇರೆ ಮನೆಯ ಬೆಕ್ಕು ತಂದು ಕಟ್ಟುತ್ತಾರೆ ಅಂತ ಗೆಳೆಯ ಹೇಳ್ತಿರ್ತಾನೆ... ನಿಜ ಅಲ್ವಾ ಹೀಗೇ ಎಷ್ಟೊ ವಿಚಿತ್ರ ನಂಬಿಕೆಗಳು ಬೆಳೆದು ಬಿಟ್ಟಿವೆ
ಗುರು,
ದೀರ್ಘವಾದ ಪ್ರತಿಕ್ರಿಯೆಗೆ ಧನ್ಯವಾದಗಳು.
<< ಮನೆಯವರ ಬಲವಂತಕ್ಕೆ ಮಾಡುತ್ತಾ ಇದ್ದೆ >>
ಇವಾಗ? ಸ್ವಯಿಚ್ಹೆಯಿಂದ ಮಾಡ್ತಿದೀರ ತಾನೇ?
ಊಟದ ವಿಚಾರವಾಗಿ ನೀವು ಹೇಳಿದ್ದು ನಿಜ. ಅದಕ್ಕೆ ಅಲ್ವ ನಮ್ಮಲ್ಲಿ ಭೋಜನ ಮಂತ್ರವನ್ನು ಎಲ್ಲರು ಒಟ್ಟಿಗೆ ಹೀಲಿ, ನಂತರ ತಿನ್ನಲು ಪ್ರಾರಂಭಿಸುವುದು?
ಪ್ರಭುಗಳೇ,
ಸಂಪ್ರದಾಯಗಳಲ್ಲಿ ಗೋಢಾರ್ಥಗಿಲ್ಲ. ಅದನ್ನು ತಿಳಿದುಕೊಳ್ಳುವ ವಿದ್ವತ್ತು ನಮ್ಮಲ್ಲಿಲ್ಲ ಅನ್ಸತ್ತೆ.
ಬೆಕ್ಕಿನ ಕತೆ ನಾನೂ ಕೇಳಿದ್ದೆ. ಮತ್ತೆ ನೆನಪಿಸಿದಕ್ಕೆ ಧನ್ಯವಾದಗಳು.
ರಾಜೀವ...
ನಮ್ಮ ಹೆಚ್ಚಿನ ಸಂಪ್ರದಾಯದ ಆಚರಣೆಗಳಿಗೆ ಅರ್ಥವುಂಟು..
ಅದನ್ನು ನಾವು ಆರ್ಥಮಾಡಿಕೊಳ್ಳುವ ಗೋಜಿಗೆ ಹೋಗುವದಿಲ್ಲ...
ನಮ್ಮಲ್ಲಿ "ಆಧುನಿಕತೆ" ಇರುವದರಿಂದ...
ಅದನ್ನು ಹೆಚ್ಚಾಗಿ ಹಿರಿಯರಿಗಾಗಿ "ಕಾಟಾಚಾರಕ್ಕೆ " ಮಡುವದು ಹೆಚ್ಚು...
ಮನೆ ಮುಂದೆ ಗೋವಿನ ಸಗಣಿ ಹಾಕಿ ಸಾರಿಸುವದರಿಂದ...
ಮನೆಯ ಮುಂದೆ ತುಳಸಿಕಟ್ಟೆ ಇಡುವದು...
ಹೀಗೆ ಬಹಳಷ್ಟು ಇವೆ..
ಬೆಳಕು ಚೆಲ್ಲುವ ನಿಮ್ಮ ಲೇಖನ ...
ತುಂಬಾ ಚೆನ್ನಾಗಿದೆ...
ನೀವು ಹೇಳುವ ರೀತಿ ಕೂಡ ಚೆನ್ನಾಗಿದೆ...
ಇದನ್ನು ದಯವಿಟ್ಟು ಮುಂದುವರೆಸಿ...
ಅಭಿನಂದನೆಅಗಳು...
Couple of things which i could relate to.....
The other day u said about the psychic effect and the neuro effect...I could get that more profoundly in this article. Also, off late i have fallen in love with our culture.....when I was a kid, amma use to correct my language, n she use to say 'Ashwini Deevathegalu yaalaadhaku ashu anthaare.....' and she wanted me to watch out for what i say!!!.....Now after having read "The Secret".....what i got was...."THOUGHTS BECOMES THINGS"!!!! I was glad, Amma knew 'THE SECRET'!!!.
Since they (namma purvajaru) couldn’t articulate the way we want it to...doesn’t mean its crap!!!! We got to make the sense out of it!!!
I had been to one of my sister’s marriage, there was this peculiar custom, an old lady came up the bride n groom, n here is how the exercise goes,
She poured hands full of grains into the grooms hand, n the groom is suppose to transfer all of his grains to his partner (rather the bride is suppose to pouch it all), the exercise repeated for a couple of times, each time when it over flew n the bride couldn’t accommodate all of it, ajji made some comments n giggled !!!!
Now its bride time, it was kallu uppu this time 'crystal salt'....bride is suppose to transfer all of hers to her partner, n it’s his time to capture all of it!!! Comment and giggled followed here too. ……
I walked to that ajji, and asked her “avva enu iddeela?”……”Shashtra kaaan mari” came the reply. Curiosity kills the rat….it almost killed me too.
I speculated and what I found was something profound…..Agriculture was the only source of income then, it was our 'Dhaanya' and also 'Dhana'. Since the 'Yajamana', had got a new partner, its her responsibility to take care of all the 'Dhana' and 'Dhaanya', It was an exercise of how good our daughter in law/ grand daughter in law, can manage!!!!
There is this saying, “U win a heart through the stomach!!” hence the salt came in (uppigintha ruchi illa u c)….and this exercise was done to check how loyal will this man be to his wife!!!! If the crystal was pouched completely ….he was praised, else ridiculed for not receiving the whole lot of love n affection.
Its Rajivaz blog….let me stop. I know a pebble here will make a difference. I am sure u all will speculate and ponder and accommodate my ideas too!!!!!!
Way to go !!!
ಪ್ರಕಾಶ್ ಸರ್,
ನನ್ನ ಬೆನ್ನು ತಟ್ಟಿ "ಇನ್ನು ಮುಂದುವರೆಸು" ಎಂದು ಪ್ರೋತ್ಸಾಹಿಸಿದ್ದಕ್ಕೆ ದನ್ಯವಾದಗಳು.
ಆಧುನಿಕತೆ ಬೇಕು. ಆದರೆ ಅದು ಸಂಪ್ರದಾಯಗಳಿಗೆ ವಿರುದ್ದವೇ ಆಗಬೇಕೆಂದಿಲ್ಲ.
ನಿಮ್ಮ ಪ್ರೋತ್ಸಾಹವೂ ಮುಂದುವರಿಯಲಿ ;)
Murali,
Thanks for the lengthy compliment ;)
Yes. This was related to my thoughts regarding the neuro effect and psycho effect of mantras. See amma can see things in a different manner which will have more meaning in your life. Thats what the modern education system lack. Thanks for charing your thoughts and experiences.
I think you can put things in a better manner. There are some things that will have more effect when you read compared to when you listen them. There are lots of things we discuss frequently. Why not put those thoughts to writings? It will have more weight when written in kannada. To start with, wy not take murthanna's help to translate to your thoughts in english to kannada?
aaagali yeela hari chithha......
Post a Comment