ಇತ್ತೀಚಿನ ಪ್ರವಾಹದಿಂದ ಉತ್ತರ ಕರ್ನಾಟಕ ಇನ್ನೂ ಸುಧಾರಿಕೊಳ್ಳುತ್ತಿದೆ. ಇನ್ನೆಷ್ಟು ವರುಷಗಳು ಬೇಕೋ ಮೊದಲಿನಂತಾಗಲು! ಹಪಿಯ ಧ್ವಂಸ ನೋಡಿದಾಗ ನೆನಪಾಗುವುದು, ವಿಜಯನಗರದ ಸಾಮ್ರಾಜ್ಯ. ೩೦೦ಕ್ಕೂ ಹೆಚ್ಚು ವರುಷಗಳ ಕಾಲ ಮುಸಲ್ಮಾನ ದಾಳಿಕೋರರ ಆಕ್ರಮಣದಿಂದ ದಕ್ಷಿಣ ಭಾರತವನ್ನು ರಕ್ಷಿಸಿದ ನಮ್ಮ ವಿಜಯನಗರ ಸಾಮ್ರಾಜ್ಯ, ಇತಿಹಾಸದಲ್ಲಿ ಒಂದು ಮಾದರಿಯ ಸಾಮ್ರಾಜ್ಯ ಎಂದೆನಿಸಿಕೊಂಡಿತು. ನಂತರ ಬಂದ ಶಿವಾಜಿ, ವಿಜಯನಗರದ ನಕಾಶೆಯನ್ನು ಪರಿಶೀಲಿಸಿ, ಅದೇ ರೀತಿಯ ಹೈಂದವಿ ಸಾಮ್ರಾಜ್ಯವನ್ನು ಕಟ್ಟಬೇಕೆಂದು ಸತತವಾಗಿ ಪ್ರಯತ್ನಿಸಿದ. ಇಂತಹ ಮೆಚ್ಚುಗೆಯನ್ನು ಪಡೆದ ಕ್ಷೇತ್ರ ಮತ್ತೆ ಚೇತರಿಸಿಕೊಳ್ಳಲೇ ಇಲ್ಲ.
ರಮರಾಯನನ್ನು ಮೋಸದಿಂದ ಸೋಲಿಸಿ, ವಿಜಯನಗರವನ್ನು ತನ್ನ ಕೈವಷಕ್ಕೆ ತೆಗೆದುಕೊಂಡ ಸುಲ್ತಾನರು, ೫ ತಿಂಗಳು ಸತತವಾಗಿ ಲೋಟಿಮಾಡಿ, ದೇವಾಲಯಗಳನ್ನು ಕೆಡವಿದರೂ, ಉಳಿದು ನಿಂತ ಅವಶೇಷಗಳು ಕೂಡ, ವಿಜಯನಗರದ ವೈಭವವನ್ನು ಕೂಗಿ ಹೇಳುತ್ತಿದೆ. ವಿಜಯನಗರದ ಸಿರಿವಂತಿಕೆ ಎಂದ ಕೋಡಲೇ ನಮ್ಮ ತಲೆಗೆ ತೋರುವುದು ಕೃಷ್ಣದೇವರಾಯ. ಕೃಷ್ಣದೇವರಾಯ ವಿಜಯನಗರದ ಪಟ್ಟಕ್ಕೆ ಏರಿದ್ದು ೧೫೦೯ ನಲ್ಲಿ. ಅಂದರೆ ಸೆರಿಯಾಗಿ ೫೦೦ ವರುಷಗಳ ಹಿಂದೆ. ಇದು ಕನ್ನಡಿಗರಿಗೆ ಮಾತ್ರವಲ್ಲ ಇಡೀ ಭರತಕ್ಕೆ, ಭಾರತೀಯರಿಗೆ ಸಂಭ್ರಮದ ನೆನಪು.
ತಾನು ಪಟ್ಟಭಿಷಿಕ್ತನಾದ ಒಡನೆ ಕೃಷ್ಣದೇವರಾಯ ತನ್ನ ರಾಜ್ಯವನ್ನು ಬಲಪಡಿಸುವ ಕೆಲಸಕ್ಕೆ ತೊಡಗಿದ. ನೆರೆಹೊರೆಯ ರಾಜ್ಯಗಳು ತನ್ನ ರಾಜ್ಯದತ್ತ ಕಣ್ಣೆತ್ತಿಯೂ ನೋಡದಂತ ಸನ್ನಿವೇಶವನ್ನು ನಿರ್ಮಿಸಿದ್ದ. ಒರಿಸ್ಸಾದ ಕಳಿಂಗ ರಾಜ್ಯವನ್ನೂ ಗೆದ್ದು, ಹಂಪಿಯಿಂದ ಸಾವಿರಾರು ಮೈಲು ದೂರದಲ್ಲೂ ಲಕ್ಷಗಟ್ಟಲೆ ಸೈನಿಕರನ್ನು, ಅವರಿಗೆ ಬೇಕಾಗುವ ಸಾಮಗ್ರಿಗಳು, ಹಣಕಾಸು, ಶಸ್ತ್ರಾಸ್ತ್ರ ಎಲ್ಲವನ್ನೂ ಯೋಜಿಸಿದ್ದ. ಭರತಖಂಡದ ಪ್ರತಿಯೊಬ್ಬ ರಾಜನೂ ಬೆಚ್ಚುಬೀಳುವಂತೆ ಮಾಡಿದ್ದ. ಇದು ತನ್ನ ಮೊದಲ ನಾಲ್ಕೈದು ವರುಷಗಳ ಆಡಳಿತದಲ್ಲಿ ಮಾಡಿದ ಕೆಲಸ. ನಂತರ ರಾಜ್ಯದೊಳಗಿನ ಅಭಿವೃದ್ಧಿಯತ್ತ ಗಮನ ಹರಿಸಿದ. ಇದನ್ನು ಭಾರತ ಸ್ವಾತಂತ್ರ್ಯ ಪಡೆದ ಮೊದಮೊದಲ ಕಾಲಕ್ಕೆ ಹೋಲಿಸಿದರೆ, ನಮ್ಮ ದೇಶದ ಈಗಿನ ಸ್ಥಿತಿಗೆ ಏನು ಕಾರಣ ಎಂದು ಸ್ಪಷ್ಟವಾಗಿ ಕಾಣುತ್ತದೆ.
ತುಂಗಭದ್ರೆಯಿಂದ ಕಾಳುವೆಗಳ ಮೂಲಕ ಎಲ್ಲೆಡೆ ನೀರು ಹರಿಯುವಂತೆ ಮಾಡಿದ. ಅಂದು ಆರಂಭಗೊಂಡ ಪರಿಪಾಠ ಇಂದಿಗೂ ಮುಂದುವರಿಯುತ್ತಿದೆ ಎಂದು ಕೇಳ್ಪಟ್ಟೆ. ತುಂಗಭದ್ರೆ ಸಾಗಿ ಕೃಷ್ಣೆಯನ್ನು ಸೇರುವಷ್ಟು ಉದ್ದಕ್ಕೂ ರೈತರು ಏರ್ಪಡಿಸಿರುವ ವ್ಯವಸ್ಥೆ ಕಣ್ಣಾರೆ ನೋಡಬಹುದು ಎಂದು ನೋಡಿದವರು ಹೇಳುತ್ತಾರೆ. ಕೃಷ್ಣದೇವರಾಯ ಕಾಲುವೆ, ಜಲಾಶಯಗಳನ್ನು ಮಾತ್ರವಲ್ಲ, ದೇವಾಲಯಗಳನ್ನು, ವಿಧ್ಯಾಸಂಸ್ಥೆಗಳನ್ನು, ಕಲ್ಯಾಣ ಮಂಟಪಗಳನ್ನು, ಮತ್ತಿತರ ಜನೋಪಯೋಗಿ ಸಂಸ್ಥೆಗಳನ್ನು ನಿರ್ಮಿಸಿದ. ಇದರ ಪರಿಣಾಮವೇ ಇಡೀ ರಾಜ್ಯ ಸುಭೀಕ್ಷೆಯಿಂದ ಇದ್ದು ಜನರು ನೆಮ್ಮದಿಯಿಂದ ಬದುಕು ಸಾಗಿಸುತ್ತಿದ್ದರು.
ಕೃಷ್ಣದೇವರಾಯನ ನಂತರ ಬಂದ ವಿಜಯನಗರದ ಅರಸರು, ಇದೇ ರೀತಿ ಮುಂದುವರೆಸಿದ್ದರೆ, ಹಂಪಿ ದುಸ್ಥಿತಿಯನ್ನು ಕಾಣಬೇಕಾಗಿರುತ್ತಿರಲಿಲ್ಲವೋ ಏನೋ. ಇತಿಹಾಸದ ಪುಟಗಳಲ್ಲಿ ಇಷ್ಟೆಲ್ಲಾ ಇದ್ದರೂ, ನಮ್ಮ ಬುದ್ದಿಜೀವಿಗಳು ಕೇಳುವ ಪ್ರಶ್ನೆ "ಕೃಷ್ಣದೇವರಾಯ ಕನ್ನಡಕ್ಕೆ ಏನು ಮಾಡಿದ? ಅವನ ಪುಸ್ತಕಗಳು ತೆಲುಗಿನಲ್ಲಿದೆ ಅಲ್ಲವೇ?". ಕೆಲವರಿಗೆ ವಾದ ಮಾಡುವುದರಲ್ಲೇ ಹೆಚ್ಚುಗಾರಿಕೆ. ಆಂಧ್ರದ ರಮಾರಮಣನ ಆದ ಮಾತ್ರಕ್ಕೆ ಕನ್ನಡರಾಯ ಆಗಬಾರದು ಎಂದು ಅರ್ಥವೇ?
ಹಳೆಯ ನೆನಪು, ಈಗಿನ ಮಾತು, ದೃಷ್ಯಗಳು ನಮ್ಮ ರಕ್ತ ಕುದಿಯುವಂತೆ ಮಾಡುತ್ತದೆ. ಆದರೆ ಅದರಿಂದ ಹೆಚ್ಚಿನ ಪ್ರಯೋಜನವಿಲ್ಲ. ರಾಜಕಾರಿಣಿಗಳನ್ನ ದೂಷಿಸುವುದು ದಂಡ. ಬೆಳೆದ ಮರವನ್ನು ಬಗ್ಗಿಸುವುದು ಕಷ್ಟ. ಹೊಸದಾಗಿ ಬರುವ ಗಿಡಗಳನ್ನು ಸೆರಿಯಾಗಿ ನೋಡಿಕೊಳೋಣ.
9 comments:
ರಾಜೀವ್ ರೇ..
ಹೊಸದಾಗಿ ಬರುವ ಗಿಡಗಳೆಲ್ಲಿವೆ? ರಾಜಕೀಯ ಎನ್ನುವುದು ಎಂಥಾ ಹೊಸಲು ಕೊಚ್ಚೆಯಾಗಿದೆಯೆಂದರೆ, ಅದರಲ್ಲಿ ಮುಳುಗದೇ ಮಾನ, ಪ್ರಾಣ ಉಳಿಸಿಕೊಳ್ಳಲು ನಿಜವಾಗಿ ಛಾತಿ ಬೇಕು ಅಂದರೆ ಯುವ ಜನತೆ ರಾಜಕೀಯ ಪ್ರವೇಶ ಮಾಡಿದರೆ ಪರಿಸ್ಥಿತಿ ಏನಾದರೂ ಸ್ವಲ್ಪ ಸುಧಾರಿಸಬಹುದೇನೋ? ನಿಮ್ಮ ಚಿಂತನೆ ವಿಚಾರಮಾಡುವಂತಿದೆ.......
ಶ್ಯಾಮಲ
ಹಂಪಿಯ ಇತಿಹಾಸ ಓದುತ್ತ ಅಥವಾ ಕೇಳುತ್ತ ಇದ್ದಾರೆ ಮೈ ಜುಂ ಎನ್ನುತ್ತದೆ.. ಇದು ನಮ್ಮ ಹೆಮ್ಮೆಯ ವಿಚಾರ....ಆದರೆ ಇದರಲ್ಲಿ ರಾಜಕೀಯ ಮಾಡುವುದು,, ಸರಿಯಿಲ್ಲ... ಆದರೆ ಏನು ಮಾಡುವುದು,, ಬರಿ ಜಾತಿ ಮೇಲೆ ಅವಲಂಬಿತ ವಾಗಿ ಇದೆ...ನಮ್ಮ ಇ ರಾಜಕೀಯ ಸಮಾಜ....ಒಳ್ಳೆಯ ಚಿಂತನ ಬರಹ
ಗುರು
hmm
@ಶ್ಯಾಮಲ ಮೆಡಮ್,
ಸೃಷ್ಟಿ, ಸ್ಥಿತಿ, ಲಯ - ಈ ಚಕ್ರದಲ್ಲಿ ಎಲ್ಲರೂ ಸಾಗಲೇಬೇಕಲ್ಲವೇ? ಹೊಸ ಚಿಗುರು ಬರಲೇಬೇಕು.
ನೀವು ಹೇಳುವುದು ನಿಜ. ಆದರೆ ರಾಜಕೀಯದ ಹೊರಗೆ ಇದಕ್ಕೆ ಪರಿಹಾರ ಯಾಕೆ ಅಸಾಧ್ಯ?
ಕಷ್ಟದ ಕೆಲಸ ಆದರೆ ಅಸಾಧ್ಯವಲ್ಲ. ಪ್ರತಿಕ್ರಿಯೆಗೆ ಧನ್ಯವಾದ.
@ಗುರು,
ಹಂಪಿಯ ಇತಿಹಾಸ ಮೈ ಜುಮ್ ಎನಿಸುತ್ತದೆ. ನಿಜ.
ಆದರೆ ಅಷ್ಟಕ್ಕೇ ನಿಲ್ಲಬಾರದು. ಇತಿಹಾಸದ ಹೆಮ್ಮೆಯ ಮೆಟ್ಟಲುಗಳಿಂದ ವರ್ತಮಾನವನ್ನು ಕಟ್ಟಬೇಕು.
ಇದಕ್ಕೆ ಏನು ಪರಿಹಾರ ಎಂದು ಸೂಚಿಸುವುದು ಕಷ್ಟ. ಪ್ರಯತ್ನ ಬಿಡಬಾರದಷ್ಟೆ.
@ಬಾಲು,
:-)
ರಾಜೀವ್ ಸರ್,
ಕೃಷ್ಣ ದೇವರಾಯ ನಮ್ಮ ರಾಜ್ಯ ಕಂಡ ಉತ್ತಮ ರಾಜ. ಆತನ ಬಗ್ಗೆ ವಿಜಯನಗರದ ತಿಳಿದುಕೊಳ್ಳಬೇಕಾದ್ದು ತುಂಬಾ ಇದೆ. ೨೦೦೯ಕ್ಕೆ ಐನೂರು ವರ್ಷವಾಗಿರುವ ವಿಚಾರವನ್ನು ತಿಳಿಸಿ ಅದರ ಬಗ್ಗೆ ಮಾಹಿತಿಯನ್ನು ನೀಡಿದ್ದೀರಿ.
ಧನ್ಯವಾದಗಳು.
ಅದೇನೋ ಗೊತ್ತಿಲ್ಲ, ನಂಗೆ ಕೃಷ್ಣದೇವರಾಯ ಎಂಬ ಹೆಸರನ್ನು ಕೇಳಿದಾಕ್ಷಣ ರಾಜ್ ಕುಮಾರ್ ನೆನಪಾಗುತ್ತೆ!! :-)
ಒಳ್ಳೇ ಮಾಹಿತಿಪೂರ್ಣ ಲೇಖನ!
(ಇಲ್ಲಿ word verification)ಗೆ ನಂಗೆ ಸಿಕ್ಕ ಪದ "warman" -- ಕಾಕತಾಳೀಯ)
@ಶಿವು,
ಹೌದು. ಈಗ ಮತ್ತೊಬ್ಬ ಕೃಷ್ಣದೇವರಾಯ ಹುಟ್ಟಿಬರ್ತಾನಾ ಅಂತ ಕಾಯ್ತಿದಿನಿ.
@ಅರುಣ್ ಮೇಷ್ಟ್ರೇ,
word verification ಗೆ ಕೃಷ್ಣದೇವರಾಯನ ಬಗ್ಗೆ ಹೆಚ್ಚು ವಿಷಯ ಗೊತ್ತು.
ನೀವು ನೋಡೆದ್ರೆ ಬರೀ ರಾಜ್ಕುಮರ್ ಮಾತ್ರ ನೆನಪಾಗ್ತಾನೆ ಅಂತ ಹೇಳ್ತಿದೀರಾ? ;-)
gidavaagi baggaddu maravaagi baggalla. gidaviddagale enadru riperi maadbeku. shyamala madom helidante yuva shaktiya pravesha aagbeku raajakeeyakke..
@ಗೌತಮ್,
ನೀವು ಹೇಳಿದ್ದು ನಿಜ. ಆದ್ರೆ ಅದು ಮಾತ್ರ ಸಾಲದು ಅಲ್ವೇ?
ಒಳ್ಳೆಯ ಸಂಸ್ಕಾರದಿಂದ ಸಾಮಾಜಿಕ ಜೀವನ ಸೆರಿಹೋಗದೇ ಇದ್ದಲ್ಲಿ, ರಾಜಕೀಯ ಬದಲಾವಣೆಗಳು ಪ್ರಯೋಜನವಿಲ್ಲ ಅಂತ ನನ್ನ ಅನಿಸಿಕೆ.
Post a Comment